ಹೂವಿನಹಡಗಲಿ :
ರಾಹುಲ್‍ಗಾಂಧಿಯವರ ಅತ್ಯಂತ ಮಹತ್ವದ ಕಾಂಗ್ರೆಸ್ ಕಾರ್ಯಕರ್ತರ ನೊಂದಣಿ ಅಭಿಯಾನ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಜಿಲ್ಲಾಧ್ಯಕ್ಷರಾದ ಬಿ.ವಿ.ಶಿವಯೋಗಿ ಚಾಲೆನ ನೀಡಿ ಮಾತನಾಡಿದರು.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ದನೆಗಾಗಿ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ರಾಹುಲ್‍ಗಾಂಧಿ ಶಕ್ತಿ ಕಾರ್ಯಕ್ರಮ ಜಾರಿಗೊಂಡಿದ್ದು, ಕಾರ್ಯಕರ್ತರು ಸದಸ್ಯತ್ವ ನೊಂದಣಿ ಅಭಿಯಾನವನ್ನು ತೀವ್ರಗತಿಯಲ್ಲಿ ಮಾಡಬೇಕೆಂದು ತಿಳಿಸಿದರು.
ಈಗಾಗಲೇ ಬೇರೆ ಭಾಗದಲ್ಲಿ ಅಭಿಯಾನ ಕಾರ್ಯವು ಚುರುಕಿನಿಂದ ಸಾಗಿದ್ದು, ಹೂವಿನಹಡಗಲಿ ವಿಧಾನಸಭಾ ಮತಕ್ಷೇತ್ರದ ವ್ಯಾಪ್ತಿಯಲ್ಲಿ ನೊಂದಣಿ ಕಾರ್ಯ ಅತ್ಯಂತ ಅಲ್ಪ ಪ್ರಮಾಣದಲ್ಲಿ ಇರುವುದರಿಂದ ಕಾರ್ಯಕರ್ತರು ಮನೆ ಮನೆಗೆ ತೆರಳಿ ಮೊಬೈಲ್‍ನಲ್ಲಿ ಚುನಾವಣಾ ಗುರುತಿನ ಚೀಟಿಯ ಸಂಖ್ಯೆಯನ್ನು ಹ್ಯಾಪ್ ಮೂಲಕ ನೊಂದಾಯಿಸಿ ಕಾಂಗ್ರೆಸ್ ಪಕ್ಷದ ಸದಸ್ಯರನ್ನಾಗಿ ಮಾಡಿಕೊಳ್ಳಬೇಕೆಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷ ವಾರದ ಗೌಸ್‍ಮೊಹಿದ್ದೀನ್ ಮಾತನಾಡಿ ನೂತನ ಕಾರ್ಯಕ್ರಮವು ಅತ್ಯಂತ ಮಹತ್ವವನ್ನು ಹೊಂದಿದ್ದು, ಪಕ್ಷದ ಸಂಘಟನೆಗೆ ಹಾಗೂ ಕಾರ್ಯಕರ್ತರ ಧ್ವನಿಗೆ ಒಂದು ಉತ್ತಮವಾದಂತಹ ಕಾರ್ಯವಾಗಲಿದ್ದು, ತಾವು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸದಸ್ಯತ್ವ ನೊಂದಣಿ ಮಾಡಿದರೆ ಸ್ವತಃ ರಾಹುಲ್‍ಗಾಂಧಿಯವರೇ ಅಂತಹವರ ಜೊತೆಯಲ್ಲಿ ದೂರವಾಣಿ ಸಂಪರ್ಕದಲ್ಲಿ ಮಾತನಾಡುವ ಅವಕಾಶವಿದೆ ಎಂದು ಹೇಳಿದರು.
ಇದು ಕಾಂಗ್ರೆಸ್ ಪಕ್ಷದ ಬ್ಲಾಕ್ ಅಧ್ಯಕ್ಷರುಗಳು, ಜಿಲ್ಲಾಧ್ಯಕ್ಷರು, ಹಾಗೂ ಪ್ರತಿಯೊಬ್ಬ ಕಾರ್ಯಕರ್ತರ ಆದ್ಯ ಕರ್ತವ್ಯವಾಗಿದ್ದು, ಶಾಸಕರಾದ ಪಿ.ಟಿ.ಪರಮೇಶ್ವರನಾಯ್ಕರ ಕೈ ಬಲಪಡಿಸಲು ಈಗಾಗಲೇ ಸದಸ್ಯತ್ವ ನೊಂದಣಿ ದಿನಾಂಕವು ಪೂರ್ಣಗೊಳ್ಳುವ ಹಂತದಲ್ಲಿ ಇರುವಾಗ ಶೀಘ್ರದಲ್ಲಿ ನೊಂದಣಿ ಕಾರ್ಯವನ್ನು ಮಾಡಿ, ಪಕ್ಷ ಸಂಘಟನೆಗೆ ಸಹಕರಿಸಬೇಕೆಂದು ವಿನಂತಿಸಿದರು.
ಹಡಗಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಪರಮೇಶ್ವರಪ್ಪ, ಇಟ್ಟಿಗಿ ಬ್ಲಾಕ್ ಅಧ್ಯಕ್ಷರಾದ ಐಗೋಳ್ ಚಿದಾನಂದ, ಜಿಲ್ಲಾ ವಕ್ತಾರರಾದ ಬಿ.ಎಲ್.ಶ್ರೀಧರ, ಪ್ರಚಾರ ಸಮಿತಿ ಅಧ್ಯಕ್ಷ ಜಿ.ವಸಂತ, ಡಿಸಿಸಿ ಸದಸ್ಯ ಬ್ಯಾಲಹುಣ್ಸಿ ಬಸವನಗೌಡ, ಯುವ ಕಾಂಗೈ ಅಧ್ಯಕ್ಷ ಗಡಿಗಿ ಕೃಷ್ಣ, ಇಟ್ಟಿಗಿ ಬ್ಲಾಖ್ ಎಸ್.ಸಿ. ಘಟಕದ ಅಧ್ಯಕ್ಷ ಎಲ್.ಚಂದ್ರನಾಯ್ಕ, ಓಬಿಸಿ ಘಟಕದ ಅಧ್ಯಕ್ಷ ಶಿವಕುಮಾರ, ಕಿಸಾನ್ ಸೆಲ್ ಅಧ್ಯಕ್ಷ ಎಸ್.ಹಾಲೇಶ, ಗುರುವಿನ ರಾಜು, ಎಸ್.ಮಲ್ಲಿಕಾರ್ಜುನ, ಲೋಹಿತ್, ಸೇರಿದಂತೆ ಹಲವರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ