ಮಾರಕಾಸ್ತ್ರಗಳ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ

ಬೆಂಗಳೂರು

       ಚಾಕು, ಚೂರಿ, ಮಚ್ಚು, ಲಾಂಗ್ ಇನ್ನಿತರ ಮಾರಕಾಸ್ತ್ರಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ದಾಳಿ ನಡೆಸಿರುವ ಪಶ್ಚಿಮ ವಿಭಾಗದ ಪೊಲೀಸರು 300ಕ್ಕೂ ಹೆಚ್ಚು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

      ಕಾಟನ್‍ಪೇಟೆಯ ಸುಮಾರು 15 ಅಂಗಡಿಗಳ ಮೇಲೆ ದಾಳಿ ನಡೆಸಿದ ಡಿಸಿಪಿ ರವಿಚೆನ್ನಣ್ಣವರ್ ನೇತೃತ್ವದ ಪೊಲೀಸರು ಅಕ್ರಮವಾಗಿ ಮಾರಾಟ ಮಾಡುತ್ತಿದ್ದ ಬಾಕು, ಚೂರಿ, ಚಾಕು, ಡ್ರಾಗರ್ ಇನ್ನಿತರ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ಜೂಜಾಟದ ಮೇಲೆ ದಾಳಿ

      ಕೆಂಗೇರಿ ವರ್ತುಲ ರಸ್ತೆಯ ಯುನಿವರ್ಸಿಟಿ ಸರ್ಕಲ್ ಬಳಿಯ ಮನೆಯೊಂದರಲ್ಲಿ ಅಂದರ್ ಬಾಹರ್ ಜೂಜಾಟವಾಡುತ್ತಿದ್ದ 8 ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

        ಕೆಂಗೇರಿಯ ಕೃಷ್ಣ, ನಾರಾಯಣ, ವೆಂಕಟರಾಮರೆಡ್ಡಿ, ರಮೇಶ್, ಪ್ರಭುದೇವ, ಮಹೇಶ್, ಮಹದೇವ್, ಮೋಹನ್ ಸೇರಿ 8 ಮಂದಿಯಿಂದ 52 ಸಾವಿರ ನಗದು, ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಪೆಲೀಸರು ತಿಳಿಸಿದ್ದಾರೆ.

ಮೋರಿಗೆ ಬಿದ್ದು ಸಾವು

         ಕುಡಿದ ಅಮಲಿನಲ್ಲಿ ತೂರಾಡಿಕೊಂಡು ಹೋಗಿ ಮೋರಿಗೆ ಬಿದ್ದು ವ್ಯಕ್ತಿವೋರ್ವ ಸಾವನ್ನಪ್ಪಿರುವ ಘಟನೆ ದೇವನಹಳ್ಳಿಯ ಹಳೇ ಬಸ್ ನಿಲ್ದಾಣದ ಸಮೀಪ ನಡೆದಿದೆ.

          ಪ್ರಸನ್ನಹಳ್ಳಿಯ ದೇವರಾಜ್ (45)ಎಂದು ಮೃತಪಟ್ಟವರನ್ನು ಗುರುತಿಸಲಾಗಿದೆ,ಕಂಠಪೂರ್ತಿ ಕುಡಿದು ಆಯತಪ್ಪಿ ಮೋರಿಗೆ ಬಿದ್ದಿದ್ದಾನೆ. ಆಳವಾಗಿದ್ದ ಮೋರಿಯೊಳಗೆ ಬಿದ್ದ ತಕ್ಷಣವೇ ಮೃತಪಟ್ಟಿದ್ದಾನೆ.

            ಮೃತನನ್ನು ನೋಡಿದ ಸ್ಥಳೀಯರು ಮಾಹಿತಿ ನೀಡಿದ ಕೂಡಲೇ ಸ್ಥಳಕ್ಕಾಗಮಿಸಿದ ದೇವನಹಳ್ಳಿ ಪೆಲೀಸರು ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link