ಕೊಟ್ಟೂರು
ಲಾಕ್‍ಡೌನ್ ಘೋಷಿತ ಹಿನ್ನಲೆಯಲ್ಲಿ ಕಂಗೆಟ್ಟಿದ್ದ ಕೊಟ್ಟೂರಿನ ಎಪಿಎಂಸಿ ಮಾರುಕಟ್ಟೆ ಇದೀಗ ಕೃಷಿ ಉತ್ಪನ್ನಗಳ ಮಾರಾಟಕ್ಕೆ ಸರ್ಕಾರ ಅನುಮತಿ ನೀಡಿದ ಹಿನ್ನಲೆಯಲ್ಲಿ ಮತ್ತೇ ತೀವ್ರ ಚಟುವಟಿಕೆ ಕೇಂದ್ರವಾಗಿದ್ದು ರೈತರ ಮತ್ತು ವರ್ತಕರ ಮುಖದಲ್ಲಿ ಮಂದಹಾಸ ಮೂಡುವಂತಾಗಿದೆ.
ಸದಾ ರೈತರ ಕೃಷಿ ಉತ್ಪನ್ನಗಳ ರಾಶಿಗಳ ಭರಾಟೆಯೊಂದಿಗೆ ಹೆಚ್ಚಿನ ವರಮಾನ ತಂದುಕೊಡುತ್ತಿದ್ದ ಮಾರುಕಟ್ಟೆ ಇದೀಗ ಮತ್ತೇ ಮೊದಲಿನ ಸ್ಥಿತಿಗೆ ಬಂದಿದ್ದು ವರ್ತಕರು ಮತ್ತು ರೈತರು ತೀವ್ರ ಬಗೆಯ ವ್ಯಾಪಾರ ವಹಿವಾಟುಗಳು ಕೊಡುಕೊಳ್ಳುವಿಕೆಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ವಾರಕ್ಕೆ ಎರಡು ದಿನ ಪ್ರತಿ ಧಾನ್ಯಕ್ಕೆ ಖರೀದಿ ಆಗಲು ಅವಕಾಶವನ್ನು ಎಪಿಎಂಸಿ ಆಡಳಿತ ಈ ಹಿಂದೆ ನೀಡಿತ್ತು. ಆದರೆ ಬದಲಾದ ಪರಿಸ್ಥಿತಿಯಲ್ಲಿ ರೈತರ ಉತ್ಪನ್ನಗಳಿಗೆ ಪ್ರತಿದಿನ ಮಾರಾಟ ಮಾಡಲು ಅವಕಾಶ ಸೃಷ್ಠಿ ಮಾಡಿದ್ದರಿಂದ ರೈತರ ಶೇಂಗಾ, ನವಣೆ, ಮೆಕ್ಕೆಜೋಳ, ಸೂರ್ಯಕಾಂತಿ, ರಾಗಿ, ಮತ್ತಿತರವುಗಳು ಉತ್ತಮ ಧರಕ್ಕೆ ನಿಗದಿಗೊಂಡು ಮಾರಾಟವಾಗುತ್ತವೆ ಅಲ್ಲದೆ ರೈತರ ಕೈಗೆ ಹಣ ಸೇರುವಂತಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
