ಮತದಾನ ಜಾಗೃತಿಗಾಗಿ ಮಾನವ ಸರಪಳಿ

ದಾವಣಗೆರೆ:

       ಕಡ್ಡಾಯ ಮತದಾನದ ಕುರಿತು ಜಾಗೃತಿ ಮೂಡಿಸಲು ಎವಿಕೆ ಕಾಲೇಜು ಸೇರಿದಂತೆ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಜಾಗೃತಿ ಜಾಥಾ ನಡೆಸಿ, ಮಾನವ ಸರಪಳಿ ರಚಿಸಿ ಮತದಾನದ ಬಗ್ಗೆ ಅರಿವು ಮೂಡಿಸಿದರು.ನಗರದ ಎವಿಕೆ ಕಾಲೇಜಿನಿಂದ ಜಾಗೃತಿ ಜಾಥಾದಲ್ಲಿ ತೆರಳಿದ ಸುಮಾರು 450ಕ್ಕೂ ಹೆಚ್ಚು ವಿದ್ಯಾರ್ಥಿಗಳು ರಾಂ & ಸರ್ಕಲ್ ಮಾರ್ಗ ಕೆ.ಇ.ಬಿ. ಸರ್ಕಲ್ ಮುಖಾಂತ ಜಯದೇವ ವೃತ್ತಕ್ಕೆ ತೆರಳಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಸಾರ್ವಜನಿಕರಲ್ಲಿ 2019ರ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು.

       ಜಾಥಾದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ಶಿವಪ್ರಕಾಶ್ ಪಿ.ಎಸ್. ಪ್ರೊ. ಪಾಲಾಕ್ಷ, ಪ್ರೊ.ತಿಪ್ಪೇಸ್ವಾಮಿ, ಚಾಣುಕ್ಯ ಕಾಲೇಜಿನ ಪ್ರಾಂಶುಪಾಲ ಈರಣ್ಣ, ಜಿ.ಎಂ.ಎಸ್. ಕಾಲೇಜಿನ ಪ್ರೊ. ಸದಾನಂದ, ಮಂಜುನಾಥ ಕಾಲೇಜಿನ ಪ್ರೊ.ರಾಘವೇಂದ್ರ, ಬಾಪೂಜಿ ಹೈಟೆಕ್ ಕಾಲೇಜ್ ಆಫ್ ಎಜುಕೇಷನ್‍ನ ಲತಾ, ಎ.ಆರ್.ಎಂ. ಕಾಲೇಜಿನ ಪ್ರಾಂಶುಪಾಲ ಪ್ರೊ.ಪ್ಯಾಟಿ, ಡಿ.ಆರ್.ಎಂ. ಕಾಲೇಜಿನ ಪ್ರೊ.ಕುಮಾರ್ ಮತ್ತಿತರರು ಭಾಗವಹಿಸಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link