ದಾವಣಗೆರೆ:
ಅಶ್ವಕ್‍ವುಲ್ಲಾ ಖಾನ್ ಹಾಗೂ ರಾಮದಾಸ್ ಬಿಸ್ಮಿಲ್ಲಾ ಅವರಿಬ್ಬರೂ ಬ್ರಿಟೀಷರ ವಿರುದ್ಧ ಹೋರಾಡಿದ ಮಹಾನ್ ಕ್ರಾಂತಿಕಾರಿಗಳಾಗಿದ್ದಾರೆಂದು ಜಿಲ್ಲಾ ಎಸ್ಸಿ, ಎಸ್ಟಿ ಹೋರಾಟ ಸಮಿತಿ ಮುಖಂಡ ಆವರಗೆರೆ ವಾಸು ಸ್ಮರಿಸಿದರು
ನಗರದ ಎಸ್.ಎಸ್.ಎಂ. ಕ್ವಾರ್ಟರ್ಸ್‍ನಲ್ಲಿ ಆಲ್ ಇಂಡಿಯಾ ತಂಜಿಮ್ ಇನ್ಸಾಫ್ ಜಿಲ್ಲಾ ಘಟಕದ ವತಿಯಿಂದ ಏರ್ಪಡಿಸಿದ್ದ ಹುತಾತ್ಮರಾದ ಅಶ್ವಕ್‍ವುಲ್ಲಾ ಖಾನ್ ಹಾಗೂ ರಾಮದಾಸ್ ಬಿಸ್ಮಿಲ್ಲಾ ಅವರುಗಳ ಹುತಾತ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅಶ್ವಾಕ್‍ವುಲ್ಲಾ ಖಾನ್, ರಾಮದಾಸ್ ಬಿಸ್ಮಿಲ್ಲಾ, ರಾಜೇಂದ್ರ ಲಹರಿ, ಠಾಕೂರ್ ರೋಷನ್ ಸಿಂಗ್, ಸಚೀಂದ್ರ ಭಕ್ಷಿ, ಚಂದ್ರಶೇಖರ್ ಆಜಾದ್ ಇವರೆಲ್ಲಾ ಸೇರಿ ಹಿಂದೂಸ್ಥಾನ್ ರಿಪಬ್ಲಿಕ್ ಅಸೋಷಿಯೇಷನ್ ನೇತೃತ್ವದಲ್ಲಿ ನಮ್ಮ ದೇಶದ ಸಂಪತ್ತನ್ನೆಲ್ಲ ಟ್ರೇನ್ ಮೂಲಕ ಬ್ರಿಟೀಷ್ ಸರ್ಕಾರ ತೆಗೆದುಕೊಂಡು, ಹೋಗುತ್ತಿರುವ ಸಂದರ್ಭದಲ್ಲಿ ಟ್ರೇನ್ ರಾಬರಿಯಲ್ಲಿ ಕುಕ್ರಿ ಟ್ರೈನ್ ರಾಬ್ರಿ ಕೇಸ್‍ನಲ್ಲಿ ರಾಮದಾಸ್ ಪ್ರಸಾದ್ ಬಿಸ್ಮಿಲ್ಲಾ ಹಾಗೂ ಅಶ್ವಕ್‍ವುಲ್ಲಾ ಖಾನ್ ನೇಣುಗಂಬಕ್ಕೆ ಏರಿದ ಮಹಾನ್ ಕ್ರಾಂತಿಕಾರಿಗಳಾಗಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಎಐಟಿಐ ಜಿಲ್ಲಾಧ್ಯಕ್ಷ ಸೈಯದ್ ಖಾಜಾಪೀರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರೆಹಮಾನ್, ಮಹಮ್ಮದ್ ಅಲಿಖಾನ್ ಉಪಸ್ಥಿತರಿದ್ದರು. ಇಪ್ಟಾ ಕಲಾವಿದ ಐರಣಿ ಚಂದ್ರು ಕ್ರಾಂತಿ ಗೀತೆ ಹಾಡಿದರು. ಶಿಕ್ಷಕ ದ್ವಾರಕೀಶ್ ಸ್ವಾಗತಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ