ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಸಾವು..!!

ಬೆಂಗಳೂರು

         ಚಿಕಿತ್ಸೆ ಪಡೆಯುತ್ತಿದ್ದ ಬಾಣಂತಿಯೊಬ್ಬರು ಮೃತಪಟ್ಟಿರುವುದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಕುಟುಂಬಸ್ಥರು ,ಸಂಬಂಧಿಕರು, ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿ ಚೆನ್ನಪಟ್ಟಣದ ಬಾಲು ಖಾಸಗಿ ಆಸ್ಪತ್ರೆಗೆ ಮುತ್ತಿಗೆ ಹಾಕಿ ದಾಂಧಲೆ ನಡೆಸಿದ್ದಾರೆ.ಚನ್ನಪಟ್ಟಣ ತಾಲೂಕಿನ ದೇವರಹೊಸಹಳ್ಳಿಯ ರಶ್ಮಿ ಎಂಬುವವರು ಹೆರಿಗೆಗೆಂದು ಭಾನುವಾರ ರಾತ್ರಿ 11ರ ವೇಳೆ ಬಾಲು ಆಸ್ಪತ್ರೆಗೆ ದಾಖಲಾಗಿದ್ದರು.

        ರಾತ್ರಿ 12 ಗಂಟೆಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಆದರೆ ಜನ್ಮ ನೀಡಿ ಅರ್ಧ ಗಂಟೆಯಲ್ಲೇ ರಶ್ಮಿ ಮೃತಪಟ್ಟಿದ್ದಾರೆ.ಬಾಣಂತಿ ಸಾವಿಗೆ ವೈದ್ಯೆ ಡಾ.ಶೈಲಜಾ, ಆಸ್ಪತ್ರೆ ಸಿಬ್ಬಂದಿ ಕಾರಣವೆಂದು ಆರೋಪಿಸಿ ರಶ್ಮಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಮುತ್ತಿಗೆ ಹಾಕಿದ್ದರಿಂದ ವೈದ್ಯರು ಆಪರೇಷನ್ ಥಿಯೇಟರ್‍ನಲ್ಲಿಯೇ ಶವ ಬಿಟ್ಟು ಪೆÇಲೀಸ್ ಭದ್ರತೆಯಲ್ಲಿ ಆಸ್ಪತ್ರೆಯಿಂದ ತೆರಳಿದ್ದಾರೆ.

        ಮೃತರ ಸಂಬಂಧಿಕರು ಆಸ್ಪತ್ರೆಯ ಕಿಟಕಿ ಗಾಜು, ಕಂಪ್ಯೂಟರ್, ಹೂವಿನ ಗಿಡದ ಪಾಟ್‍ಗಳನ್ನು ಒಡೆದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು. ಬೆಂಗಳೂರು-ಮೈಸೂರು ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲ ಕಾಲ ಟ್ರಾಫಿಕ್‍ಜಾಮ್ ಉಂಟಾಗಿತ್ತು.ರಶ್ಮಿ ಅವರನ್ನು ಒಂದು ವರ್ಷದ ಹಿಂದೆ ದೇವರಹೊಸಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು.ಘಟನಾ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ಥ್ ವ್ಯವಸ್ಥೆ ಕೈಗೊಳ್ಳಲಾಗಿದೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link