ಜಗಳೂರು:
ಜಗಳೂರು ಪಟ್ಟಣದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಸಂತೆ ಮೈದಾನದಲ್ಲಿ, ಕರಪತ್ರ ನೀಡುವ ಮೂಲಕ ಭಾರತೀಯ ಚುನಾವಣಾ ಆಯೋಗ ಹಾಗೂ ಪಟ್ಟಣ ಪಂಚಾಯಿತಿ ವತಿಯಿಂದ ಲೋಕಸಭಾ ಸಾರ್ವತ್ರಿಕ ಚುನಾವಣೆ ಜಾಗೃತಿ ಕಾರ್ಯಕ್ರಮಕ್ಕೆ ತಹಶಿಲ್ದಾರ್ ತಿಮ್ಮಪ್ಪ ಉಜ್ಜಯಿನಿರವರು ಚಾಲನೆ ನೀಡಿದರು.
ತಾಲ್ಲೂಕು ಕಛೇರಿ ಅವರಣದಲ್ಲಿ ಕರ ಪತ್ರ ನೀಡಿ ಜೀವ ಉಳಿಸಲು ರಕ್ತದಾನ ದೇಶ ಕಟ್ಟಲು ಮತದಾನ ಮುಖ್ಯ ಎನ್ನುವ ಘೋಷವಾಕ್ಯ ಕೂಗುತ್ತಾ ಮತದಾನ ಜಾಗೃತಿ ಅರಿವು ಮೂಡಿಸಿದರು.ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಕಂಪಳಮ್ಮ ಆರೋಗ್ಯ ನಿರಿಕ್ಷಕರು ಕಿಫಾಯತ್, ಕಂದಾಯ ನಿರಿಕ್ಷಕರು ಸಂತೋಷ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
