ಕೊಟ್ಟೂರುನಲ್ಲಿ ಮೇವಿನ ಬ್ಯಾಂಕ್‍ಗೆ ತಹಶೀಲ್ದಾರ ಚಾಲನೆ

ಕೊಟ್ಟೂರು

     ಈ ವರ್ಷ ಹಿಂಗಾರು ಹಾಗೂ ಮುಂಗಾರು ಮಳೆ ಬಾರದೆ ರೈತರ ದನ ಕರುಗಳಿಗೆ ನೀರು ಮತ್ತು ಮೇವು ಸಿಗಲಾರಾದಂತಾಗಿ ದನ ಕರುಗಳು ಸಾಯುತ್ತಿವೆ. ಇಂತಹ ಬರಗಾಲದ ಹಿನ್ನಲೆಯಲ್ಲಿ ಸರ್ಕಾರ ಕೊಟ್ಟೂರಿನಲ್ಲಿ ಮೇವು ವಿತರಣ ಕೇಂದ್ರವನ್ನು ತೆರೆದಿರುವುದು ರೈತರಿಗೆ ಸ್ವಲ್ಪ ಮಟ್ಟಿಗೆ ಹರ್ಷ ತಂದಿದೆ. ಕೊಟ್ಟೂರು ಹಾಗೂ ಸುತ್ತಮುತ್ತಲ ಗ್ರಾಮಗಳ ರೈತರು ತಮ್ಮ ದನ ಕರುಗಳಿಗೆ ಮೇವು ವಿತರಣ ಕೇಂದ್ರಕ್ಕೆ ಬಂದು ತೆಗೆದುಕೊಂಡು ಹೊಯುತ್ತಿರುವ ದೃಶ್ಯ ಕಾಣುತ್ತಿತ್ತು.

       ಪಟ್ಟಣದ ರಾಜೀವ್ ನಗರದ ಪಂಪ್ ಹೌಸ್‍ನಲ್ಲಿ ಭಾನುವಾರ ಮೇವಿನ ಬ್ಯಾಂಕ್‍ನಲ್ಲಿ ರೈತರಿಗೆ ಮೇವು ನೀಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಕೊಟ್ಟೂರು ತಾಲೂಕಿನ ಜಾನುವಾರುಗಳಿಗೆ 800 ಟನ್ ಮೇವಿನ ಅಗತ್ಯವಿದೆ ಎಂದು ತಹಶೀಲ್ದಾರ್ ಅನಿಲ್ ಕುಮಾರ್ ತಿಳಿಸಿದರು.

      ಕೊಟ್ಟೂರು ಹೋಬಳಿ ಹಾಗೂ ಪಟ್ಟಣದ ಸುತ್ತಮುತ್ತಲ ಗ್ರಾಮಗಳ ರೈತರು ಮೇವಿನ ಅರ್ಜಿಯಲ್ಲಿ ತಮ್ಮ ಜಾನುವಾರುಗಳ ಸಂಖ್ಯೆಯನ್ನು ನಮೂದಿಸಿ ಪಶು ವೈದ್ಯರಿಂದ ದೃಡೀಕರಿಸಿ ತಂದು ಕೊಟ್ಟವರಿಗೆ ಮೇವನ್ನು ನೀಡಲಾಗುವುದು ಎಂದರು.

      ಈದಿನ ಕೊಟ್ಟೂರು, ರಾಂಪುರ, ಜಾಗಟಗೆರೆ ಗ್ರಾಮಗಳ ರೈತರಿಗೆ ಮೇವನ್ನು ವಿತರಣೆ ಮಾಡಲಾಗುತ್ತಿದೆ. ಮೇವಿನ ಲೋಡ್ ಬಂದಾಕ್ಷಣ ಇಂದೇ(ಭಾನುವಾರ) ಇಲ್ಲವೆ ಸೋಮವಾರ ಉಜ್ಜಿನಿಯಲ್ಲಿಯೂ ಮೇವಿನ ಬ್ಯಾಂಕ್ ತೆರೆಯಲಾಗುವುದು ಎಂದರು.

       ಕೊಟ್ಟೂರು ಮೇವಿನ ಬ್ಯಾಂಕಿಗೆ ಸದ್ಯ 8 ಟನ್ ಮೇವು ಬಂದಿದೆ. ಇನ್ನೂ ಬರಲಿದೆ ಎಂದರು. ಒಂದು ಜಾನುವಾರಿಗೆ ದಿನಕ್ಕೆ ಐದು ಕೆ.ಜಿಯಂತೆ ಮೇವನ್ನು ನೀಡಲಾವುದು. ಸರ್ಕಾರ ರೈತರಿಂದ ಒಂದು ಕೆ.ಜಿ. ಮೇವಿಗೆ ಆರು ರು. ವಸೂಲಿ ಮಾಡಲು ಆದೇಶಿಸಿದೆ. ಆದರೆ ನಾಲ್ಕು ರು.ಗಳನ್ನು ಸರ್ಕಾರ ರಿಯಾಯಿತಿ ನೀಡಿದ್ದು, ರೈತರು ಒಂದು ಕೆ.ಜಿ. ಮೇವಿಗೆ ಕೇವಲ 2 ರು. ಮಾತ್ರ ಪಾವತಿಸಬೇಕು ಎಂದರು. 

      ರೈತರು ಪಶುವ್ಯದ್ಯರಿಂದ ದೃಡೀಕರಿಸಿದ ಅರ್ಜಿಯನ್ನು ಮೇವಿನ ಬ್ಯಾಂಕ್‍ಗೆ ಕೊಟ್ಟು ಮೇವನ್ನು ಪಡೆಯಬಹುದು ಎಂದರು. ಈ ಸಂದರ್ಭದಲ್ಲಿ ಪಶು ವ್ಯದ್ಯಾಧಿಕಾರಿ ರವಿಪ್ರಕಾಶ ಕಿತ್ತೂರು. ಕಂದಾಯ ಪರಿವೀಕ್ಷ ನಾಗರಾಜ್, ಗ್ರಾಮ ಲೆಕ್ಕಾಧಿಖಾರಿ ತಿಪ್ಪಜ್ಜಿ ಶರಣಪ್ಪ, ಬಸಮ್ಮ, ಪಶು ಇಲಾಖೆಯ ಯೋಗೀಶ್ವರ ದಿನ್ನೆ, ಮಲ್ಲಿಕಾರ್ಜುನ,

 

Recent Articles

spot_img

Related Stories

Share via
Copy link