ಹಾವೇರಿ :
ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಕೃಷ್ಣಮೂರ್ತಿಯವರ ಮಾರ್ಗದರ್ಶನದಲ್ಲಿ ಹಾಗೂ ಜಿಲ್ಲಾಧ್ಯಕ್ಷರಾದ ಅಶೋಕ ಮರೆಣ್ಣನವರ ಅಧ್ಯಕ್ಷತೆಯಲ್ಲಿ ನಗರದ ಪ್ರವಾಸಿ ಮಂದಿರದಲ್ಲಿ ಪಕ್ಷ ಸಂಘಟನಾ ವಲಯ ಮಟ್ಟದ ಹಾಗೂ ಪದಾಧಿಕಾರಿಗಳ ಆಯ್ಕೆಗಳ ಸಮಾಲೋಚನಾ ಸಭೆ ಜರುಗಿತು.
ಸಭೆಯ ಮಾರ್ಗದರ್ಶಕರಾಗಿ ಆಗಮಿಸಿದ ಕೃಷ್ಣಮೂರ್ತಿ ಮಾತನಾಡಿ ಜಿಲ್ಲೆಯಲ್ಲಿ ಬಹುಜನ ಸಮಾಜ ಪಕ್ಷದ ಸಂಘಟನೆಯನ್ನು ಜಿಲ್ಲಾ ಮುಖಂಡರು ಜವಾಬ್ದಾರಿಯುತವಾಗಿ ಮಾಡಿದರೆ, ಮಾತ್ರ ಪಕ್ಷ ಬಲಿಷ್ಠವಾಗಲು ಸಾಧ್ಯ.ಕಳೆದ ವಿಧಾನಸಭೆಯಲ್ಲಿ ಕೊಳ್ಳೇಗಾಲ ಕ್ಷೇತ್ರದಿಂದ ಎನ್ ಮಹೇಶಯವರು ಜಯಗಳಿಸಿ ಪಕ್ಷಕ್ಕೆ ಪ್ರೇರಣೆಯಾಗಿರುವುದು ಅವರು ಆ ಕ್ಷೇತ್ರದಲ್ಲಿ ತಳಮಟ್ಟದಿಂದ ಪ್ರತಿ ಮನೆ ಮನೆಗೆ ಪಕ್ಷದ ತತ್ವ ಸಿದಾಂತವನ್ನು ತೆಗೆದುಕೊಂಡು ಹೋಗಿದ್ದರು. ಹಾವೇರಿ ಜಿಲ್ಲೆಯೂ ಹಿಂದುಳಿದಿದ್ದು, ಪಕ್ಷದ ಸಿದ್ದಾಂತಗಳು ಅವರ ಪರವಾಗಿ ಇವೆ.
ತಳಮಟ್ಟದಿಂದ ಸಂಘಟನೆ ಮಾಡಿದರೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಎಸ್ಪಿ ಪಕ್ಷ ತಮ್ಮ ಪ್ರಾಬಲ್ಯತೆ ತೊರಿಸಬಹುದು. ಎಲ್ಲ ಮುಖಂಡರು, ಕಾರ್ಯಕರ್ತರು ಪಕ್ಷದ ಸಂಘಟನೆಗೆ ಮುಂದಾಗಬೇಕು.ಜಿಲ್ಲಾಧ್ಯಕ್ಷರಾಗಿ 10 ವರ್ಷಗಳಿಂದ ಅಶೋಕ ಮರೆಣ್ಣನವರ ಪಕ್ಷ ಸಂಘಟನೆಗೆ ಶ್ರಮವಹಿಸುತ್ತಿದ್ದು, ಇವರನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಅವರ ನಾಯತ್ವದಲ್ಲಿ ಹೆಚ್ಚಿನ ಸಂಘಟನೆಗೆ ಎಲ್ಲರೂ ಸಜ್ಜಾಗಬೇಕು ಎಂದರು.
ಜಿಲ್ಲಾಧ್ಯಕ್ಷ ಅಶೋಕ ಮರೆಣ್ಣನವರ ಮಾತನಾಡಿ ಬಿಎಸ್ಪಿ ಪಕ್ಷಕ್ಕೆ 2002 ರಿಂದ ಪಕ್ಷದ ತತ್ವ ಸಿದ್ದಾಂತ ಒಪ್ಪಿ ಸೇರ್ಪಡೆಯಾಗಿದ್ದು, ಪಕ್ಷದ ನಿಷ್ಠಾವಂತನಾಗಿ ಪಕ್ಷದ ಎಲ್ಲ ಜವಾಬ್ದಾರಿಗಳನ್ನು ಪ್ರಮಾಣಿಕವಾಗಿ ನಿರ್ವಹಿಸಿದ್ದೇನೆ. ಪಕ್ಷದ ಸಂಘಟನೆಗೆ ತಾವೇಲ್ಲರೂ ಸತತ ಸಹಕಾರ ನೀಡಿದ್ದೀರಿ ನನ್ನನ್ನು ಮುಂದುವರಿಸಿದ ರಾಜ್ಯ ಸಮಿತಿಗೆ ಹಾಗೂ ಇದಕ್ಕೆ ಕಾರಣಿಕರ್ತರಾದ ಜಿಲ್ಲೆಯ ಎಲ್ಲ ಮುಖಂಡರಿಗೂ ,ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸುತ್ತೇನೆ.
ಪಕ್ಷ ಕಳೆದ ಬಾರಿ ಹಲವಾರು ಚುನಾವಣೆ ಎದುರಿಸಿದ್ದೇವೆ. ಪಕ್ಷವನ್ನು ಹಳ್ಳಿ ಮಟ್ಟದಲ್ಲಿ ಕಟ್ಟಬೇಕಾದರೆ ಬಿಎಸ್ಪಿ ಪಕ್ಷದ ಕಾರ್ಯಕರ್ತರು ಪಕ್ಷದ ಜೀವಾಳವಾಗಿ ದುಡಿದು ಪಕ್ಷದ ಬಿಲಿಷ್ಠತೆಗೆ ಮುಂದಾಗೋಣ. ಲೋಕಸಭಾ ಚುನಾವಣೆಯನ್ನು ಅಕ್ಕ ಮಾಯಾವತಿಯವರು ಮಹತ್ವ ಪೂರ್ಣವಾಗಿ ತೆಗೆದುಕೊಂಡಿದ್ದು, ಅವರಿಗೆ ಬೆಂಬಲವಾಗಿ ಎಲ್ಲ ವರ್ಗದ ಜನರ ಆಶೋತ್ತರಗಳ ಇಡೇರಿಕೆಗಾಗಿ ನಾವು ಮುಂದಾಗೋಣ ಎಂದು ಕಾರ್ಯಕರ್ತರನ್ನು ಹುರುದುಂಬಿಸಿದರು. ಈ ಸಂದರ್ಭದಲ್ಲಿ ಪಕ್ಷ ಮುಖಂಡರಾದ ವಿಜಯಕುಮಾರ ವ್ಹಿ. ಎಂಕೆ ಮಖಬೂಲ್.ಎನ್ಟಿ ಮಂಜುನಾಥ. ಟಿ ಶಿವಕುಮಾರ.ಮಹಿಳಾ ಘಟಕದ ಜಿಲ್ಲಾಧ್ಯಕ್ಷ ರೂಪಾ ಎನ್.ರೇಖಾ ಮಂಗಳೂರ. ಅಬ್ದುಲ್ ಖಾದರ ಧಾರವಾಡ. ಶಂಭುಲಿಂಗ ಹನಗೊಡಿಮಠ. ಸುರಜ್ ಆಲದಗೇರಿ.ಹನಮಂತ ದೊಡ್ಡಮನಿ.ಮಾರುತಿ ಅಕ್ಕಿಆಲೂರ.ನಾಗರಾಜ ಬ್ಯಾಡಗಿ ಸೇರಿದಂತೆ ಪಕ್ಷದ ಜಿಲ್ಲಾ, ತಾಲೂಕ ಪದಾಧಿಕಾರಿಗಳು,ವಿವಿಧ ಘಟಕಗಳ ಮುಖಂಡರು,ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ