ನಿರಾಶ್ರೀತರ ಕೇಂದ್ರದಲ್ಲಿ ಆರೋಗ್ಯ ತಪಾಸಣೆ

ಚಿತ್ರದುರ್ಗ

        ಜೀವನದಲ್ಲಿ ಒಂದಾಲ್ಲ ಒಂದು ಕಾರಣಗಳಿಂದಾಗಿ ವ್ಯಕ್ತಿ ನಿರಾಶ್ರಿತನಾಗುತ್ತಾನೆ ಇಂತಹ ಸಂದರ್ಭದಲ್ಲಿ ಅವರಿಗೆ ಸಾಂತ್ವಾನ ಹೇಳುವ ವ್ಯಕ್ತಿಗಳು ಬೇಕು ಅಗ ಅವರು ನೆಮ್ಮದಿ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ವಸ್ತ್ರಮಠ ಹೇಳಿದರು.

         ನಗರದ ಹೊರವಲಯದಲ್ಲಿರುವ ನೀರಾಶ್ರಿತರ ಕೇಂದ್ರದಲ್ಲಿ ಇಂದು ಹಮ್ಮಿಕೊಂಡಿದ್ದ ಹಿರಿಯ ನಾಗರೀಕರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳು ಹಾಗೂ ಆರೋಗ್ಯ ತಪಾಸಣೆ ಜೊತೆಗೆ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

        ವಯಸ್ಸು ಆದ ಮೇಲೆ ಪ್ರತಿಯೊಬ್ಬ ವ್ಯಕ್ತಿ ತನ್ನ ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು. ಇಲ್ಲಿನ ನಿರಾಶ್ರಿತರ ಕೇಂದ್ರ ಆಶ್ರಯ ಪಡೆಯುತ್ತಿರುವವರಿಗೆ ಮನೆಯಾಗಿದ್ದು, ಉತ್ತಮ ಪರಿಸರ ನಿರ್ಮಾಣ ಮಾಡಿದ್ದಾರೆ ಎಂದ ನ್ಯಾಯಾಧೀಶರು, ಇಲ್ಲಿನ ಸ್ವಚ್ಚತಾ ಕಾರ್ಯ ಇತರರಿಗೆ ಮಾದರಿಯಾಗಿದೆ. ಪ್ರತಿಯೊಬ್ಬರು ತಮ್ಮ ತಮ್ಮ ಮನೆಯ ವಾತಾವರಣವನ್ನು ಉತ್ತಮ ರೀತಿಯಲ್ಲಿ ಕಾಪಾಡಿಕೊಳ್ಳಬೇಕು ಎಂದು ಕರೆ ನೀಡಿದರು.

      ಕೇಂದ್ರದಲ್ಲಿರುವವರು ಪುಸ್ತಕಗಳನ್ನು ಓದುವ ಅವ್ಯಾಸವನ್ನು ಬೆಳೆಸಿಕೊಂಡಲ್ಲಿ ಪುಸ್ತಕಗಳನ್ನು ಕೊಡಿಸಿಕೊಡುವುದಾಗಿ ತಿಳಿಸಿದ ಅವರು ಕೇಂದ್ರದಲ್ಲಿ ವಿಶಾಲವಾದ ಜಾಗವಿದ್ದು, ಇಲ್ಲಿ ಗಿಡ ಮರಗಳನ್ನು ಬೆಳೆಸುವುದರ ಜೊತೆಗೆ ತರಕಾರಿಯನ್ನು ಸ್ವತಃ ತಾವೇ ಬೆಳೆದು ತಿನ್ನುವುದರಿಂದ ತಮ್ಮಗಳ ಆರೋಗ್ಯ ವೃದ್ದಿಯಾಗುತ್ತದೆ ಎಂದರು.

     ಸರ್ಕಾರ ಹಿರಿಯ ನಾಗರೀಕರಿಗಾಗಿ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು ತಮಗೂ ಸಹ ಕಲ್ಪಿಸಿಕೊಡುವುದಾಗಿ ನ್ಯಾಯಧೀಶರಾದ ವಸ್ತ್ರಮಠ್ ತಿಳಿಸಿದರು.

       ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎನ್.ಬಿ.ವಿಶ್ವನಾಥ್ ಮಾತನಾಡಿ, ಮೊದಲು ಹಿರಿಯರನ್ನು ಗೌರವಿಸುವ ಮನೊಭಾವ ಹೆಚ್ಚು ಜನರಲ್ಲಿ ಇತ್ತು ಆದರೆ ಇಂದು ಕಾಲ ಬದಲಾಗಿದ್ದು, ಗೌರವಿಸುವ ಮನೋವಭಾವನೆ ಇಲ್ಲದ ಕಾರಣ ಸಾಕಷ್ಟು ಜನ ನಿರಾಶ್ರಿತರ ಕೇಂದ್ರಗಳಲ್ಲಿ ತಂಗುವಂತಾಗಿದೆ ಎಂದ ಅವರು ಕೇಂದ್ರದಲ್ಲಿರುವ ನೀವುಗಳು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಮುಂದೊಂದು ದಿನ ಕಾಲ ಬದಲಾಗಿ ತಮ್ಮ ಮಕ್ಕಳು ನಿಮ್ಮನ್ನು ಕರೆದುಕೊಂಡು ಹೋಗಬಹುದು ಎಂದು ನಿರಾಶ್ರಿತರಲ್ಲಿ ಆಶಾಭಾವನೆ ಮೂಡಿಸಿದರು.

       ಕಾರ್ಯಕ್ರಮದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶ ದಿಂಡಾಲ್ ಕೊಪ್ಪ, ನಿರಾಶ್ರಿತರ ಕೇಂದ್ರದ ಅಧೀಕ್ಷಕ ಮಹದೇವಯ್ಯ, ನಾಗರಾಜು, ಶಿವುಯಾದವ್, ಬಿ.ಕೆ.ರಹಮತ್ ವುಲ್ಲಾ, ಮಲ್ಲೇಶಪ್ಪ ಸೇರಿದಂತೆ ಇತರರು ಹಾಜರಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link