ಮೇವಿನ ಸಮಸ್ಯೆ ನೀಗಿಸಲು ತ್ವರಿತ ಕ್ರಮ ಅಗತ್ಯ..!!

ಹಾವೇರಿ :

       ರಾಜ್ಯದಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನರಿಗೆ ಕುಡಿಯುವ ನೀರು ಹಾಗೂ ದನಕರುಗಳಿಗೆ ನೀರಿನ ಮತ್ತು ಮೇವಿನ ಕೊರತೆ ಉಂಟಾಗುತ್ತಿದ್ದು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಶೀಘ್ರವೇ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ನವಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ದಯಾನಂದ ಪಾಟೀಲ ಹೇಳಿದರು.

      ನಗರದ ಹುಕ್ಕೇರಿಮಠದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದ ಅವರು ರೈತರ ಬಗ್ಗೆ ಸರ್ಕಾರಗಳು ಕಾಳಜಿ ತೊರುಸುತ್ತಿಲ್ಲ. ಅನ್ನದಾತ ರೈತರಿಗೆ ಜೀವನ ಭದ್ರತೆ ಒದಗಿಸಲು 60 ವರ್ಷ ಬೇಸಾಯ ಮಾಡಿದವರಿಗೆ ಮಾಶಾಸನ ನೀಡಬೇಕು. ಮುಂಗಾರು ಪ್ರಾರಂಭದಲ್ಲಿ ರೈತರಿಗೆ ಉಚಿತವಾಗಿ ಬೀಜ ಗೊಬ್ಬರ ಸರ್ಕಾರವೇ ನೀಡಬೇಕು. ಪ್ರತಿ ವರ್ಷ ರೈತರಿಗೆ ಒಂದಿಲ್ಲೊಂದು ಬೇಸಾಯಕ್ಕೆ ಸಂಬಂಧಿಸಿದಂತೆ ಅನೇಕ ಸಮಸ್ಯೆಗಳು ಎದುರಾಗುತ್ತಿವೆ.

       ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರ ರೈತಾಪಿ ವರ್ಗದ ಪಂಡಿತರು ಹಾಗೂ ತಜ್ಞರ ಸಮಿತಿ ಮಾಡಿ ಸಮಸ್ಯೆಗಳ ಪರಿಹಾರಕ್ಕಾಗಿ ಚರ್ಚೆ ಮಾಡುವಂತಾಗಬೇಕು ಎಂದು ಒತ್ತಾಯಿಸಿದರು. ನವ ಕರ್ನಾಟಕ ರೈತ ಸಂಘ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಕೈಗೊಂಡು ಅಲ್ಲಿ ಎದುರಿಸುವ ಸಮಸ್ಯೆಗಳನ್ನು ಪಟ್ಟಿ ಮಾಡಿ ಪರಿಹಾರಕ್ಕಾಗಿ ಸರ್ಕಾರಕ್ಕೆ ತಿಳಿಸಿ ಶಾಶ್ವತ ಪರಿಹಾರಕ್ಕೆ ಒತ್ತಾಯಿಸಲಾಗುತ್ತದೆ ಎಂದು ದಯಾನಂದ ಪಾಟೀಲ ಹೇಳಿದರು.

      ಪತ್ರಿಕಾಗೋಷ್ಠಿಯಲ್ಲಿ ಮಹಿಳಾ ಘಟಕದ ರಾಜ್ಯಾಧ್ಯಕ್ಷ ಶ್ರೀಮತಿ ಪುಷ್ಪಾ ಯಾದವ್.ರಾಜ್ಯ ಕಾರ್ಯದರ್ಶಿ ಎಸ್ ಮಲ್ಲಿಕಾರ್ಜುನ .ಮುಖಂಡರಾದ ಶ್ರೀಮತಿ ಭಾರತಿ ಡವಳ.ಎಂಬಿ ಜಗದೀಶ್.ಎಂ ತಿಪ್ಪೇಸ್ವಾಮಿ.ಬಿಎಸ್ ಬಾರಿಗಿಡದ. ದೀಪಾ ಪಾಟೀಲ.ಅಜೇಯ ಜಿ.ಹನುಮಂತರಾಯಪ್ಪ ಅನೇಕರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link