ಹಾನಗಲ್ಲ :
ನಾಲ್ಕು ಸಾವಿರಕ್ಕೂ ಅಧಿಕ ರೈತರ 2016-17 ರ ಬೆಳೆವಿಮೆ ಇನ್ನೂ ರೈತರ ಖಾತಗಳಿಗೆ ಜಮಾ ಆಗದೇ, ಬ್ಯಾಂಕ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ನಡುವಿನ ಸಂಪರ್ಕ ಕೊರತೆಯಿಂದ ರೈತರು ಪ್ರತಿಭಟನೆಯ ಹಾದಿಯಲ್ಲಿರುವುದನ್ನು ತಾತ್ಕಾಲಿಕವಾಗಿ ತಡೆದು ಒಂದು ತಿಂಗಳಲ್ಲಿ ಸಮಸ್ಯೆ ಪರಿಹರಿಸುವ ಭರವಸೆಯನ್ನು ಕೃಷಿ ಇಲಾಖೆ ಜಂಟಿ ನಿರ್ದೆಶಕ ಬಿ.ಮಂಜುನಾಥ ನೀಡಿದ್ದಾರೆ.
ಹಾನಗಲ್ಲಿನ ಕೃಷಿ ಇಲಾಖೆಯಲ್ಲಿ ನಡೆದ ರೈತ ಸಂಘ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಸಂಧಾನ ಸಭೆಯಲ್ಲಿ ಮಾತನಾಡಿದ ಅವರು, ಬ್ಯಾಂಕ ಅಧಿಕಾರಿಗಳು ಹಾಗೂ ವಿಮಾ ಕಂಪನಿಯ ಮಾಹಿತಿ ಲೋಪದಿಂದಾಗಿ ರಾಜ್ಯದಲ್ಲಿ ಬಲು ದೊಡ್ಡ ಪ್ರಮಾಣ ಇಂತಹ ಅನಾನುಕೂಲವಾಗಿವೆ.
ಈ ಬಗ್ಗೆ ಸರಕಾರವೂ ಕೂಡ ಎಚ್ಚರಿಕೆಯಿಂದ ಕೆಲಸ ಮಾಡುತ್ತಿದೆ. ಈ ಬಗ್ಗೆ ವಿಮಾ ಕಂಪನಿ ಹಾಗೂ ಬ್ಯಾಂಕ ಅಧಿಕಾರಿಗಳ ಜೊತೆ ಚರ್ಚೆಯೂ ನಡೆದಿದೆ. ಈ ಸಮಸ್ಯೆ ಪರಿಹಾರದಲ್ಲಿ ಯಾವುದೇ ಸಂಶಯ ಬೇಡ. ಬ್ಯಾಂಕ ಅಧಿಕಾರಿಳಾಗಲಿ ಅಥವಾ ವಿಮಾ ಕಂಪನಿಯಾಗಲೀ ಮಾತುಕತೆ ಮೂಲಕ ಸಮಸ್ಯೆ ಪರಿಹರಿಸಿಕೊಂಡು ರೈತರಿಗೆ ಬೆಳೆ ವಿಮೆ ನೀಡಬೇಕು ಎಂದು ಒತ್ತಾಯಿಸಲಾಗಿದೆ. 20 ದಿನಗಳಲ್ಲಿ ಈ ಸಮಸ್ಯೆಗೆ ಪೂರ್ಣ ಪರಿಹಾರ ದೊರೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಸರಕಾರದ ಕೃಷಿ ಇಲಾಖೆಯ ಎಲ್ಲ ಅಧಿಕಾರಿಗಳು ಹಾಗೂ ಕೃಷಿ ಸಚಿವರು ಕೂಡ ಈ ಬಗ್ಗೆ ಹೆಚ್ಚು ಆಸಕ್ತಿಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ . ರಾಜ್ಯದ 30 ಜಿಲ್ಲೆಗಳಲ್ಲಿ ಇಂತಹ ಸಮಸ್ಯೆಗಳಾಗಿವೆ. ರೈತರು ವಾಸ್ತವದ ಅರಿವು ಮೂಡಿಸಿದ್ದಾರೆ. ರೈತರಿಗೆ ಯಾವುದೆ ಪರಿಸ್ಥಿತಿಯಲ್ಲಿ ಅನ್ಯಾಯಕ್ಕೆ ಅವಕಾಶ ಮಾಡುವುದಿಲ್ಲ ಎಂದು ಭರವಸೆ ನೀಡಿದರು. ಹಾನಗಲ್ಲ ತಾಲೂಕಿನ 4386 ರೈತರ 11 ಕೋಟಿ ರೂ ಭತ್ತದ ಬೆಳೆವಿಮೆ ಬಾಕಿ ಬರಬೇಕಾಗಿದೆ. ಕೃಷಿ ಇಲಾಖೆ ಈ ವಿಷಯಲ್ಲಿ ನಿರ್ಲಕ್ಕ ತೋರುವುದಿಲ್ಲ ಎಂದು ಭರವಸೆ ನೀಡಿದರು.