ಬ್ಯಾಡಗಿ:
ಪ್ರಜಾಪ್ರಭುತ್ವ ವ್ಯವಸ್ಥೆಯನ್ನುಒಪ್ಪಿಕೊಂಡ ಮೇಲೆ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು,ಇದರಿಂದ ವಂಚಿತ ರಾಗುವುದುಆತ್ಮವಂಚನೆಗೆ ಸಮನಾದ ಕೆಲಸ ಆದ್ದರಿಂದಎಲ್ಲರೂಕಡ್ಡಾಯವಾಗಿ ಮತದಾನ ಮಾಡಿದೇಶದ ಪ್ರಗತಿಗೆ ಶ್ರಮಿಸುವಂತೆ ಪಾಂಡುರಂಗ ಸುತಾರ ಹೇಳಿದರು.
ಸೃಷ್ಠಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಅಗಸನಹಳ್ಳಿ ಸೇರಿದಂತೆ ಪಟ್ಟಣದ ವಿವಿಧೆಡೆಗಳಲ್ಲಿ ಯುಜಿಡಿಕಾರ್ಯ ನಿರ್ವಹಿ ಸುತ್ತಿರುವ ಕಾರ್ಮಿಕರಿಗೆ ಪಾನಕ ನೀಡಿ ವಿನೂತನವಾಗಿ ಮತದಾನಜಾಗೃತಿ ಮೂಡಿಸಿ ಅವರು ಮಾತನಾಡಿದರು. ನಮ್ಮನ್ನಾಳುವ ಪ್ರಜೆಗಳನ್ನು ಎಂತಹವರಿರಬೇಕು, ಯಾರಿರಬೇಕುಎಂಬಿತ್ಯಾದಿ ಆಯ್ಕೆ ಸೇರಿದಂತೆ ಸರ್ಕಾರಇಂತಹದ್ದೇಇರಬೇಕೆಂಬ ಆಯ್ಕೆಕೂಡ ನಮ್ಮಕೈಯಲ್ಲಿದೆ, ಹೀಗಿರುವಾಗ ಮತದಾನ ದಿನವನ್ನು ಮೋಜು ಮಸ್ತಿಗಾಗಿ ನೀಡುವಂತಹರಜೆಎಂದು ಭಾವಿಸದೇತಪ್ಪದೇ ಮತದಾನ ಮಾಡುವಂತೆ ಮನವಿ ಮಾಡಿದರು.
ಆಮಿಷಕ್ಕೆ ಒಳಗಾಗಬೇಡಿ:ಕಾರ್ಮಿಕ ಬಂಧು ಮಂಜುನಾಥ ಪೂಜಾರ ಮಾತನಾಡಿಮತದಾನ ನಮ್ಮ ಸಂವಿಧಾನ ಬದ್ಧವಾಗಿ ನೀಡಿರುವ ಹಕ್ಕು ಇದರ ಸಮರ್ಪಕ ಬಳಕೆ ಪ್ರಜಾಪ್ರಭುತ್ವಕ್ಕೆಕೊಟ್ಟದೊಡ್ಡಗೌರವ, ಕಾರಣ 18 ವರ್ಷಕ್ಕಿಂತ ಮೇಲ್ಪಟ್ಟಎಲ್ಲರೂತಪ್ಪದೇ ಮತದಾನ ಮಾಡುವಂತೆಕೋರಿದರಲ್ಲದೇಯಾವುದೇಕಾರಣಕ್ಕೂ ಆಸೆ ಆಮಿಷಗಳಿಗೆ ಇಳಗಾಗದೆ ನಿಮ್ಮಕ್ಷೇತ್ರದಅಭಿವೃದ್ಧಿಗೆ ಶ್ರಮಿಸುವಅಭ್ಯರ್ಥಿಗೆ ಮತದಾನ ಮಾಡಿಇಲ್ಲವಾದಲ್ಲಿ ಮುಂದಿನ ಐದು ವರ್ಷಗಳ ಕಾಲ ಸಂಕಷ್ಟ ಅನುಭವಿಸಬೇಕಾಗುತ್ತದೆಎಂದು ಎಚ್ಚರಿಸಿದರು.
ಕಡ್ಡಾಯವಾಗಿ ಮತದಾನ ಮಾಡಿ:ಉದಯಚೌಧರಿ ಮಾತನಾಡಿ, ತಮಗೆ ಬೇಕಾದ ಅಭ್ಯರ್ಥಿಗಳನ್ನು ಅಧಿಕಾರಕ್ಕೆತರುವ ನಿಟ್ಟಿನಲ್ಲಿತಮ್ಮಲ್ಲಿ ಉಳಿದಿರುವ ಏಕೈಕ ಅಸ್ತ್ರವೆಂದರೆಕಡ್ಡಾಯ ಮತದಾನ, ಮತದಾನ ಪ್ರಜಾಪ್ರಭುತ್ವದಲ್ಲಿ ಮತದಾರನೇಅಂತಿಮತೀರ್ಪು ನೀಡಲಿದ್ದಾನೆ,ಇಂತಹ ಪ್ರಬಲವಾದಅಸ್ತ್ರವನ್ನುಕೈಯಲ್ಲಿಟ್ಟುಕೊಂಡಾಗಲೂ ಬೇಜವಾಬ್ದಾರಿ ಪ್ರದರ್ಶಿಸುವ ನಮ್ಮಯುವಕರು ಮತಗಟ್ಟೆಗಳಿಂದ ದೂರ ಉಳಿಯುತ್ತಿರುವುದು ವಿಪರ್ಯಾಸದ ಸಂಗತಿಎಂದರು.
ಪಾನಕ ವಿತರಣೆ:ಇದೇ ಸಂದರ್ಭದಲ್ಲಿ ಸುಡುವ ಬಿಸಿಲನ್ನು ಲೆಕ್ಕಿಸದೇ ನಿರಂತವಾಗಿಕಾರ್ಯದಲ್ಲಿತೊಡಗಿದ್ದ ಮಹಿಳಾ ಹಾಗೂ ಪುರುಷಕಾರ್ಮಿಕರಿಗೆ ಪಾನಕ ವಿತರಣೆ ಮಾಡುವ ಮೂಲಕ ವಿನೂತನವಾಗಿ ಮತದಾನಜಾಗೃತಿ ಮೂಡಿಸಲಾಯಿತು. ಸಂಸ್ಥೆಯ ಸದಸ್ಯರು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.