ಇಂದಿನಿಂದ ಶ್ರೀಚೌಡೇಶ್ವರಿ ದಸರ ಮಹೋತ್ಸವ

ದಾವಣಗೆರೆ :

     ನಗರದ ದಾವಲ್‍ಪೇಟೆಯಲ್ಲಿರುವ ಶ್ರೀಚೌಡೇಶ್ವರಿ ದೇವಿಯ ದಸರಾ ಮಹೋತ್ಸವ ಪ್ರಯುಕ್ತ ಇಂದು ಬೆಳಿಗ್ಗೆ 10.30ಕ್ಕೆ ಘಟಸ್ಥಾಪನೆ ನೆರವೇರಲಿದೆ.

      ದಸರ ಮಹೋತ್ಸವದ ಹಿನ್ನೆಲೆಯಲ್ಲಿ ಇಂದಿನಿಂದ ಅ.19ರ ವರೆಗೆ 10 ದಿನಗಳ ಕಾಲ ದೇವಿಗೆ ವಿಶೇಷ ಅಲಂಕಾರ ಪೂಜೆಗಳು ಜರುಗಲಿವೆ. ಅ.10ರಂದು ಅರಿಶಿನ ಕುಂಕುಮ ಅಲಂಕಾರ, 11ರಂದು ಸಂತಾನ ಲಕ್ಷ್ಮಿ ಅಲಂಕಾರ, 12ರಂದು ಮಹಾಗೌರಿ ಅಲಂಕಾರ, 13ರಂದು ನವಧಾನ್ಯ ಮತ್ತು ಶಾಖಾಂಬರಿ, 14ರಂದು ಬಳೆ ಅಲಂಕಾರ, 15ರಂದು ಪುಷ್ಪ ಅಲಂಕಾರ, 16ರಂದು ಸರಸ್ವತಿ ಅಲಂಕಾರ, 17ರಂದು ಮಹಿಷಾಸುರ ಮರ್ದಿನಿ, 18ರಂದು ರಾಜೇಶ್ವರಿ ಅಲಂಕಾರ, ಕೊನೆಯ 19ರಂದು ಲಕ್ಷ್ಮಿ ನೋಟಿನ ಅಲಂಕಾರ ಮತ್ತು ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಲಿದೆ.

     ಎಲ್ಲಾ ಅಲಂಕಾರಗಳನ್ನು ಅರ್ಚಕರಾದ ವೇ|| ಪ್ರಹ್ಲಾದ್ ಎಂ. ಜೋಷಿ ಮತ್ತು ಶಶಿಧರ ಭಟ್, ಹನುಮಂತ ಭಟ್ಟರು ಮತ್ತು ಸಂಗಡಿಗರು ನೆರವೇರಿಸಿಕೊಡಲಿದ್ದಾರೆ. ಪ್ರಸಾದವನ್ನು ಕಾರ್ಯಕ್ರಮದ ದಿನಗಳಲ್ಲಿ ಪ್ರತಿದಿನ ಬೆಳಿಗ್ಗೆ 10ರಿಂದ ಮಧ್ಯಾಹ್ನ 12:30ರವರೆಗೆ ಹಾಗೂ ಸಾಯಂಕಾಲ 6 ರಿಂದ ರಾತ್ರಿ 9ರವರೆಗೆ ರಶೀದಿ ತೋರಿಸಿ ದೇವಸ್ಥಾನದಲ್ಲಿ ಪ್ರಸಾದ ತೆಗೆದುಕೊಳ್ಳಬೇಕೆಂದು ದೇವಸ್ಥಾನದ ಸಮಿತಿಯ ಪದಾಧಿಕಾರಿಗಳು ಕೋರಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap