ಮೂಲಸೌಕರ್ಯಕ್ಕೆ ಒತ್ತಾಯಿಸಿಅಲೆಮಾರಿಗಳಿಂದ ಮತದಾನ ಬಹಿಷ್ಕಾರ

ಹುಳಿಯಾರು

         20 ವರ್ಷಗಳಿಂದ ಅಲೆಮಾರಿ ಸಮುದಾಯಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದರೂ ಯಾವುದೇ ಸರ್ಕಾರ ಅಲೆಮಾರಿಗಳ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದನ್ನು ಖಂಡಿಸಿ ತಾಲ್ಲೂಕಿನಾದ್ಯಂತ ಇರುವ ಅಲೆಮಾರಿ ಜನಾಂಗದವರು ಈ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸುತ್ತಿದ್ದೇವೆ ಎಂದು ಅಲೆಮಾರಿ ಬುಡಕಟ್ಟು ಮಹಾಸಭಾದ ಜಿಲ್ಲಾ ಘಟಕದ ಅಧ್ಯಕ್ಷ ರಾಜಪ್ಪ ಹೇಳಿದರು.

       ಹುಳಿಯಾರಿನ ಕೆರೆ ಅಂಗಳದಲ್ಲಿ ಅಲೆಮಾರಿಗಳು ವಾಸಿಸುವ ಸ್ಥಳದಲ್ಲಿ ಏರ್ಪಡಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 128ನೇ ಜಯಂತಿ ಸಂದರ್ಭದಲ್ಲಿ ಮಾತನಾಡಿದರು.

        `ತಾಲ್ಲೂಕಿನಲ್ಲಿರುವ ಅಲೆಮಾರಿ ಗಳಿಗೆ ನಿವೇಶನ ಹಾಗೂ ಸೂರು ಕಲ್ಪಿಸುವಂತೆ ಅ.2 ರಿಂದ ಅಹೋರಾತ್ರಿ ಧರಣಿ ನೆಡೆಸಿದ್ದೆವು. ಸ್ಥಳಕ್ಕೆ ಬಂದ ಜಿಲ್ಲಾಧಿಕಾರಿ 3 ತಿಂಗಳ ಒಳಗೆ ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದರು. 8 ತಿಂಗಳು ಕಳೆದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದೂರಿದರು.

        ಅಲ್ಲದೆ ಮೂಲ ಸೌಕರ್ಯ ಒದಗಿಸುವಂತೆ ಒತ್ತಾಯಿಸಿ ಹಲವು ಕಾರ್ಯಕ್ರಮಗಳು, ಸಭೆ, ಹೋರಾಟ ಮಾಡುತ್ತಾ ಬರುತ್ತಿದ್ದೇವೆ. ಜಿಲ್ಲಾಧಿಕಾರಿ, ಶಾಸಕರು, ಮುಖ್ಯಮಂತ್ರಿ ಹಾಗೂ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದೇವೆ. ಆದರೆ ಇದುವರೆವಿಗೂ ಯಾವ ಜನಪ್ರತಿನಿಧಿಯೂ ಸಮಸ್ಯೆ ಆಲಿಸಿಲ್ಲ ಎಂದು ಆರೋಪಿಸಿದರು.

        ಅಲೆಮಾರಿ ಸಂಘಟನೆಗಳು ರಾಜ್ಯದಾದ್ಯಂತ ಚುನಾವಣೆಯಲ್ಲಿ ಮತ ಚಲಾಯಿಸಬಾರದು ಎಂದು ತೀರ್ಮಾನ ಕೈಗೊಂಡಿವೆ. ಅದರಂತೆ ತಾಲ್ಲೂಕಿನಲ್ಲಿಯೂ ಚುನಾವಣೆ ಬಹಿಷ್ಕರಿಸುತೇವೆ ಎಂದರು.ಅಲೆಮಾರಿ ಜನಾಂಗದ ಮುಖಂಡ ಪಾಡುರಂಗನಾಯಕ್, ಹನುಮಂತಪುರದ ರಾಜಣ್ಣ, ಡಿಂಕನಹಳ್ಳಿ ರಾಜಪ್ಪ, ಪೈನಿಂಗ್ ಮಿಲ್ ನಾಗಣ್ಣ, ಲಕ್ಷ್ಮೀ ಮತ್ತಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link