ಮತ ಎಣಿಕೆಗೆ ಸಕಲ ಸಿದ್ಧತೆ: ಡಿಸಿ ರಾಮ್ ಪ್ರಸಾತ್ ಮನೋಹರ್

ಬಳ್ಳಾರಿ

     ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದಂತೆ ಮತ ಎಣಿಕೆಗೆ ಸಕಲ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ ಡಾ.ವಿ.ರಾಮ್ ಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.ಮತ ಎಣಿಕೆ ನಡೆಯುವ ಆರ್‍ವೈಎಂಇಸಿ ಕೇಂದ್ರದಲ್ಲಿ ನಿರ್ಮಿಸಲಾದ ಮಾಧ್ಯಮ ಕೇಂದ್ರದಲ್ಲಿ ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

      ಮಾಧ್ಯಮ ಕೇಂದ್ರಗಳು, ಊಟದ ವ್ಯವಸ್ಥೆ, ಮತ ಎಣಿಕೆ, ಪಾರ್ಕಿಂಗ್ ವ್ಯವಸ್ಥೆ, ಕೇಂದ್ರ, ಸಿಬ್ಬಂದಿಗೆ ತರಬೇತಿ, ವೀಕ್ಷಕರ ಕೊಠಡಿಗಳೆಲ್ಲವು ಸಿದ್ಧತೆಗೊಂಡಿವೆ ಎಂದು ಅವರು ವಿವರಿಸಿದರು.

      ಆರ್‍ವೈಎಂಇಸಿ ಕಾಲೇಜಿನಲ್ಲಿ ಮೇ 23ರಂದು ಬೆಳಗ್ಗೆ 7:45ಕ್ಕೆ ಭದ್ರತಾ ಕೊಠಡಿಗಳನ್ನು ಒಪನ್ ಮಾಡಲಾಗುತ್ತದೆ. ಪೊಸ್ಟಲ್ ಬ್ಯಾಲೆಟ್‍ಗಳನ್ನು ಬೆಳಗ್ಗೆ 8ಕ್ಕೆ ಎಣಿಕೆ ಮಾಡಲಾಗುತ್ತಿದೆ. ವಿದ್ಯುನ್ಮಾನ ಮತಯಂತ್ರಗಳ ಎಣಿಕೆಯನ್ನು ಬೆಳಗ್ಗೆ 8:30ಕ್ಕೆ ಪ್ರಾರಂಭಿಸಲಾಗುತ್ತದೆ ಎಂದು ಅವರು ತಿಳಿಸಿದರು.

    112 (ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಟೇಬಲ್‍ಗಳಂತೆ 8 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 112 ಟೇಬಲ್‍ಗಳನ್ನು ಹಂಚಿಕೆ ಮಾಡಲಾಗಿದೆ) ವಿಧಾನಸಭಾ ಕ್ಷೇತ್ರವಾರು ಟೇಬಲ್‍ಗಳನ್ನು ಹಂಚಿಕೆ ಮಾಡಲಾಗಿದೆ. ಲೋಕಸಭಾ ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಗಳಲ್ಲಿರುವ 1925 ಮತದಾನ ಕೇಂದ್ರಗಳ ಮತಗಳ ಎಣಿಕೆಯನ್ನು 138 ಸುತ್ತುಗಳಲ್ಲಿ ಎಣಿಕೆ ಮಾಡಲಾಗುತ್ತಿದೆ ಎಂದು ವಿವರಿಸಿದ ಅವರು,

      136 ಮತ ಎಣಿಕೆ ಮೇಲ್ವಿಚಾರಕರು, ಮತ ಎಣಿಕೆ ಸಹಾಯಕರು,ಮೈಕ್ರೋ ಅಬ್ಸರ್ವರ್‍ಗಳನ್ನು (ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ 14 ಜನ ಅವಶ್ಯಕತೆ ಇದ್ದು ಶೇ.20ರಂತೆ 3 ಜನ ಮೇಲ್ವಿಚಾರಕರನ್ನು ಕಾಯ್ದಿರಿಸಲಾಗಿದ್ದು ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಟ್ಟು 17 ಜನ ಮತ ಎಣಿಕೆ ಮೇಲ್ವಿಚಾರಕರಂತೆ 8 ವಿಧಾನಸಬಾ ಕ್ಷೇತ್ರಗಳಿಗೆ ಒಟ್ಟು 136 ಮತ ಎಣಿಕೆ ಮೇಲ್ವಿಚಾರಕರನ್ನು, ಸಹಾಯಕರನ್ನು, ಮೈಕ್ರೋ ಅಬ್ಸರ್ವರ್‍ಗಳನ್ನು ನೇಮಿಸಲಾಗಿರುತ್ತದೆ) ನೇಮಿಸಲಾಗಿದೆ ಎಂದರು.

       112 (ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ 14 ಜನ ಗ್ರೂಪ್ ಡಿ ಸಿಬ್ಬಂದಿಗಳಂತೆ 8 ವಿಧಾನಸಭಾ ಕ್ಷೇತ್ರಗಳಿಗೆ ಒಟ್ಟು 112 ಗ್ರೂಪ್ ಡಿ ಸಿಬ್ಬಂದಿಗಳನ್ನು ನೇಮಿಸಲಾಗಿರುತ್ತದೆ) ಗ್ರೂಪ್ ಡಿ ಸಿಬ್ಬಂದಿ, 16 ಟ್ಯಾಬುಲೇಟರ್‍ಗಳು, 8 ಮತ ಎಣಿಕೆ ಕೊಠಡಿಗಳಲ್ಲಿ ವಿಡಿಯೋಗ್ರಾಫಿ ಮಾಡಲು 8 ಜನ ವಿಡಿಯೋಗ್ರಾಫರ್‍ಗಳು ಹಾಗೂ ಮತ ಎಣಿಕೆ ಕೇಂದ್ರದ ಹೊರಭಾಗ,ಮಾಧ್ಯಮ ಕೊಠಡಿ ಮತ್ತು ಒಳಭಾಗದಲ್ಲಿ ವಿಡಿಯೋಗ್ರಾಫ್ ಮಾಡಲು ಇಬ್ಬರು ಸೇರಿದಂತೆ 10 ಜನ ವಿಡಿಯೋಗ್ರಾಫರ್‍ಗಳನ್ನು ನಿಯೋಜಿಸಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಇಬ್ಬರು ಕಂಪ್ಯೂಟರ್ ಅಪರೇಟರ್‍ಗಳಂತೆ 16 ಜನರನ್ನು ನೇಮಿಸಲಾಗಿದೆ.

       ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಬ್ಬರಂತೆ 8 ಜನ ಸೀಲಿಂಗ್ ಸೂಪರ್ ವೈಸರ್‍ಗಳನ್ನು ನೇಮಿಸಲಾಗಿದೆ ಎಂದು ವಿವರಿಸಿದರು. ಅಂಚೆ ಮತಪತ್ರಗಳ ಎಣಿಕೆಗೆ 3 ಟೇಬಲ್‍ಗಳನ್ನು ಹಂಚಿಕೆ ಮಾಡಲಾಗಿದ್ದು, ಪ್ರತಿ ಟೇಬಲ್‍ಗೆ ಒಬ್ಬ ಮೇಲ್ವಿಚಾರಕರು ಹಾಗೂ ಇಬ್ಬರು ಸಹಾಯಕರನ್ನು ನೇಮಿಸಲಾಗಿದೆ ಎಂದರು.

       ಬೆಳಗಿನ ಉಪಹಾರ ಮತ್ತು ಊಟದ ವ್ಯವಸ್ಥೆ: ಮತ ಎಣಿಕೆ ಸಿಬ್ಬಂದಿಯವರಿಗೆ, ಮಾಧ್ಯಮದವರಿಗೆ ಮತ್ತು ಪೊಲೀಸ್ ಸಿಬ್ಬಂದಿಯವರಿಗೆ ಪ್ರತ್ಯೇಕ ಕೌಂಟರ್‍ಗಳ ಮೂಲಕ ಉಪಹಾರ ಮತ್ತು ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಮತ ಎಣಿಕೆ ಏಜೆಂಟರುಗಳಿಗೆ ಪ್ರತ್ಯೇಕವಾಗಿ ಬೆಳಗ್ಗಿನ ಉಪಹಾರದ ವ್ಯವಸ್ಥೆ ಮಾಡಲಾಗಿದೆ.

       ವಾಹನ ನಿಲುಗಡೆಗೆ ವ್ಯವಸ್ಥೆ: ಮತ ಎಣಿಕೆ ಮತ ಎಣಿಕೆ ಸಿಬ್ಬಂದಿಯವರಿಗೆ, ಮಾಧ್ಯಮದವರಿಗೆ ಮತ್ತು ಪೊಲೀಸ್ ಸಿಬ್ಬಂದಿಯವರಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿರುತ್ತದೆ ಎಂದು ವಿವರಿಸಿದ ಡಿಸಿ ರಾಮ್ ಪ್ರಸಾತ್ ಅವರು ಅಧಿಕೃತ ಅಭ್ಯರ್ಥಿಗಳಿಗೆ, ಜನಪ್ರತಿನಿಧಿಗಳಿಗೆ, ಮತ ಎಣಿಕೆ ಏಜೆಂಟರುಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.

       ಮತ ಎಣಿಕೆ ಕೇಂದ್ರಕ್ಕೆ ನಿಷೇಧ: ಮತ ಎಣಿಕೆ ಕೇಂದ್ರದಲ್ಲಿ ಈ ಕೆಳಕಂಡ ಕಾರ್ಯಗಳನ್ನು ಹಾಗೂ ವಸ್ತುಗಳನ್ನು ತರುವುದನ್ನು, ಬಳಕೆ ಮಾಡುವುದನ್ನು ನಿಷೇದಿಸಲಾಗಿದೆ. ಬೆಂಕಿಗೆ ಆಹುತಿಯಾಗಬಹುದಾದ ವಸ್ತುಗಳು ಅಥವಾ ಸಾಮಗ್ರಿಗಳು, ಚೂಪಾದ ಲೋಹದ ಅಥವಾ ಗಾಜಿನ ವಸ್ತುಗಳು, ಬೆಂಕಿ ಪೊಟ್ಟಣ, ಸಿಗರೇಟ್, ಲೈಟರ್, ತಂಬಾಕು, ಗುಟ್ಕಾ ಇತ್ಯಾದಿ, ಆಯುಧಗಳು, ರಾಡ್, ಕೋಲುಗಳು, ಲೋಹದ ಚೈನ್‍ಗಳು, ಪೆನ್ ಬಾಕುಗಳು, ಉಗುರು ಕತ್ತರಿ, ಶಸ್ತ್ರಾತ್ರ, ಮದ್ದುಗುಂಡು, ಸ್ಪೋಟಕಗಳು, ಪಟಾಕಿಗಳು ರೇಜರ್ ಬ್ಲೇಡ್‍ಗಳು , ಗುಂಡು ಸೂಜಿ, ಸೂಜಿಗಳು, ಕತ್ತರಿ, ಸಿರಿಂಜ್‍ಗಳು, ಕನ್ನಡಿಗಳು, ನೀರಿನ ಬಾಟಲಿಗಳು, ಸೀಮೆ ಎಣ್ಣೆ, ಪೆಟ್ರೋಲ್, ಡೀಸೆಲ್, ತೈಲಗಳು, ಯಾವುದೇ ತರಹದ ದ್ರವಗಳು, ಸ್ಪಿರಿಟ್, ಬಣ್ಣದ ಪುಡಿ, ಯಾವುದೇ ತರಹದ ಮಸಾಲಾ ಪುಡಿ, ದ್ರವ ಶಾಯಿ, ಆ್ಯಸಿಡ್, ಗ್ಯಾಸ್ ಸಿಲಿಂಡರ್, ಒಲೆ, ಹೀಟರ್, ಮೊಬೈಲ್ ಫೋನ್, ಪೇಜರ್‍ಗಳು, ಕ್ಯಾಮೆರಾ (ಸ್ಟಿಲ್/ವಿಡಿಯೋ), ಪೆಪ್ಪರ್ ಸ್ಪ್ರೇ, ಏರೋಸೋಲ್ ಸ್ಪ್ರೇ, ಧೂಮಪಾನ ಮಾಡುವುದು.

    ಜೋರಾಗಿ ಮಾತನಾಡುವುದನ್ನು ಪದೇ ಪದೇ ಹೊರಗೆ ಒಳಗೆ ಹೊರಗೆ ಓಡಾಡುವುದನ್ನು ಮತ್ತು ಅನಗತ್ಯ ವಿಷಯಗಳ ಚರ್ಚೆ ಮಾಡುವುದು. ಏಣಿಕೆ ಸಿಬ್ಬಂದಿಯ ಗಮನವನ್ನು ಬೇರೆ ಕಡೆ ಸೆಳೆಯುವುದು ನಿಷೇಧಿಸಲಾಗಿದೆ ಎಂದು ಅವರು ವಿವರಿಸಿದರು.
ಇವಿಎಂ ಕೌಂಟಿಂಗ್ ಮುಗಿದ ನಂತರ ವಿಧಾನಸಭಾ ಕ್ಷೇತ್ರವಾರು 5 ಪೊಲಿಂಗ್ ಬೂತ್‍ಗಳ ವಿವಿಪ್ಯಾಟ್‍ಗಳ ಸ್ಲೀಪ್‍ಗಳನ್ನು ಪರಿಶೀಲಿಸಿ ಹೋಲಿಕೆ ಮಾಡಿದ ನಂತರವೇ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

      ಈ ಸಂದರ್ಭದಲ್ಲಿ ಎಸ್ಪಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಜನಾರ್ಧನ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಕೆ.ರಾಮಲಿಂಗಪ್ಪ , ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ ಮತ್ತಿತರರು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap