ಬಳ್ಳಾರಿ
ಬಳ್ಳಾರಿ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾದ ಮಾಧ್ಯಮ ಕಣ್ಗಾವಲು ಮತ್ತು ಮಾಧ್ಯಮ ಪ್ರಮಾಣೀಕರ ಸಮಿತಿ, ದೂರು ನಿರ್ವಹಣಾ ಕೋಶ ಮತ್ತು ವೋಟರ್ ಹೆಲ್ಪ್ ಲೈನ್, ಸಿ-ವಿಜಿಲ್ ಕೋಶ ಸೇರಿದಂತೆ ವಿವಿಧ ಸಮಿತಿಗಳಿಗೆ ಚುನಾವಣಾ ವೆಚ್ಚ ವೀಕ್ಷಕರಾದ ಮನ್ವೀಶಕುಮಾರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಸ್ಥಾಪಿಸಲಾಗಿರುವ ವಿವಿಧ ಸಮಿತಿಗಳ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಅವರು ಅಗತ್ಯ ಸಲಹೆ-ಸೂಚನೆಗಳನ್ನು ಇದೇ ಸಂದರ್ಭದಲ್ಲಿ ಅಲ್ಲಿನ ಸಿಬ್ಬಂದಿಗೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ವೋಟರ್ ಹೆಲ್ಪ್‍ಲೈನ್, ಸಿ-ವಿಜಿಲ್ ಆ್ಯಪ್ ಕೋಶದಲ್ಲಿ ಕಾರ್ಯವೈಖರಿಯನ್ನು ತಿಳಿದುಕೊಂಡರು. ಮತದಾರರ ಚೀಟಿಗೆ ಸಂಬಂಧಿಸಿದಂತೆ ಇದುವರೆಗೆ ಬಂದಿರುವ ದೂರುಗಳು, ಸಿ-ವಿಜಿಲ್ ಆ್ಯಪ್‍ಗೆ ಸಂಬಂಧಿಸಿದಂತೆ ಇದುವರೆಗೆ ಸಾರ್ವಜನಿಕರಿಂದ ದಾಖಲಾಗಿರುವ ದೂರುಗಳು ಕೈಗೊಂಡಿರುವ ಕ್ರಮಗಳ ಕುರಿತು ತಿಳಿದುಕೊಂಡರು. ಕೆಲ ಸಲಹೆ-ಸೂಚನೆಗಲನ್ನು ನೀಡಿದರು.
ಸಣ್ಣ ಉಳಿತಾಯ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ದೂರು ನಿರ್ವಹಣಾ ಕೋಶಕ್ಕೂ ಭೇಟಿ ನೀಡಿ ಪರಿಶೀಲಿಸಿದ ಅವರು ಇದುವರೆಗೆ ನೀತಿ ಸಂಹಿತೆಗೆ ಸಂಬಂಧಿಸಿದಂತೆ ದಾಖಲಾದ ದೂರುಗಳು,ವಿಲೇವಾರಿ ಕುರಿತು ಮಾಹಿತಿ ಪಡೆದ ಅವರು ಚೆಕ್‍ಪೋಸ್ಟ್‍ಗಳ ಮೇಲೆ ನಿಗಾವಹಿಸಲು ಅಳವಡಿಸಲಾಗಿರುವ ಸಿಸಿಟಿವಿಗಳ ಕಾರ್ಯವೈಖರಿಯನ್ನು ಕಣ್ಣಾರೆ ಪರಿಶೀಲಿಸಿದರು.
ಇದಕ್ಕೂ ಮುಂಚೆ ವೆಚ್ಚ ವೀಕ್ಷಕ ಮನ್ವೀಶಕುಮಾರ ಅವರು ವಾರ್ತಾ ಇಲಾಖೆಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ಕಣ್ಗಾವಲು ಮತ್ತು ಪ್ರಮಾಣೀಕರಣ ಕೋಶಕ್ಕೂ ಭೇಟಿ ನೀಡಿ ಪರಿಶೀಲಿಸಿದರು. ಇದುವರೆಗೆ ಪೇಯ್ಡ್ ನ್ಯೂಸ್‍ಗಳು ದಾಖಲಾಗಿವೆಯೇ ಮತ್ತು ಜಾಹೀರಾತುಗಳ ಪ್ರಮಾಣೀಕರಣಕ್ಕೆ ಬಂದ ಅರ್ಜಿಗಳ ಕುರಿತು ಮಾಹಿತಿ ಪಡೆದರು.
ಅಭ್ಯರ್ಥಿಗಳ ಮತ್ತು ಪಕ್ಷಗಳ ಕರಪತ್ರಗಳ ಅನುಮತಿ, ವಿದ್ಯುನ್ಮಾನ ಸುದ್ದಿವಾಹಿನಿಗಳ ಚರ್ಚಾ ಕಾರ್ಯಕ್ರಮಗಳಿಗೆ ನೀಡಲಾದ ಅನುಮತಿ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಅಭ್ಯರ್ಥಿಗಳು ಪ್ರಚಾರ ಮಾಡುತ್ತಿರುವುದಕ್ಕೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿ ಪಡೆದು ಕೆಲ ಸೂಚನೆಗಳನ್ನು ಈ ಸಂದರ್ಭದಲ್ಲಿ ನೀಡಿದರು.
ಈ ಸಂದರ್ಭದಲ್ಲಿ ಎಂಸಿಎಂಸಿ ನೋಡಲ್ ಅಧಿಕಾರಿ ಬಿ.ಕೆ.ರಾಮಲಿಂಗಪ್ಪ, ವೆಚ್ಚವೀಕ್ಷಕರ ಮೆಲ್ವಿಚಾರಣಾಧಿಕಾರಿ ಮೈಲೇಶ ಬೇವೂರ್, ದೂರು ನಿರ್ವಹಣಾ ಕೋಶದ ಸುಧೀರ್, ಸಿ-ವಿಜಿಲ್‍ನ ನೋಡಲ್ ಅಧಿಕಾರಿ ಸುನೀತಾ, ರವಿ ರಾಠೋಡ, ಹೊನ್ನುರಪ್ಪ, ಶಿವರಾಜ್.ಆರ್.ಎನ್ ಸೇರಿದಂತೆ ಚುನಾವಣಾ ಸಿಬ್ಬಂದಿ ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








