ಹೂವಿನಹಡಗಲಿ :

ತಾಲೂಕಿನ ಮಾನ್ಯರಮಸಲವಾಡ ಗ್ರಾಮದ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಗದುಗಿನ ಮಂಜುಳ ಮಲ್ಲಣ್ಣ ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ತಾ.ಪಂ. ಇ.ಓ. ಹಾಗೂ ಚುನಾವಣಾಧಿಕಾರಿಗಳಾದ ಸೋಮಶೇಖರ ತಿಳಿಸಿದರು.
ಗಂಗಿಬಾಯಿ ಇವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯ ನಂತರ ಧಾರವಾಡದ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ನಡೆದ ಅಧ್ಯಕ್ಷರ ಆಯ್ಕೆಯ ಚುನಾವಣೆಯಲ್ಲಿ ಗದುಗಿನ ಮಂಜುಳ ಮಲ್ಲಣ್ಣ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಗೊಳಿಸಲಾಗಿದೆ ಎಂದ ಇ.ಓ.ರವರು ಒಟ್ಟು 17 ಗ್ರಾ.ಪಂ.ಸದಸ್ಯರಲ್ಲಿ 16 ಜನ ಉಪಸ್ಥಿತರಿದ್ದು, ಅವಿರೋಧ ಆಯ್ಕೆಗೆ ಸಹಮತ ವ್ಯಕ್ತಪಡಿಸಿದರು ಎಂದರು.
ನೂತನವಾಗಿ ಆಯ್ಕೆಯಗೊಂಡ ಗ್ರಾ.ಪಂ. ಅಧ್ಯಕ್ಷೆಯನ್ನು ಮುಖಂಡರಾದ ಹೆಚ್.ಶ್ರೀಕಾಂತಪ್ಪ, ಎಂ.ಬಸಣ್ಣ, ಕೊಟಗಿ ವೀರಣ್ಣ, ಪುಂಡಿಕಾಳ ಚಂದ್ರಪ್ಪ, ಪಾಲಾಕ್ಷಪ್ಪ, ಲಕ್ಷ್ಮಣನಾಯ್ಕ, ಬಾಲಾಜಿನಾಯ್ಕ, ನೇಮ್ಯಾನಾಯ್ಕ, ಮಲ್ಲೇಶನಾಯ್ಕ, ಹಾಗೂ ತಾ.ಪಂ. ಸದಸ್ಯರಾದ ಎಸ್.ಹಾಲೇಶ, ಶ್ವೇತಾಬಾಯಿ ಹಾಗೂ ಪೂಜಾರ ಮಲ್ಲಣ್ಣ, ಬಿದರಹಳ್ಳಿ ಕೊಟ್ರೇಶ ಸೇರಿದಂತೆ ಸರ್ವಸದಸ್ಯರು ಅಭಿನಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
