ಹೆಚ್ಚುವರಿ ರಕ್ಷಣಾಧಿಕಾರಿ ನೇತೃತ್ವದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಪಥಸಂಚಲನ.

ಚಳ್ಳಕೆರೆ

         ಲೋಕಸಭಾ ಕ್ಷೇತ್ರ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಕೇವಲ 17 ದಿನಗಳು ಬಾಕಿ ಇದ್ದು, ಶಾಂತಿ ಮತ್ತು ಸುವ್ಯವಸ್ಥೆ, ಕಾನೂನು ಪಾಲನೆ ದೃಷ್ಠಿಯಿಂದ ಚಿತ್ರದುರ್ಗ ಜಿಲ್ಲಾ ಹೆಚ್ಚುವರಿ ರಕ್ಷಣಾಧಿಕಾರಿ ಮಹನಿಂಗ ಬಿ.ನಂದಗಾಂವಿಯವರ ನೇತೃತ್ವದಲ್ಲಿ ಭಾನುವಾರ ಮಧ್ಯಾಹ್ನ ಪಥಸಂಚಲನವನ್ನು ನಡೆಸಲಾಯಿತು.

          ನಗರದ ಡಿವೈಎಸ್ಪಿ ಕಚೇರಿಯಿಂದ ಪ್ರಾರಂಭವಾದ ಪಥಸಂಚಲನ ಸೋಮಗುದ್ದು ರಸ್ತೆ, ಜನತಾ ಕಾಲೋನಿ, ಅಂಬೇಡ್ಕರ್ ನಗರ, ಗಾಂಧಿನಗರ, ಎಸ್‍ಆರ್ ರಸ್ತೆ, ಬೆಂಗಳೂರು ರಸ್ತೆ, ಮದಕರಿ ನಗರ, ಹಳೇಟೌನ್, ಪಾವಗಡ ರಸ್ತೆ, ನೆಹರೂ ಸರ್ಕಲ್, ಚಿತ್ರದುರ್ಗ ರಸ್ತೆಯ ಮೂಲಕ ಡಿವೈಎಸ್ಪಿ ಕಚೇರಿ ತಲುಪಿತು.

         ಉರಿಯುವ ಸುಡು ಸುಡು ಬಿಸಿಲಿನಲ್ಲಿ ಪೊಲೀಸ್ ಇಲಾಖೆ ತನ್ನ ಪಥಸಂಚಲನವನ್ನು ನಡೆಸಿದ್ದನ್ನು ಕಂಡ ಸಾರ್ವಜನಿಕರು ಬಿಸಿಲನ್ನು ಲೆಕ್ಕಿಸದೆ ಪೊಲೀಸ್ ಇಲಾಖೆ ಸಾರ್ವಜನಿಕ ಹಿತದೃಷ್ಠಿಯಿಂದ ಪಥಸಂಚಲನ ನಡೆಸಿದ್ದಕ್ಕೆ ಸಂತಸ ವ್ಯಕ್ತ ಪಡಿಸಿದರು. ಕರ್ತವ್ಯ ಪರಿಪಾಲನೆಯಲ್ಲಿ ಪೊಲೀಸ್ ಇಲಾಖೆಗೆ ಇರುವ ಜವಾಬ್ದಾರಿಯ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿ ಬಂದವು.

       ಡಿವೈಎಸ್ಪಿ ಎಸ್.ರೋಷನ್ ಜಮೀರ್, ವೃತ್ತ ನಿರೀಕ್ಷಕ ಎನ್.ತಿಮ್ಮಣ್ಣ, ಪಿಎಸ್‍ಐಗಳಾದ ಕೆ.ಸತೀಶ್‍ನಾಯ್ಕ, ಎನ್.ಗುಡ್ಡಪ್ಪ, ಮೋಹನ್‍ಕುಮಾರ್, ರಘುನಾಥ , ರವಿಕುಮಾರ್, ಪ್ರೊಬೇಷನರಿ ಪಿಎಸ್‍ಐ ಧನಂಜಯ ಹೆಚ್ಚುವರಿ ರಕ್ಷಣಾಧಿಕಾರಿಗಳೊಂದಿಗೆ ಹೆಜ್ಜೆ ಹಾಕಿದರು. ಪಥ ಸಂಚಲನದಲ್ಲಿ ಪೊಲೀಸ್ ಸಿಬ್ಬಂದಿಯ ಜೊತೆಗೆ ವಾಹನಗಳು ಸಹ ಸೈರನ್ನೊಂದಿಗೆ ಚಲಿಸಿದ್ದು ವಿಶೇಷವಾಗಿತ್ತು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link