ಅಹಿಂಸಾ ಮಾರ್ಗ ಎಲ್ಲಾ ರಾಷ್ಟ್ರಗಳಿಗೂ ಪ್ರಸ್ತುತ

ದಾವಣಗೆರೆ:

       ಮಹಾತ್ಮ ಗಾಂಧೀಜಿ ಅವರ ಅಹಿಂಸಾ ಮಾರ್ಗ ಪ್ರಪಂಚದ ಎಲ್ಲಾ ರಾಷ್ಟ್ರಗಳಿಗೂ ಪ್ರಸ್ತುತವಾಗಿದೆ ಎಂದು ಚಿಂತಕ, ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಪ್ರತಿಪಾದಿಸಿದರು.

        ನಗರದ ಎವಿಕೆ ಮಹಿಳಾ ಕಾಲೇಜಿ ಆವರಣದಲ್ಲಿರುವ ಶ್ರೀಮತಿ ಪಾರ್ವತಮ್ಮ ಶಿವಶಂಕರಪ್ಪ ಸಭಾಂಗಣದಲ್ಲಿ ಮಂಗಳವಾರ ಬಾಪೂಜಿ ವಿದ್ಯಾಸಂಸ್ಥೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ವೇದಿಕೆ ಆಶ್ರಯದಲ್ಲಿ ಏರ್ಪಡಿಸಿದ್ದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ 150ನೇ ಜನ್ಮದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

       ಗಾಂಧೀಜಿ ಎಲ್ಲರ ಅಭಿಪ್ರಾಯಗಳನ್ನು ಗೌರವಿಸುತ್ತಿದ್ದರು. ಅವರು ಅಸ್ಪøಷ್ಯರ ಶತೃವೂ ಅಲ್ಲ. ಅಲ್ಲದೇ, ಗಾಂಧೀಜಿ ಅವರ ನಡತೆ ಅಪ್ರಮಾಣಿಕವಾಗಿಯೂ ಇಲ್ಲ. ಹೀಗಾಗಿ ಮಹಾತ್ಮ ಗಾಂಧೀಜಿ ಅವರ ಚಿಂತನೆ, ತತ್ವಾದರ್ಶಗಳ ಬಗ್ಗೆ ಮರು ಚಿಂತನೆ ನಡೆಸುವ ಕೆಲಸವಾಗಬೇಕಾಗಿದೆ. ಏಕೆಂದರೆ, ಗಾಂಧಿಯ ಅಹಿಂಸಾ ಮಾರ್ಗವೂ ಸರ್ವಕಾಲ ಹಾಗೂ ಜಗತ್ತಿನ ಎಲ್ಲಾ ರಾಷ್ಟ್ರಗಳಿಗೂ ಪ್ರಸ್ತುತವಾಗಿವೆ ಎಂದು ಹೇಳಿದರು.

       ಸ್ವಾತಂತ್ರ ಹೋರಾಟ ಸಂದರ್ಭದಲ್ಲಿ ಅಸ್ಪಷ್ಯರಲ್ಲದವರ ಹಾಗೂ ಮುಂಚೂಣಿ ನಾಯಕರ ಪೈಕಿ ಗಾಂಧೀಜಿ ಮಾತ್ರ ಅಸ್ಪøಶ್ಯತೆ ಮತ್ತು ಜಾತಿ ಪದ್ಧತಿ ನಿರ್ಮೂಲನೆ ಮಾಡಲು ಹೋರಾಟ ಆರಂಭಿಸಿದ್ದರು. ಸ್ವತಃ ಅಸ್ಪøಷ್ಯರಾಗಿ ಹುಟ್ಟಿದ ಅಂಬೇಡ್ಕರ್ ಅದರ ವಿರುದ್ಧ ಹೋರಾಡುವುದು ಸಹಜ.

        ಆದರೆ, ಮೇಲ್ಜಾತಿಯವರ ಪೈಕಿ ತಳ ಸಮುದಾಯದವರ ಪರವಾಗಿ ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು.ಕಾಂಗ್ರೆಸ್ ಅಧ್ಯಕ್ಷರಾಗುವ ವೇಳೆ ಅವರು ಕಾಂಗ್ರೆಸ್ ಸದಸ್ಯರಿಗೆ ಹಲವಾರು ಷರತ್ತುಗಲನ್ನು ವಿಧಿಸಿದ್ದರು. ಖಾದಿ ಧರಿಸಬೇಕು. ಮದ್ಯ ಬಿಡಬೇಕು ಹಾಗೂ ಅಸ್ಪೃಶ್ಯ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳಬೇಕು ಎಂಬುದು ಅವರ ಷರತ್ತುಗಳಾಗಿದ್ದವು. ಆದರೆ, ಕಾಂಗ್ರೆಸ್ ಸದಸ್ಯರು ಖಾದಿ ಒಪ್ಪಿಕೊಂಡರು. ಮದ್ಯವನ್ನು ಕದ್ದು ಮುಚ್ಚಿ ಸೇವಿಸಲು ತೊಡಗಿದರು. ಆದರೆ, ಅಸ್ಪೃಶ್ಯ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಳ್ಳುವ ವಿಷಯದಲ್ಲಿ ಮಾತ್ರ ಸ್ವಲ್ಪವೂ ಒಪ್ಪಲಿಲ್ಲ. ಕೊನೆಗೆ ಗಾಂಧೀಜಿ ತಮ್ಮ ಷರತ್ತನ್ನು ಸಡಿಲಿಸಬೇಕಾಯಿತು. ಇಷ್ಟಾದರೂ, ಗಾಂಧೀಜಿ ಅಸ್ಪೃಶ್ಯ ಹೆಣ್ಣು ಮಕ್ಕಳ ಬಗ್ಗೆ ಹೊಂದಿದ್ದ ಕಾಳಜಿ ಮರೆಯಲಾಗದು ಎಂದರು.

       ಮಹಾತ್ಮ ಗಾಂಧಿಜೀಯವರ ವೈರುಧ್ಯ, ವಿರೋಧ ಚಿಂತನೆ ಸೇರಿದಂತೆ ಅನೇಕ ವೈಜ್ಞಾನಿಕ ಕಾರಣಕ್ಕೆ ಅವರನ್ನು ಅತೀಹೆಚ್ಚು ಟೀಕಿಸಿದ್ದು ಡಾ. ಬಿ.ಆರ್.ಅಂಬೇಡ್ಕರ್. ಅಸ್ಪøಶ್ಯತೆ, ಜಾತಿಯತೆ ತೊಲಗಿದರೆ ಹಿಂದೂ ಧರ್ಮ ಪವಿತ್ರವಾಗುತ್ತದೆ ಎಂಬುದು ಗಾಂಧೀಜಿ ಕಲ್ಪನೆಯಾಗಿತ್ತು. ಹಿಂದೂ ಧರ್ಮವೊಂದು ಅಸಮಾನತೆಯ ಕೂಟ. ಹಿಂದೂ ಧರ್ಮದಿಂದಲೇ ಅಸ್ಪಶ್ಯತೆ ಹೆಚ್ಚುತ್ತಿದೆ ಎಂದು ಅಂಬೇಡ್ಕರ್ ವಾದಿಸುತ್ತಿದ್ದರು.

        ಆದರೂ, ಗಾಂಧೀಜಿ ಹಿಂದೂಧರ್ಮದ ಬಗ್ಗೆ ಅಪಾರ ಗೌರವ ಹೊಂದಿದ್ದರು. ಅಲ್ಲದೆ, ಬೃಹತ್ ಕೈಗಾರಿಕೆಗಳಿಂದ ಶೀಘ್ರ ದೇಶಾಭಿವೃದ್ಧಿ ಎಂದು ನೆಹರೂ ಪ್ರತಿಪಾದಿಸಿದರೆ ಗುಡಿ ಕೈಗಾರಿಕೆ, ಸಣ್ಣ ಕೈಗಾರಿಕೆಗಳೇ ಅತೀಮುಖ್ಯ ಎಂದು ಗಾಂಧೀ ಪ್ರತಿಪಾದಿಸುತ್ತಿದ್ದರು.

       ಹೀಗೆ ಅನೇಕ ವಿಚಾರಗಳಲ್ಲಿ ಅಂಬೇಡ್ಕರ್ ಗಾಂಧೀಯನ್ನು ವೈಜ್ಞಾನಿಕ ಕಾರಣಕ್ಕೆ ಟೀಕಿಸಿದರೂ ಕೂಡಾ ಅಂಬೇಡ್ಕರ್ ಅವರನ್ನು ಸಂವಿಧಾನ ರಚನಾ ಸಮಿತಿಗೆ ಅಧ್ಯಕ್ಷರನ್ನಾಗಿಸುವ ಮೂಲಕ ತನ್ನ ವಿರುದ್ಧದ ಅಭಿಪ್ರಾಯಗಳನ್ನು ಗೌರವಿಸಿದ್ದರು ಇದೆ ನೈಜ ಪ್ರಜಾಪ್ರಭುತ್ವದ ಗುಣ ಎಂದು ವಿಶ್ಲೇಷಿಸಿದರು.

       ಗಾಂಧೀಜಿ ಅವರನ್ನು ಅಂಬೇಡ್ಕರ್ ಅವರ ಮೂಲಕ ಅಧ್ಯಯನ ಮಾಡಿ, ಅವರನ್ನು ತೀವ್ರ ಟೀಕೆಗೆ ಗುರಿ ಮಾಡಲಾಗಿದೆ. ಆದರೆ, ಗಾಂಧೀಜಿಯವರನ್ನು ಪ್ರತ್ಯೇಕವಾಗಿ ಓದಿದಾಗ ಅವರು ನಮ್ಮ ಸಂದರ್ಭಕ್ಕೆ ಪ್ರಸ್ತುತರಾಗುತ್ತಾರೆ ಎಂದ ಅವರು, ದಕ್ಷಿಣ ಆಫ್ರಿಕಾದಲ್ಲಿ ಗಾಂಧೀಜಿ ಅನುಭವಿಸಿದ ವರ್ಣಭೇದ ನೀತಿ ಅವರಲ್ಲಿ ಒಬ್ಬ ಪ್ರತಿಭಟನಾಕಾರರನ್ನು ಹುಟ್ಟು ಹಾಕಿತು. ಭಾರತದಲ್ಲಿ ಮಧ್ಯಮ ವರ್ಗದ ಉನ್ನತ ಜಾತಿಯವರಾಗಿದ್ದ ಗಾಂಧೀಜಿ, ಎಂದೂ ಭೇದಭಾವಕ್ಕೆ ಗುರಿಯಾದವರಲ್ಲ. ಆದರೆ, ಆಫ್ರಿಕಾದಲ್ಲಿ ಕರಿಯರನ್ನು ನಡೆಸಿಕೊಂಡ ರೀತಿ ನೋಡಿದಾಗ, ಭಾರತದಲ್ಲಿ ಅಸ್ಪೃಶ್ಯರನ್ನು ಕಾಣುತ್ತಿದ್ದ ರೀತಿ ಅವರಿಗೆ ಅರ್ಥವಾಯಿತು ಎಂದರು.

       ಗಾಂಧೀಜಿ ಪ್ರಾಯೋಗಿಕ ವ್ಯಕ್ತಿಯಾಗಿದ್ದರು. ಆದರೂ, ಕೆಲವೊಮ್ಮೆ ನಾನು ಪಾಲಿಸುವುದನ್ನು ಬೇರೆಯವರೂ ಪಾಲಿಸಲಿ ಎಂದು ಷರತ್ತು ವಿಧಿಸುತ್ತಿದ್ದರು. ಜನಸಂಖ್ಯೆ ನಿಯಂತ್ರಣಕ್ಕಾಗಿ ಬ್ರಹ್ಮಚರ್ಯ ಪಾಲಿಸಿ ಎಂಬ ಅಸಾಧ್ಯವಾದ ಕರೆಯನ್ನೂ ಅವರು ನೀಡಿದರು. ಇದೆಲ್ಲದರ ನಡುವೆ, ಸತ್ಯ ಅಂಹಿಂಸೆಯ ಬಗ್ಗೆ ಗಾಂಧಿ ನಿಷ್ಠರಾಗಿದ್ದರು. ಸತ್ಯದ ಜೊತೆಗಿನ ಪ್ರಯೋಗವೇ ಜೀವನ ಎಂಬುದಾಗಿ ಭಾವಿಸಿದ್ದರು. ಗಾಂಧೀಜಿ ತಮ್ಮ ಹೆಂಡತಿ, ಮಕ್ಕಳಿಗಾಗಿ ಯಾವೊಂದು ಸೌಲಭ್ಯವನ್ನೂ ಬಯಸಿದವರಲ್ಲ. ಅವರ ಮಗ ದೇವದಾಸ್ ಬೀದಿಗೆ ಬಿದ್ದರೂ ಸಹ, ಗಾಂಧೀಜಿ ತಮ್ಮ ಸಿದ್ಧಾಂತಗಳಿಂದ ಹಿಂದೆ ಸರಿಯಲಿಲ್ಲ. ದೇಶದ ಎಲ್ಲರೂ ತಮ್ಮ ಮಕ್ಕಳೇ, ಹೀಗಿರುವಾಗ ತಮ್ಮ ಒಬ್ಬ ಮಗನಿಗೆ ಪ್ರತ್ಯೇಕ ನೆರವು ನೀಡುವುದು ತಪ್ಪು ಎಂದು ಭಾವಿಸಿದ್ದರು. ಈಗ ರಾಜಕಾರಣಿಗಳಿಗೆ ಅಂತಹ ಗುಣಗಳನ್ನು ಪಾಲಿಸಬೇಕೆಂದು ಕಡ್ಡಾಯ ಮಾಡಿದರೆ, ಯಾರೂ ರಾಜಕೀಯಕ್ಕೆ ಬರುವುದೇ ಇಲ್ಲ ಎಂದು ಮಾರ್ಮಿಕವಾಗಿ ನುಡಿದರು.

      ಜನಪದ ತಜ್ಞ ಎಂ.ಜಿ. ಈಶ್ವರಪ್ಪ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕೆಂಗಬಾಲಯ್ಯ, ಮಾನವ ಹಕ್ಕುಗಳ ವೇದಿಕೆ ಅಧ್ಯಕ್ಷ ಬಿ.ಎಂ.ಹನುಮಂತಪ್ಪ, ಮಾನವ ಹಕ್ಕುಗಳ ವೇದಿಕೆ ಕಾರ್ಯದರ್ಶಿ ಎಲ್.ಎಚ್.ಅರುಣಕುಮಾರ್, ಡಿಆರ್‍ಎಂ ಕಾಲೇಜು ಪ್ರಾಂಶುಪಾಲರಾದ ನಾಗರತ್ಮಮ್ಮ, ಎಆರ್‍ಜಿ ಕಾಲೇಜಿನ ಪ್ರಾಚಾರ್ಯ ಬಸವರಾಜಪ್ಪ, ಶಿವಪ್ಪ, ಗೋಪಾಲ, ಬೊಮ್ಮಣ್ಣ ಮತ್ತಿತರರು ಉಪಸ್ಥಿತರಿದ್ದರು. ಮಯೂರಿ, ಲಕ್ಷ್ಮೀ ಪ್ರಾರ್ಥಿಸಿದರು. ಪ್ರಾಂಶುಪಾಲ ಪ್ರೊ.ಪಿ.ಎಸ್. ಶಿವಪ್ರಕಾಶ್ ಸ್ವಾಗತಿಸಿದರು. ಪ್ರಾಚಾರ್ಯ ಡಾ.ಕೆ. ಹನುಮಂತಪ್ಪ ವಂದಿಸಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap