ಎಂ ಎನ್ ಕೋಟೆ :
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂಧ್ ಗೆ ಕೆಲವು ಕಡೆಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಗುಬ್ಬಿ ತಾಲ್ಲೂಕಿನ ಹೊಸಕೆರೆ ಗ್ರಾಮದ ಕಾವೇರಿ ಕಲ್ಪತರು ಗ್ರಾಮೀಣ ಬ್ಯಾಂಕ್ ನಲ್ಲಿ ಎದಿನಂತೆ ಕೆಲಸ ಕಾರ್ಯಗಳು ನಡೆದವು. ಭಾರತ್ ಬಂಧ್ ಇದ್ದರೂ ಸಹ ಗ್ರಾಹಕರು ಬೆಳಿಗ್ಗೆಯಿಂದಲೇ ಬ್ಯಾಂಕ್ ಬಳಿ ಕಾದು ಕುಳಿತ್ತಿದ್ದರು. ಬಂದ್ ಹಿನ್ನಲೆಯಲ್ಲಿ ಬ್ಯಾಂಕ್ ಸಿಬ್ಬಂದಿಗಳು ಎದ್ದಿನಂತೆ ಬ್ಯಾಂಕ್ ಗೆ ಆಗಮಿಸಿದರು.
ಸಾಲ ಮನ್ನಾದ ಹಿನ್ನಲೆಯಲ್ಲಿ ಬ್ಯಾಂಕ್ ಗೆ ಗ್ರಾಹಕರು ಭೇಟಿ ನೀಡಿ ದಾಖಲೆ ಪತ್ರಗಳನ್ನು ನೀಡಿದ್ದರು.ಬೇರೆ ಬೇರೆ ಹಳ್ಳಿಗಳಿಂದ ಬಂದಿದ್ದ ರೈತರಿಗೆ ಬ್ಯಾಂಕ್.ಸಿಬ್ಬಂದಿಗಳು ಅವರ ದಾಖಲೆಗಳನ್ನು ಸ್ವೀಕರಿಸಿದರು.
ಗುಬ್ಬಿ ತಾಲ್ಲೂಕಿನ ಎಂ ಎನ್ ಕೋಟೆ, ಹಾಗಲವಾಡಿ ಭಾಗಗಳಲ್ಲಿ ಬ್ಯಾಂಕ್ ಗಳು ಬಂದ್ ಹಾಗಿದ್ದವು ಆದರೆ ಹೊಸಕೆರೆ ಬ್ಯಾಂಕ್ ನಲ್ಲಿ ಎದ್ದಿನಂತೆ ಬ್ಯಾಂಕು ತೆಗೆದಿತ್ತು. ಶಿವಣ್ಣ ಮಾತನಾಡಿ ಬಂಧ್ ಹಿನ್ನಲೆಯಲ್ಲಿ ನಾವು ಕೂಡ ಬೆಳಿಗ್ಗೆಯಿಂದ ಕಾದು ಕುಳಿತ್ತಿದ್ದವು ಆದರೆ ಬ್ಯಾಂಕ್ ಸಿಬ್ಬಂದಿಗಳು ಬಂದಿರುವುದು ಸಂತಸ ತಂದಿದೆ.ನಾವು ಮಂಚಲದೊರೆ, ವರ್ತೆಕಟ್ಟೆ ಗ್ರಾಮಗಳಿಂದ ಬಂದಿದ್ದೇವೆ.ಸಾಲ ಮನ್ನಾದ ದಾಖಲೆಗಳನ್ನು ನಾವು ಬ್ಯಾಂಕ್ ಗೆ ಕೊಟ್ಟಿದ್ದೇವೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
