ಹರಪನಹಳ್ಳಿ:
ಪಟ್ಟಣದ ರೆಹಮತ್ ನಗರದ ನಿವಾಸಿ, ಅಗ್ನಿ ಶಾಮಕ ದಳದ ನಿವೃತ್ತ ಉಪನಿರ್ದೇಶಕ ಡಿ.ರಷೀದ್ ಎಂಬುವವರ ಮನೆಯ ಬಾಗಿಲು ಮುರಿದು ಮನೆಯೊಳಗಿನ ಅಲಮೇರಾದಲ್ಲಿದ್ದ 3 ಲಕ್ಷ ನಗದು ಹಣವನ್ನು ಕಳ್ಳರು ದೋಚಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪತ್ನಿಯ ಅನ್ಯಾರೋಗದ ನಿಮಿತ್ತ ಚಿಕಿತ್ಸೆಗಾಗಿ ಏ.24ರಂದು ಬೆಂಗಳೂರಿನ ಖಾಸಗಿ ಆಸ್ಪತ್ರೆ ಕುಟುಂಬ ಸಮೇತರಾಗಿ ತೆರಳಿದ್ದರು. ಮರಳಿ ಮೇ 4ರಂದು ಬೆಳಗ್ಗೆ ಮನೆಗೆ ಬಂದಾಗ ಕಳ್ಳತನ ನಡೆದಿರುವುದು ತಿಳಿದು ಬಂದಿದೆ. ಮನೆಯಲ್ಲಿ ಯಾರು ಇಲ್ಲದನ್ನು ಗಮನಿಸಿ ಕಳ್ಳರು ಮುಂಬಾಗಿಲಿನ ಕದ ಮುರಿದು ಮನೆಯೊಳಗೆ ನುಗ್ಗಿ ಹಣ ದೋಚಿದ್ದಾರೆ ಎಂದು ಡಿ.ರಷೀದ್ ಅವರು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ