ಶಿಗ್ಗಾವಿ :
ತಾಲೂಕಿನ ಬಂಕಾಪೂರ ಪಟ್ಟಣದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ದುಷ್ಟರಿಗೆ ಸಿಂಹ ಸ್ವಪ್ನವಾಗಿ ಶಿಷ್ಟರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಹೈದರಾಬಾದ ಆರ್.ಪಿ.ಸಿ.ಆರ್.ಪಿ.ಎಫ್. ಯೋಧರಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪಥ ಸಂಚಲನ ನಡೆಯಿತು.
ಬಂಕಾಪೂರ ಪೊಲೀಸ್ ಠಾಣೆ ಪಿಎಸ್‍ಐ ಸಂತೋಷ ಪಾಟೀಲ ಹಾಗೂ ಸಹಾಯಕ ಕಮಾಂಡೋ ರೂಪೇಶ ನೇತೃತ್ವದಲ್ಲಿ ಬಸ್‍ನಿಲ್ದಾಣದಿಂದ ಪ್ರಾರಂಭವಾದ ಪಥ ಸಂಚಲನ ಆಸಾರಮೊಹಲ್ಲಾ, ಸಿಂಪಿಗಲ್ಲಿ, ಮಂಜುನಾಥ ನಗರ, ಮಂಡಾಲ್‍ಮೊಹಲ್ಲಾ, ಮಾರ್ಡನ್ ಸ್ಕೂಲ್ ರಸ್ತೆ ನಾಡ ಕಛೇರಿ ಸೇರಿದಂತೆ ಪಟ್ಟಣದ ಸೂಕ್ಷ್ಮ ಅತೀ ಸೂಕ್ಷ್ಮ ಪ್ರದೇಶಗಳಲ್ಲಿ ಕ್ಷಿಪ್ರ ಕಾರ್ಯಪಡೆ ಯೋಧರು ಪಥ ಸಂಚಲನ ನಡೆಸಿ ಸಾರ್ವಜನಿಕರಲ್ಲಿ ಶಾಂತಿಯ ಸಂದೇಶ ಸಾರಿದರು, ಕ್ಷಿಪ್ರ ಕಾರ್ಯಪಡೆ ಯೋದರು ಸೇರಿದಂತೆ ಪಟ್ಟಣದ ಪೊಲೀಸ್ ಸಿಂಬಂದಿಗಳು ಪಥ ಸಂಚಲನದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
