ಶಿರಾ:
ಪ.ಪಂಗಡದ ನಾಯಕ ಜನಾಂಗದವರಿಗೆ ಶೇ.3%ರಿಂದ ಶೇ.7.5%ಕ್ಕೆ ಮೀಸಲಾತಿ ವಿಸ್ತರಿಸುವಂತೆ ಒತ್ತಾಯಿಸಿ ಶಿರಾ ತಾಲ್ಲೂಕು ಮಹರ್ಷಿ ವಾಲ್ಮೀಕಿ ನಾಕ ಕ್ರಿಯಾ ಸಮಿತಿಯ ವತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯ ಸರ್ಕಾರಕ್ಕೆ ಗುರುವಾರ ಮನವಿ ಪತ್ರ ಸಲ್ಲಿಸಲಾಯಿತು.
ಜಿ.ಪಂ. ಮಾಜಿ ಸದಸ್ಯ ಹಾಗೂ ವಾಲ್ಮೀಕಿ ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ ಕೇಂದ್ರ ಸರ್ಕಾರವು ಈಗಾಗಲೇ ಶೇ.7.5%ರಷ್ಟು ಮಿಸಲಾತಿಯನ್ನು ಶೈಕ್ಷಣಿಕ, ಔಧ್ಯೋಗಿಕ ಹಾಗೂ ರಾಜಕೀಯವಾಗಿ ನೀಡಿದೆ. ಆದರೆ ರಾಜ್ಯ ಸರ್ಕಾರ ಮೀಸಲಾತಿ ಪ್ರಮಾಣ ಹೆಚ್ಚಿಸಲು ಮೀನಾ-ಮೇಷ ಎಣಿಸುತ್ತಿದ್ದು ನಮ್ಮ ಸಮಾಜದ ಬಗ್ಗೆ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ತಾಳಿದೆ ಎಂದು ಆರೋಪಿಸಿದರು.
ಎ.ಪಿ.ಎಂ.ಸಿ. ಮಾಜಿ ನಿರ್ದೇಶಕ ದಯಾನಂದಸಾಗರ್ ಮಾತನಾಡಿ ರಾಜ್ಯದಲ್ಲಿ ಪ.ಪಂಗಡದ ನಾಯಕ ಜನಾಂಗ ಅತ್ಯಂತ ಹಿಂದುಳಿದಿದ್ದು ಈ ಸಮಾಜ ಸಮಾಜಮುಖಿಯಾಗಬೇಕಾದರೆ ಸರ್ಕಾರ ಮಿಸಲಾತಿ ಸೌಲಭ್ಯವನ್ನು ವಿಸ್ತರಿಸಬೇಕು ಎಂದರು.ಮಹರ್ಷಿ ವಾಲ್ಮೀಕಿ ನಾಯಕ ಕ್ರಿಯಾ ಸಮಿತಿಯ ಖಜಾಂಚಿ ರಂಗರಾಜು ಮಾತನಾಡಿ ರಾಜ್ಯ ಸರ್ಕಾರಕ್ಕೆ ಪ.ಪಂಗಡದ ಬಗ್ಗೆ ಹಲವು ಬೇಡಿಕೆಗಳನ್ನು ಸಲ್ಲಿಸಲಾಗಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಕೂಡಲೇ ಈ ವರ್ಗದ ಸಮಸ್ಯೆಗಳಿಗೆ ಸರ್ಕಾರ ಸ್ಪಂಧಿಸುವಂತಾಗಬೇಕು ಎಂದರು. ತಹಶೀಲ್ದಾರ ತಿಪ್ಪೇಸ್ವಾಮಿ ಅವರಿಗೆ ಸಮಿತಿಯ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು. ನಾಗರಾಜು, ಶಿವರಾಜು, ಗೋವಿಂದರಾಜು ಮುಂತಾದವರು ಹಾಜರಿದ್ದರು.