ಹುಳಿಯಾರು ಪಪಂನಿಂದ ಮತದಾನ ಜಾಗೃತಿ ಜಾಥ

ಹುಳಿಯಾರು:

      ಹುಳಿಯಾರು ಪಪಂನಿಂದ ಗುರುವಾರ ಮತದಾನ ಜಾಗೃತಿ ಜಾಥ ನಡೆಸಲಾಯಿತು.ಪಪಂ ಮುಖ್ಯಾಧಿಕಾರಿ ಡಿ.ಭೂತಪ್ಪ ಅವರು ಜಾಥಕ್ಕೆ ಚಾಲನೆ ನೀಡಿ ಮಾತನಾಡಿ ದೇಶದ ಹಿತದೃಷ್ಠಿಯಿಂದ ಪ್ರತಿಯೊಬ್ಬರು ತಮ್ಮ ಹಕ್ಕು ಜಲಾಯಿಸಬೇಕು. ಈ ನಿಟ್ಟಿನಲ್ಲಿ ಮತದಾನದ ಮಹತ್ವವನ್ನು ಪ್ರತಿಯೊಬ್ಬ ಮತದಾರರಿಗೂ ಮನವರಿಕೆ ಮಾಡಿ ಶೇ.100 ರಷ್ಟು ಮತದಾನ ಆಗುವಂತೆ ಮಾಡಬೇಕಿದೆ ಎಂದರು.

      ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು. ಶೇ 100ರಷ್ಟು ಮತದಾನ ಆದಾಗ ಮಾತ್ರ ಅದರ ಹಿಂದೆ ಜನತೆಯ ನೈಜ ಆಯ್ಕೆ ಇರಲು ಸಾಧ್ಯ. ಸಂತೆಯಲ್ಲಿ ತರಕಾರಿ ಖರೀದಿಸಲು ಕೆಲ ನಿಮಿಷ ಯೋಚಿಸುವ ನಾಗರಿಕರು, ಮಹಿಳೆಯರು ದೇಶದ ಭವಿಷ್ಯ ನಿರ್ಮಾಣದ ಜವಬ್ದಾರಿತನ ಇರುವ ಮತದಾನದ ಪಾವಿತ್ರ್ಯದ ಬಗ್ಗೆಯೂ ಯೋಚಿಸಿ, ಮತದಾನ ಮಾಡಬೇಕು ಎಂದರು.

       ನಂತರ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಪೌರಕಾರ್ಮಿಕರು, ಸ್ತ್ರೀಶಕ್ತಿ-ಸ್ವಸಹಾಯ ಸಂಘದ ಸದಸ್ಯರೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಮೆರವಣಿಗೆಯಲ್ಲಿ ಮತದಾನದ ಬಗ್ಗೆ ಕೆಲ ಗೋಷಣೆಗಳನ್ನು ಕೂಗುವ ಮೂಲಕ ಜಾಗೃತಿ ಮೂಡಿಸಲಾಯಿತು.

       ಪಪಂ ಆರ್‍ಓ ಪ್ರದೀಪ್, ಎಸ್‍ಡಿಎ ಜಿನಾಯತ್, ಪೌರಕಾರ್ಮಿಕ ಸಂಘದ ಅಧ್ಯಕ್ಷ ರಾಘವೇಂದ್ರ, ಅಂಗನವಾಡಿ ಕಾರ್ಯಕರ್ತೆಯದ ಸಂಘದ ಅಧ್ಯಕ್ಷೆ ಪೂರ್ಣಮ್ಮ, ಆರೋಗ್ಯ ಇಲಾಖೆಯ ವೆಂಟಕರಾಮಯ್ಯ, ಚಂದ್ರಕಾಂತ್, ಮಹಾಲಕ್ಷ್ಮೀ, ಭೂಮಿ ಸಂಜೀವಿನಿ ಒಕ್ಕೂಟದ ಸರಸ್ವತಿ, ಅಂಗನವಾಡಿ ಕಾರ್ಯಕರ್ತೆಯರಾದ ಭಾಗ್ಯಮ್ಮ, ಶಬನಾಯಾಸ್ಮೀನ್, ಮನುಬಾಯಿ, ಗಾಯಿತ್ರಿ, ಆಶಾ ಕಾರ್ಯಕರ್ತೆ ಲಕ್ಷ್ಮೀದೇವಿ ಸೇರಿದಂತೆ ಬೀಬೀಫಾತೀಮಾ, ಬೀಬಿಮರಿಯಂ, ನುರಾನಿ ಮಹಿಳಾ ಸಂಘದ ಸದಸ್ಯರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link