ಬಳ್ಳಾರಿ
ಜಿಲ್ಲಾ ಡಾ ಬಿ.ಆರ್ . ಅಂಬೇಡ್ಕರ್ ಅಭಿವೃದ್ಧಿ ನಿಗಮದ ವಿಶೇಷ ಪ್ಯಾಕೇಜ್ 2015-16, 2016-17 ರ ಅನುದಾನದಲ್ಲಿ ನಡೆದಿರುವ ಕೋಟಿಗಟ್ಟಲೆ ಅವ್ಯವಹಾರದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗಿದೆ. ಬಳ್ಳಾರಿಯ ಸಾಮಾಜಿಕ ಹೋರಾಟಗಾರರು ಹಾಗೂ ದಲಿತ ಮುಖಂಡರಾದ ಕೊರ್ಲಗುಂದಿ ಪಂಪಾಪತಿ ಅವರು ಅಕ್ರಮದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಲ್ಲದೆ ದೂರನ್ನು ದಾಖಲಿಸಿದ್ದಾರೆ.
ವಿಶೇಷ ಪ್ಯಾಕೇಜ್ ಯೋಜನೆಯಲ್ಲಿ ಶೇಕಡಾ 90 ರಷ್ಟು ಅವ್ಯವಹಾರ ನಡೆದಿದ್ದು ಸೂಕ್ತ ಪರಿಶಿಷ್ಟ ಜಾತಿಯ ಫಲಾನುಭವಿಗಳಿಗೆ ಸೌಲಭ್ಯ ಸಿಗದೇ ಪರಿಶಿಷ್ಟ ಜಾತಿಯವರ ಹೆಸರಿನಲ್ಲಿ ಅನ್ಯ ಜಾತಿಯವರು ಸೌಲಭ್ಯವನ್ನು ಪಡೆದಿದ್ದಾರೆ ಎಂದು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ದೂರು ಸ್ವೀಕರಿಸಿರುವ ಬಳ್ಳಾರಿ ಜಿಲ್ಲಾಧಿಕಾರಿಗಳು ಶೀಘ್ರದಲ್ಲೇ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಅಕ್ರಮ ಬೆಳಕಿಗೆ ಬಾರದ ಬಳ್ಳಾರಿಯ ವಾರ್ಡಗಳಾದ 23,24,25,26,27,28 ಮತ್ತು 31,32 ಹಾಗೂ ಸಂಗನಕಲ್ಲು ಗ್ರಾಮಪಂಚಾಯಿತಿ ವ್ಯಾಪ್ತಿಗೆ ಬರುವ ವಾರ್ಡ ನಂ. 1 ರಿಂದ 7 ವರೆಗಿನ ವಾರ್ಡಗಳಲ್ಲಿ ಮಹಿಳಾ ಸ್ವಸಹಾಯ ಗುಂಪುಗಳಿಗೆ ನೀಡಿರುವ ವಿಶೇಷ ಪ್ಯಾಕೇಜ್ ಅವ್ಯವಹಾರದ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಈ ಅವ್ಯವಹಾರದ ವಿರುದ್ದ ಬಳ್ಳಾರಿಯ ಜಿಲ್ಲೆಯ ಎಲ್ಲಾ ದಲಿತಮುಖಂಡರು ಉಗ್ರ ಹೋರಾಟ ಮಾಡುವುದಾಗಿ ತಿಳಿಸಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
