ಮತದಾನದ ಜಾಗೃತಿ ಜಾಥಾ..

ಬಡವನಹಳ್ಳಿ:

       ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಡವನಹಳ್ಳಿಯಲ್ಲಿ ದಿನಾಂಕ 12-04-2019 ರಂದು ಕಾಲೇಜಿನ ಕ್ರೀಡಾ, ಸಾಂಸ್ಕøತಿಕ, ಸ್ಕೌಟ್ಸ್ & ಗೈಡ್ಸ್ ಯುವ ರೆಡ್‍ಕ್ರಾಸ್ ಘಟಕದ ಸಮಾರೋಪಸಮಾರಂಭದ ಆನಂದೋತ್ಸವ-2019 ಅನ್ನು ಆಚರಿಸಲಾಯಿತು.

         ಮುಖ್ಯ ಅತಿಥಿಗಳಾಗಿ ನಿವೃತ್ತ ಪ್ರಾಂಶುಪಾಲರಾದ ಪ್ರೊ. ಗಂಗಾಧರಪ್ಪ ನವರು ಬಾಗವಹಿಸಿ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಒಳ್ಳೆಯ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಓದಬೇಕೆಂದು, ಕರ್ನಾಟಕದಲ್ಲಿ ಈ ವರ್ಷ 32 ವಿದ್ಯಾರ್ಥಿಗಳು ಉಪಸಚ ಪರೀಕ್ಷೆಯಲ್ಲಿ ಪಾಸಾಗಿರುವುದು ಹೆಮ್ಮೆಯ ವಿಚಾರವೆಂದು ತಿಳಿಸಿದರು.

         ಕಾರ್ಯಕ್ರಮ ಅಧ್ಯಕ್ಷತೆಯನ್ನು ಪ್ರಾಂಶುಪಾಲರಾದ ಡಾ. ರಾಧಾಕೃಷ್ಣ ರವರು ವಹಿಸಿದ್ದರು ಮತ್ತು ಮತದಾನದ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಬಡವನಹಳ್ಳಿಯ ಪ್ರಮುಖ ಬೀದಿಯಲ್ಲಿ ಜಾಥಾವನ್ನು ಮಾಡಲಾಯಿತು ಹಾಗೂ ಅಂತಿಮ ವರ್ಷದ ಬಿ.ಎ. ಮತ್ತು ಬಿ.ಕಾಂ. ವಿದ್ಯಾರ್ಥಿಗಳಿಗೆ “ ಹೆಚ್ಚೆ ಗುರುತು ” ಹೆಸರಿನಲ್ಲಿ ಬೀಳ್ಕೋಡಿಗೆ ಕಾರ್ಯಕ್ರಮವನ್ನು ಮಾಡಲಾಯಿತು. ಎಲ್ಲಾ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸಾಂಪ್ರದಯಕ ಉಡುಗೆಯೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮವನ್ನು ಡಾ. ದಿನೇಶ್ ನಿರೂಪಿಸಿದರು. ರಘು ಕುಮಾರ್ ಸ್ವಾಗತಿಸಿದರು ಮತ್ತು ನಾಗೇಂದ್ರ ರವರು ವಂದಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link