ಬೆಂಗಳೂರು
ಬೆಂಗಳೂರಿನಿಂದ ಉತ್ತರ ಪ್ರದೇಶಕ್ಕೆ ಹೋಗುತ್ತಿದ್ದ ತಾಯಿ-ಮಗಳು ನಾಪತ್ತೆಯಾಗಿದ್ದು, ಅವರಿಬ್ಬರನ್ನು ಅಪಹರಿಸಲಾಗಿದೆ ಎಂದು ಕುಟುಂಬಸ್ಥರು ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ.
ಅಪ್ರಾಪ್ತ ಪುತ್ರಿಯನ್ನು ಕರೆದುಕೊಂಡು ಉತ್ತರಪ್ರದೇಶಕ್ಕೆ ಹೊರಟಿದ್ದ ತಾಯಿ ಕುಷಾಲ ದೇವಿ(30) ನಾಪತ್ತೆಯಾಗಿದ್ದಾರೆ ,ಕುಷಾಲ್ ದೇವಿ ರೈಲಿನಲ್ಲಿ ಹೊರಟು ತೆಲಂಗಾಣದಲ್ಲಿದ್ದಾಗ ಕೊನೆಯ ಬಾರಿ ತಮ್ಮ ಪತಿ ಗೌರಕ್ ಕಶ್ಯಪ್‍ಗೆ ಕರೆ ಮಾಡಿ, ತಮ್ಮ ಬಳಿಯಿದ್ದ ಹಣ ಕಿತ್ತುಕೊಂಡಿದ್ದಾರೆಂದು ಹೇಳಿ ಕಾಲ್ ಕಟ್ ಮಾಡಿದ್ದಾರೆ. ಹೀಗಾಗಿ ತೆಲಂಗಾಣದಲ್ಲೆಲ್ಲಾ ಹುಡುಕಿದರೂ ನಾಪತ್ತೆಯಾದವರು ಸಿಕ್ಕಿಲ್ಲ.
ಗೌರಕ್ ಕಶ್ಯಪ್ ಪುತ್ರಿಯನ್ನು ರಾಹುಲ್ ಎಂಬ ಯುವಕ ಪ್ರೀತಿಸುತ್ತಿದ್ದ ಶಾಂತಿನಗರದಲ್ಲಿ ಸಮೋಸ ಅಂಗಡಿ ಇಟ್ಟುಕೊಂಡಿದ್ದ ಗೌರಕ್ ಅಪ್ರಾಪ್ತೆ ಅಂಗಡಿಯಲ್ಲಿದ್ದಾಗ ಆಕೆಯನ್ನು ಪರಿಚಯಿಸಿಕೊಂಡು ಪ್ರೀತಿಸುವಂತೆ ತಲೆಕೆಡಿಸಿದ್ದ. ಹೀಗಾಗಿ ತಾಯಿ ಮಗಳನ್ನು ಆತನೇ ಅಪಹರಿಸಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಈ ಸಂಬಂಧ ದೂರು ನೀಡಲು ಅಶೋಕನಗರ ಪೊಲೀಸ್ ಠಾಣೆಗೆ ಹೋದಾಗ ದೂರು ಸ್ವೀಕರಿಸಲು ನಿರಾಕರಿಸಿದ್ದಾರೆ. ಆದ್ದರಿಂದ ಕುಟುಂಬಸ್ಥರು ಪೊಲೀಸ್ ಕಮಿಷನರ್‍ಗೆ ದೂರು ನೀಡಿ ಪತ್ತೆ ಮಾಡಿಕೊಡುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ