ಹಾನಗಲ್ಲ :
ಯುಗಾದಿಯ ಶುಭ ದಿನದಂದು ಹಾವೇರಿ ಲೋಕಸಭೆಯ ಅಭ್ಯರ್ಥಿ ತಮ್ಮ ಮೂರನೆಯ ಬಾರಿಯ ಚುನಾವಣೆಯ ಹ್ಯಾಟ್ರಿಕ್ ಗೆಲುವಿಗಾಗಿ ಹಾನಗಲ್ಲಿನಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸುವ ಮೂಲಕ ಗಮನ ಸೆಳೆದರು.
ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು ಅಭ್ಯರ್ಥಿ ಶಿವಕುಮಾರ ಉದಾಸಿ ಅವರೊಂದಿಗೆ ಉತ್ಸಾಹದಿಂದ ಈ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ತಾಲೂಕಾ ಬಿಜೆಪಿ ಅಧ್ಯಕ್ಷ ನಿಂಗಪ್ಪ ಗೊಬ್ಬೇರ, ಕಾರ್ಯದರ್ಶಿ ಶಿವಲಿಂಗಪ್ಪ ತಲ್ಲೂರ, ರಾಜು ಗೌಳಿ, ರವಿ ಕಲಾಲ, ಉಮೇಶ ಅರಳಿಮರದ, ಪ್ರಶಾಂತ, ಪರಶುರಾಮ ಗೌಳಿ, ಸಂತೋಷ ಟೀಕೋಜಿ, ಧನಂಜಯ ಡಿಂಗ್ರೆ, ಸಂಜು ಕಲಾಲ, ಮಾರುತಿ ತಾಂದಳೆ, ಪ್ರಶಾಂತ ಗೊಂದಿ, ಚಂದ್ರು ಉಗ್ರಣ್ಣನವರ, ಭಜಂತ್ರಿ, ರಾಮಚಂದ್ರ ಬಮ್ಮನಹಳ್ಳಿ ಮೊದಲಾದವರು ಪ್ರಚಾರ ಕಾರ್ಯದಲ್ಲಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ