ಹಗರಿಬೊಮ್ಮನಹಳ್ಳಿ:
ರಾಯಚೂರು ಬಳ್ಳಾರಿ ಹಾಗೂ ಕೊಪ್ಪಳ ಹಾಲು ಉತ್ಪಾದಕರ ಒಕ್ಕೂಟದ ವ್ಯಾಪ್ತಿಯಲ್ಲಿ ಮೇಗಾಡೈರಿಗಳನ್ನು ಸ್ಥಾಪನೆ ಮಾಡಲಾಗುವು ದೆಂದು ಬಂಜಾರ್ ಅಭಿವೃದ್ಧಿ ನಿಗಮ ಅಧ್ಯಕ್ಷರಾದ ಎಸ್.ಭೀಮಾನಾಯ್ಕ ಹೇಳಿದರು.
ಅವರು ಪಟ್ಟಣದ ಶ್ರೀಕನ್ನಿಕಾಪರಮೇಶ್ವರಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ರಾಬಕೊ ಒಕ್ಕೂಟ ಎನ್‍ಡಿಪಿ-01, ವಿಡಿಎಂಪಿಎನ್ ಯೋಜನೆಯಡಿಯಲ್ಲಿ ಜಾಗೃತಿ ಅಭಿಯಾನ ಮತ್ತು ವಿಶ್ವ ಹಾಲು ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಹಾಲು ಉತ್ಪಾದನೆಯನ್ನು ಇನ್ನಷ್ಟು ಹೆಚ್ಚಿಸಬೇಕು ಇದರಿಂದ ಕುಟುಂಬಗಳ ಜೀವನ ನಿರ್ವಹಣೆ ಸುಗಮವಾಗಿರುತ್ತೆ. ಹಾಲು ಉತ್ಪಾದನೆಯು ಉಪ ಕಸುಬಾಗಿ ಸ್ವೀಕರಿಸಬೇಕು ಎಂದು ತಿಳಿಸಿದರು.
ಸಾನ್ನಿಧ್ಯವಹಿಸಿದ್ದ ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಹಾಲವೀರಪ್ಪಜ್ಜ ಮಾತನಾಡಿ, ಗ್ರಾಮೀಣ ಪ್ರದೇಶದ ಪ್ರತಿಯೊಬ್ಬ ರೈತರು ಹಾಲು ಉತ್ಪಾದನೆಯಲ್ಲಿ ತೊಡಗಿಕೊಳ್ಳಬೇಕು. ದೇಶಿ ಹಸುಗನ್ನು ಸಾಕಬೇಕು ಇದರಿಂದ ಪೌಷ್ಠಿಕಾಂಶ ಹಾಲು ದೊರೆಯುತ್ತವೆ ಎಂದು ಕರೆ ನೀಡಿದರು.ಈ ಸಂದರ್ಭದಲ್ಲಿ ಒಕ್ಕೂಟದ ಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಜನಪ್ರತಿನಿಧೀಗಳು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ