ಬೆಂಗಳೂರು
ಕಾಲೇಜ್‌ಗೆ ಹೊಸದಾಗಿ ಬಂದ ವಿದ್ಯಾರ್ಥಿಗಳ ಸ್ವಾಗತ ದಿನ( ಫ್ರೆಶರ್ಸ್ ಡೇ)ಕ್ಕೆ ಫ್ಯಾಶನ್ ಶೋ ನಡೆಸಲು ರ್‍ಯಾಂಪ್ ವಾಕ್ ಅಭ್ಯಾಸ ಮಾಡುತ್ತಿದ್ದ ವೇಳೆ ಎಂಬಿಎ ವಿದ್ಯಾರ್ಥಿನಿಯೊಬ್ಬರು ಸಾವನ್ನಪ್ಪಿರುವ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶುಕ್ರವಾರ ನಡೆದಿದೆ.
ಪೀಣ್ಯದ ಏಮ್ಸ್ ಇನ್ಸ್ ಟಿಟ್ಯೂಟ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಶ್ರೀರಾಂಪುರದ ಲಕ್ಷ್ಮಿನಾರಾಯಣಪುರದ ರಾಬಿನ್ ಅಂಬಿಕ ದಂಪತಿಯ ಪುತ್ರಿ ಶಾಲಿನಿ(೨೧)ಎಂದು ಮೃತ ವಿದ್ಯಾರ್ಥಿನಿಯನ್ನು ಗುರುತಿಸಲಾಗಿದೆ ಇದೇ ಸೋಮವಾರ(ಅ.೨೧)ರಂದು ಕಾಲೇಜ್ ಫ್ರೆಶರ್ಸ್ ಡೇ ಆಯೋಜಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ನಿನ್ನೆ ಶಾಲಿನಿ ಸೇರಿದಂತೆ ಕೆಲ ವಿದ್ಯಾರ್ಥಿಗಳು ರ್‍ಯಾಂಪ್ ವಾಕ್ ಅಭ್ಯಾಸ ಮಾಡುತ್ತಿದ್ದಾಗ ಶಾಲಿನಿ ವೇದಿಕೆ ಮೇಲೆಯೇ ಕುಸಿದು ಬಿದ್ದಿದ್ದು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಶಾಲಿನಿ ಮೃತಪಟ್ಟಿದ್ದಾಳೆ .ಶಾಲಿನಿ ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಈ ಸಂಬಂಧ ಪೀಣ್ಯ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








