ಹೂವಿನಹಡಗಲಿ :
ಬಳ್ಳಾರಿ ಜಿಲ್ಲಾ ಶಾಮಿಯಾನ, ಲೈಟಿಂಗ್ ಹಾಗೂ ಡೆಕೋರೇಟರ್ಸ್ ಮಾಲೀಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ತಾಲೂಕಿನ ಹೊಳಗುಂದಿ ಗ್ರಾಮದ ಶ್ರೀ ಸಿದ್ಧಲಿಂ ಗೇಶ್ವರ ದೇವಸ್ಥಾನದ ಆವರಣದಲ್ಲಿ ನಡೆಯಿತು.
ಗೌರವ ಅಧ್ಯಕ್ಷ ಡಿ.ಶಿವಪ್ರಸಾದ ಬಳ್ಳಾರಿ, ಅಧ್ಯಕ್ಷರು ಕೆ.ನರಸಿಂಹಮೂರ್ತಿ ಅಪ್ಪಣ್ಣ ಹೊಸಪೇಟೆ, ಉಪಾಧ್ಯಕ್ಷ ಬನ್ನಿಕಲ್ ರವಿ ಹೂವಿನಹಡಗಲಿ, ಪ್ರಧಾನ ಕಾರ್ಯದರ್ಶಿ ವಿ.ಜಂಬಣ್ಣ, ಸಹಕಾರ್ಯದರ್ಶಿಗಳು ಎನ್.ನಾಗರಾಜ ಸಂಡೂರು, ಎಂ.ಡಿ.ಮಾಬುಬಾಷ ಕೂಡ್ಲಿಗಿ, ಖಜಾಂಚಿ ಬಿ.ಎಂ.ಸೋಮಶೇಖರ್, ಸಂಘಟನಾ ಕಾರ್ಯದರ್ಶಿ ಎಂ.ಮಂಜುನಾಥ್ ಹೊಸಪೇಟೆ, ಗೌರವ ಸಲಹಾ ಸಮಿತಿ ಸದಸ್ಯರು ಅರಮನೆ ಕೊಟ್ರೇಶ್ ಕೊಟ್ಟೂರು, ಮಲ್ಲಯ್ಯ ಹೆಚ್.ಬಿ.ಹಳ್ಳಿ, ಬಿ.ಶೇಷಯ್ಯ ಸಿರುಗುಪ್ಪ,
ನಿರ್ದೇಶಕರು ರಘುರಾಮ ಬಳ್ಳಾರಿ, ರಾಜಶೇಖರ ಹೆಚ್.ಬಿ.ಹಳ್ಳಿ, ಸೋಮಶೇಖರ ಸಂಡೂರು, ಮಾಬುಸಾಬ್ ಸಿರುಗುಪ್ಪ, ಎಂ.ಡಿ.ಪ್ರಕಾಶ ಹೂವಿನಹಡಗಲಿ, ನೂರುಭಾಷ ಕಂಪ್ಲಿ, ನಾಗರಾಜ ಕಂಪ್ಲಿ, ಜೆ.ಕೊಟ್ರೇಶ್ ಕೊಟ್ಟೂರು, ಮಾರೇಶ್ ಕೂಡ್ಲಿಗಿ. ಆಯ್ಕೆಯಾಗಿದ್ದಾರೆ. ಬಳ್ಳಾರಿ ಜಿಲ್ಲೆಯ ಎಲ್ಲಾ ತಾಲೂಕಿನ ಪಧಾದಿಕಾರಿಗಳು ಹಾಜರಿದ್ದು ಅವಿರೋಧವಾಗಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಈ ಸಂದಭರ್ದಲ್ಲಿ ಹೂವಿನಹಡಗಲಿ ತಾಲೂಕು ಶಾಮಿಯಾನ ಮಾಲೀಕರ ಸಂಘದ ಅಧ್ಯಕ್ಷ ಜೆ.ಶಿವಮೂರ್ತೆಪ್ಪ, ಕಾರ್ಯದರ್ಶಿ ಜಿಲಾನ್ ಭಾಷ ಸೇರಿದಂತೆ ತಾಲೂಕಿನ ಎಲ್ಲಾ ಮಾಲಿಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
