ದಾವಣಗೆರೆ:
ಭದ್ರಾ ಕಾಲುವೆಯಿಂದ ಟ್ಯಾಂಕರ್‍ಗೆ ನೀರು ತುಂಬಿಸುತ್ತಿದ್ದ ಸಂದರ್ಭದಲ್ಲಿ ರೈತನೊಬ್ಬರಿಗೆ ಆಕಸ್ಮಿಕವಾಗಿ ವಿದ್ಯುತ್ ತಂತಿ ತಗುಲಿ, ಟ್ಯಾಂಕರ್ ಮೇಲೆಯೇ ದುರಂತ ಸಾವು ಕಂಡಿರುವ ಧಾರುಣ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಲಿಂಗದಹಳ್ಳಿ ಸಮೀಪ ಸೋಮವಾರ ನಡೆದಿದೆ.
ಚನ್ನಗಿರಿ ತಾಲೂಕಿನ ಮಲ್ಲಿಗೆರೆ ಗ್ರಾಮದ ರೈತ ರಘು ನಾಯ್ಕ(30 ವರ್ಷ) ಮೃತ ದುರ್ದೈವಿಯಾಗಿದ್ದಾರೆ. ತೋಟಕ್ಕೆ ನೀರು ಹಾಯಿಸಲು ಭದ್ರಾ ಕಾಲುವೆಯಿಂದ ಟ್ಯಾಂಕರ್‍ಗೆ ನೀರು ತುಂಬಿಸಲೆಂದು ಟ್ಯಾಂಕರ್ ಮೇಲೆ ರಘು ನಾಯ್ಕ ನಿಂತಿದ್ದಾಗ ನಾಲೆ ಸಮೀಪವೇ ಹಾದು ಹೋಗಿರುವ ವಿದ್ಯುತ್ ತಂತಿ ಆಕಸ್ಮಿಕವಾಗಿ ಆತನಿಗೆ ತಗುಲಿ, ಅಲ್ಲಿಯೇ ಅ ಸುನೀಗಿದ್ದಾನೆ. ಈ ಕುರಿತು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.