ಹರಪನಹಳ್ಳಿ:
ಇಲ್ಲಿಯ ತೆಗ್ಗಿನಮಠ ಗ್ರಾಮೀಣ ವಿಕಾಶ್ ಟ್ರಸ್ಟ ಹಾಗೂ ತೆಗ್ಗಿನಮಠದ ಪುರಾಣ ಪ್ರವಚನ ಮತ್ತು ಸಾಮೂಹಿಕ ವಿವಾಹ ಸಮಿತಿಗಳ ಆಶ್ರಯದಲ್ಲಿ ಮೇ.26ಕ್ಕೆ ಲಿಂಗೈಕ್ಯ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ 72 ನೇ ಪುಣ್ಯಾರಾಧನೆ ನಿಮಿತ್ಯ ಧರ್ಮಾರ್ಥ ಸಾಮೂಹಿಕ ವಿವಾಹ ಕಾರ್ಯಕ್ರಮ ಆಯೋಜಿಸಲಾಗಿದೆ.
ಈ ಕುರಿತು ಪಟ್ಟಣದ ತೆಗ್ಗಿನಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ತೆಗ್ಗಿನಮಠದ ಕಾರ್ಯದರ್ಶಿ ಟಿ.ಎಂ.ಚಂದ್ರಶೇಖರಯ್ಯನವರು ಇನ್ನೊಬ್ಬ ಲಿಂಗೈಕ್ಯ ಚಂದ್ರಮೌಳೀಶ್ವರ ಶಿವಾಚಾರ್ಯ ಸ್ವಾಮೀಜಿಯವರ 75 ನೇ ಜನ್ಮ ದಿನಾಚರಣೆ ಪ್ರಯುಕ್ತ ಈ ಹಿಂದೆ ಕೈಗೊಂಡಿದ್ದ 75 ಸಂಕಲ್ಪ ಯೋಜನೆಗಳ ಪೈಕಿ ಈ ಬಾರಿ ನಮ್ಮ ಮಠದಲ್ಲಿ ಆಗಮಿಸುವ ಗಣ್ಯ ರಿಗೆ ಗೆಸ್ಟಹೌಸ್ ನಿರ್ಮಾಣ, ರಂಭಾಪುರಿ ಪೀಠದಲ್ಲಿ 5 ವಸತಿ ಗೃಹ ಕೊಠಡಿಗಳ ನಿರ್ಮಾಣ, ಹಾಗೂ ಅಲ್ಲೊಂದು ಗೆಸ್ಟ್ ಹೌಸ್ ನಿರ್ಮಾಣ ಹೀಗೆ ಕಾಎರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಎಂದು ಹೇಳಿದರು.
ಮೇ.26 ರಂದು ನಡೆಯುವ ಸಾಮೂಹಿಕ ವಿವಾಹ ಕಾರ್ಯ ರಾಮಘಟ್ಟದ ಶ್ರೀಗಳ ಸ್ಮಮುಖದಲ್ಲಿ ನಡೆಯಲಿದೆ, ಭದ್ರಾವತಿಯ ವಿಪ ಸದಸ್ಯ ರುದ್ರೇಗೌಡ ಇತರರು ಪಾಲ್ಗೊಳ್ಳುತ್ತಾರೆ. ಸಾಮೂಹಿಕ ವಿವಾಹದಲ್ಲಿ 60 ವಧು ವರರು ದಾಂಪತ್ಯಕ್ಕೆ ಕಾಲಿಡುವ ನಿರೀಕ್ಷೆ ಇದ್ದು, ಒಬ್ಬ ಜೋಡಿಗೆ ಬಂಗಾರದ ತಾಳಿ, ಬಟ್ಟೆ, ಕಾಲುಂಗುರ ನೀಡಲಾಗುವುದು ಎಂದು ಅವರು ಹೇಳಿದರು.ಸಾಮೂಹಿಕ ವಿವಾಹ ಆಗುವವರು ಹೆಸರು ನೊಂದಾಯಿಸಲು ಮೇ.20 ರಂದು ಅಂತಿಮ ದಿನವಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಠದ ವರಸದ್ಯೋಜಾತ ಶಿವಾಚಾರ್ಯ ಸ್ವಾಮೀಜಿ, ಮುಖ್ಯ ಶಿಕ್ಷಕ ಸಿ.ಎಂ.ಕೊಟ್ರಯ್ಯ ಹಾಜರಿದ್ದರು.