ಹೊನ್ನಾಳಿ:
ದೇಶದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಪ್ರಧಾನಿ ನರೇಂದ್ರ ಮೋದಿಯವರನ್ನು ಜನತೆ ಮತ್ತೊಮ್ಮೆ ಪ್ರಧಾನಿ ಮಾಡಲು ಉತ್ಸುಕರಾಗಿದ್ದಾರೆ. ಈ ಬಾರಿ ಮತ್ತೊಮ್ಮೆ ಮೋದಿ ಎಂಬ ಅಭಿಯಾನದಡಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಜಿಎಂ ಸಿದ್ದೇಶ್ವರ್ ಅವರು ಮತ್ತೊಮ್ಮೆ ಜಯಗಳಿಸಲಿದ್ದಾರೆಂದು ಮಾಜಿ ಸಚಿವ ಶಾಸಕ ಎಂಪಿ ರೇಣುಕಾಚಾರ್ಯ ವಿಶ್ವಾಸ ವ್ಯಕ್ತಪಡಿಸಿದರು.
ಹೊನ್ನಾಳಿ ಪಟ್ಟಣದ ಹತ್ತನೇ ವಾರ್ಡಿನ ಗೌಡರ ಕೇರಿಯಲ್ಲಿ ಲೋಕಸಭಾ ಚುನಾವಣೆಯ ಪೂರ್ವಭಾವಿಯಾಗಿ ವಾರ್ಡ್ ಜನಪ್ರತಿನಿಧಿಗಳು ಕಾರ್ಯಕರ್ತರು ಮುಖಂಡರೊಡನೆ ಮತ್ತೊಮ್ಮೆ ಮೋದಿ ಎಂಬ ಅಭಿಯಾನದಡಿಯಲ್ಲಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.
ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸತತ 25 ವರ್ಷಗಳಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಿದ್ದು ಪ್ರಧಾನಿ ನರೇಂದ್ರ ಮೋದಿಯವರ ಸಹಕಾರದಿಂದ ದಾವಣಗೆರೆ ಜಿಲ್ಲೆ ನಮ್ಮ ಸಂಸದ ಜಿ.ಎಂ ಸಿದ್ದೇಶ್ವರ ಪರಿಶ್ರಮದಿಂದ ಹಲವಾರು ಶಾಶ್ವತ ಅಭಿವೃದ್ಧಿಗಳನ್ನು ಕಂಡಿದ್ದು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವಾಗಿದೆ ಸಂಸದರ ಪರಿಶ್ರಮದಿಂದ ಸಾವಿರಾರು ಕೋಟಿ ಕೇಂದ್ರದಿಂದ ಹರಿದು ಬಂದಿದ್ದು ರಸ್ತೆ ಕುಡಿಯುವ ನೀರು ಮುಂತಾದ ಶಾಶ್ವತ ಸೌಲಭ್ಯಗಳನ್ನು ಕಂಡಿದೆಯೆಂದರು.
ರಾಜ್ಯದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಯಡಿಯೂರಪ್ಪನವರ ಸಂಘಟನೆ ಪರಿಶ್ರಮ ಮತ್ತು ಕಾರ್ಯಕರ್ತರ ಹುಮ್ಮಸ್ಸಿನಿಂದ ಈ ಬಾರಿ 22 ಕ್ಕೂ ಹೆಚ್ಚು ಬಿಜೆಪಿ ಸಂಸದರು ಆಯ್ಕೆ ಆಗಲಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ತಾಲ್ಲೂಕಿನಿಂದ ಹೆಚ್ಚಿನ ಮತಗಳನ್ನು ಗಳಿಸಲು ಈಗಾಗಲೇ ಎಲ್ಲಾ ಹಳ್ಳಿಗಳಲ್ಲಿ ಪ್ರವಾಸ ನಡೆಸಿ ಚುನಾವಣೆಯ ಮಹತ್ವ ಮತ್ತು ಬಿಜೆಪಿ ಅಭ್ಯರ್ಥಿಗೆ ಹೆಚ್ಚಿನ ಮತ ನೀಡುವಂತೆ ಕಾರ್ಯಕರ್ತರು ಮತದಾರರಲ್ಲಿ ಮನವಿ ಮಾಡಲಾಗಿದೆಯೆಂದರು.
ಪ.ಪಂ ಸದಸ್ಯರಾದ ಹೋಬಳಿದಾರ್ ಬಾಬು, ಬಡಾವಣೆ ರಂಗಪ್ಪ, ಕೆ.ವಿ ಶ್ರೀಧರ್, ನಂದೀಶ್, ಪ.ಪಂ ಮಾಜಿ ಅಧ್ಯಕ್ಷರಾದ ಚಾಟಿ ಶೇಖರಪ್ಪ, ಮಾ.ಉಪಾಧ್ಯಕ್ಷ ಮಂಜುನಾಥ್, ಬಿಜೆಪಿ ಮುಖಂಡ ಮೋಹನ್, ಡಿ.ಎಲ್, ಕುಮಾರಸ್ವಾಮಿ, ಪ್ರೇಮಕುಮಾರ್ ಬಂಡಿಗಡಿ ಸೇರಿದಂತೆ ವಾರ್ಡ್‍ಗಳ ಕಾರ್ಯಕರ್ತರು, ಅನೇಕ ಮುಖಂಡರಿದ್ದರು.