ದಾವಣಗೆರೆ
ನಗರದಲ್ಲಿ ಆ.22ರಂದು ನಡೆಯಲಿರುವ ಮತ್ತೆ ಕಲ್ಯಾಣ ಆಂದೋಲನದ ಬಗ್ಗೆ ಜಿಲ್ಲೆಯ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಪ್ರಚಾರ ವಾಹನಕ್ಕೆ ಮಂಗಳವಾರ ನಗರದ ಕುವೆಂಪು ಕನ್ನಡ ಭವನದ ಆವರಣದಲ್ಲಿ ಚಾಲನೆ ನೀಡಲಾಯಿತು. ಸ್ವಾಗತ ಸಮಿತಿಯ ಡಾ.ಹೆಚ್.ಎಸ್.ಮಂಜುನಾಥ ಕುರ್ಕಿ, ಹೆಚ್.ಕೆ.ಬಸವರಾಜ, ಕೆ.ಹೆಚ್.ಓಬಳಪ್ಪ, ಡಿ.ಬಸವರಾಜ, ಮಹಾಂತೇಶ ಅಂಗಡಿ, ಮುದೇಗೌಡ್ರು ಗಿರೀಶ, ಆವರಗೆರೆ ರುದ್ರಮುನಿ, ಎಂ.ಶಿವಕುಮಾರ, ಹೆಚ್.ಕೆ.ರಾಮಚಂದ್ರಪ್ಪ, ಪ್ರೊ.ಸಿ.ಹೆಚ್.ಮುರಿಗೇಂದ್ರಪ್ಪ, ಕೆ.ಎಸ್.ಬಸವಂತಪ್ಪ, ಹೆಚ್.ಕೆ.ರಾಮಚಂದ್ರಪ್ಪ, ಶಶಿಧರ ಮತ್ತಿತರರು ಹಾಜರಿದ್ದರು.