ದಾವಣಗೆರೆ:
ನಗರದ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಯಕ್ಷರಂಗ, ಕಲಾಕುಂಚ ಮಹಿಳಾ ವಿಭಾಗದ ಸಂಯುಕ್ತಾಶ್ರಯದಲ್ಲಿ ಮುಂದಿನ ತಿಂಗಳು ನಡೆಯುವ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ “ಮತದಾನ ಜಾಗೃತಿ” ಕುರಿತಂತೆ ಪತ್ರಲೇಖನ ಅಭಿಯಾನಕ್ಕೆ ಕಲಾಕುಂಚ ಕಛೇರಿಯಲ್ಲಿ ಚಾಲನೆ ಕೊಡಲಾಯಿತು.
ನಗರದ ಪ್ರಮುಖ ಸಂಘ ಸಂಸ್ಥೆಗಳಿಗೆ, ಸಾರ್ವಜನಿಕರಿಗೆ ಅಂಚೆ ಕಾರ್ಡ್ ಮೂಲಕ “ಮತ ಚಲಾಯಿಸಿ” ಮತದಾನ “ಮತದಾನ ನಮ್ಮ ಹಕ್ಕು” “ಪ್ರಜಾಪ್ರಭುತ್ವದ ಬದ್ದತೆಯ ಪ್ರತಿರೂಪ ಮತದಾನ” ಹೀಗೆ ವಿವಿಧ ಶಿರೋನಾಮೆಯೊಂದಿಗೆ ಒಂದು ಸಾವಿರ ಅಂಚೆ ಕಾರ್ಡ್ ಬರೆದು ಜನರಲ್ಲಿ ಮತದಾನದ ಜಾಗೃತಿಯ ಜತೆಯಲ್ಲಿ ಕಾಳಜಿ ಮೂಡಿಸುವ ಹಂತದಲ್ಲಿ ನಡೆಸಿದ ಈ ಅಭಿಯಾನದಲ್ಲಿ ಕಛೇರಿಯಲ್ಲಿ ಸೇರಿದ ಪದಾಧಿಕಾರಿಗಳು “ಕಡ್ಡಾಯವಾಗಿ ಮತದಾನ ಮಾಡುತ್ತೇವೆ ಮತ್ತು ಇತರರನ್ನು ಮತದಾನಕ್ಕೆ ಪ್ರೇರೇಪಿಸುತ್ತೇವೆ” ಎಂದು ಪ್ರತಿಜ್ಞಾವಿಧಿ ಭೋಧಿಸಲಾಯಿತು.
ಪ್ರತಿಜ್ಞಾವಿಧಿ ಬೋಧನೆ ಹಾಗೂ ಅಂಚೆ ಕಾರ್ಡ್‍ನ ಅಭಿಯಾನದ ಚಾಲನೆಯ ಈ ಸರಳ ಸಮಾರಂಭದಲ್ಲಿ ಕಲಾಕುಂಚ ಸಾಂಸ್ಕತಿಕ ಸಂಸ್ಥೆ, ಯಕ್ಷರಂಗ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥೆಗಳ ಪದಾಧಿಕಾರಿಗಳಾದ ಸಾಲಿಗ್ರಾಮ ಗಣೇಶ್ ಶೆಣೈ, ಕೆ.ಹೆಚ್.ಮಂಜುನಾಥ್, ಬಿ.ಶಾಂತಪ್ಪಪೂಜಾರಿ, ವಿಜಯ ಕುಮಾರ್ ಶೆಟ್ಟಿ, ಬೇಳೂರು ಸಂತೋಷಕುಮಾರ್‍ಶೆಟ್ಟಿ, ವಸಂತಿ ಮಂಜುನಾಥ್, ಹೇಮಾ ಶಾಂತಪ್ಪಪೂಜಾರಿ, ಶೈಲಾ ವಿಜಯ ಕುಮಾರ್, ಜಯಾ ಶ್ರೀನಿವಾಸ್, ಜ್ಯೋತಿ ಗಣೇಶ್ ಶೆಣೈ, ಮಂಗಳಗೌರಿ ಮುಂತಾದವರು ಉಪಸ್ಥಿತರಿದ್ದರು.