6 ಮೇವು ಬ್ಯಾಂಕ್ ತೆರೆದು ರಾಸುಗಳಿಗೆ ಮೇವು ಒದಗಿಸಲು ಶಾಸಕರ ಅವಿರತ ಶ್ರಮ : ಎಂ.ಆರ್.ಜಗನ್ನಾಥ್

ಮಧುಗಿರಿ:

      ತಾಲೂಕಿನಲ್ಲಿ ಆರು ಮೇವು ಬ್ಯಾಂಕ್ ಗಳನ್ನು ತೆರೆದು ರೈತರ ರಾಸುಗಳಿಗೆ ಸಮರ್ಪಕ ಮೇವು ಒದಗಿಸಲು ಶಾಸಕರಾದ ವೀರಭದ್ರಯ್ಯನವರು ಶ್ರಮಿಸುತ್ತಿದ್ದಾರೆ ಎಂದು ಜೆ.ಡಿ.ಎಸ್. ಪುರಸಭಾ ಸದಸ್ಯ ಎಂ.ಆರ್.ಜಗನ್ನಾಥ್ ತಿಳಿಸಿದರು.

     ಪಟ್ಟಣದ ತಮ್ಮ ನಿವಾಸದ ಬಳಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು ಪ್ರತಿ ಹದಿನೈದು ದಿನಗಳಿಗೆ ಆಗುವಷ್ಟು ಮೇವನ್ನು ರೈತರು ಒಮ್ಮೆಗೆ ಕೊಂಡಯ್ಯಬಹುದು, ಈ ನಿಟ್ಟಿನಲ್ಲಿ ಗೋಶಾಲೆಗಳಿಗೆ ಮೇವಿಗಾಗಿ ಪ್ರತಿ ದಿನ ಓಡಾಡುವ ಪರಿಸ್ಥಿತಿ ತಪ್ಪುತ್ತದೆ.

      ತಾಲೂಕಿನಲ್ಲಿ ತೀವ್ರ ಬರಗಾಲ ಆವರಿಸದ್ದು ಸಿದ್ದಾಪುರದ ಕೆರೆಗೆ ಹಿಂದೆಲ್ಲಾ ಸರ್ಮಪಕ ಮಳೆಯ ಜೊತೆಗೆ ಹೇಮಾವತಿ ನೀರು ಹರಿಸಿ ಕುಡಿಯುವ ನೀರಿನ ಸಮಸ್ಯೆಯನ್ನು ನೀಗಿಸಲಾಗುತ್ತಿತ್ತು, ಆದರೆ ಈಗ ಮಳೆಯ ಅಭಾವ ವಿರುವುದರಿಂದ ಸಮಸ್ಯೆ ನಿಭಾಯಿಸಲು ಕಷ್ಟವಾಗುತ್ತಿದೆ.

      ನೀರಿಗಾಗಿ ಈವರೆಗೆ ಶಾಸಕರು 1 ಕೋಟಿ 5 ಲಕ್ಷ ಹಣ ಖರ್ಚು ಮಾಡಿದ್ದಾರೆ. ನೀರಿನ ಮಟ್ಟ ತುಂಬ ಕೆಳಗಿಳಿದಿರುವುದರಿಂದ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಪ್ರತಿಯೊಂದು ಹೋಬಳಿಯಲ್ಲೂ ಗೋಶಾಲೆ ತೆರೆದರೆ ರೈತರು ಮತ್ತು ಹೆಣ್ಣು ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎಂಬ ಉದ್ದೇಶದಿಂದ ಮನೆ ಮನೆಗೆ ಮೇವನ್ನು ಪಂಚಾಯಾತಿ ಮಟ್ಟದಲ್ಲಿ ವಿತರಿಸಲು ಕ್ರಮ ಕೈಕೊಂಡಿದ್ದಾರೆ ಎಂದರು.

     ನೀರಕಲ್ಲು ರಾಮಕೃಷ್ಣಪ್ಪ ಮಾತನಾಡಿ ಈಗಾಗಲೇ ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಜಿಲ್ಲಾಡಳಿತ ಮತ್ತು ತಾಲ್ಲೂಕು ಆಡಳಿತದ ವತಿಯಿಂದ ಹೆಲ್ಪ್ ಲೈನ್ ತೆರೆಯಲಾಗಿದೆ ಹಾಗೂ ರಾಸುಗಳ ಮೇವಿಗಾಗಿ ಕೆ.ಜಿಗೆ ರೂ 2 ರಂತೆ ವಸೂಲಿ ಮಾಡುತ್ತಿದ್ದಾರೆ ಹೊರತು ರೈತರಿಂದ ಹೆಚ್ಚುವರಿಯಾಗಿ ಹಣ ವಸೂಲಿ ಮಾಡುತ್ತಿಲ್ಲ ಇದು ಸರಕಾರದ ಸೂತ್ತೋಲೆಯಂತೆ ಹಣ ಪಡೆಯಲಾಗುತ್ತಿದೆ. ಮೇವು ಸಂಗ್ರಹಣೆಯ ಲಾರಿಗಳಲ್ಲಿ ಯಾವುದೇ ತೂಕದ ವ್ಯತ್ಯಾಸಗಳಿಲ್ಲ ಹಾಗೂ ಇನ್ನೂ ಹೆಚ್ಚಾಗಿಯೇ ಮೇವನ್ನು ವಿತರಿಸಲಾಗಿದೆ ಎಂದರು.

      ಪುರಸಭಾ ಸದಸ್ಯ ಎಂ.ಎಲ್.ಗಂಗರಾಜು ಮಾತನಾಡಿ ತಾಲ್ಲೂಕಿನಲ್ಲಿ ತೆರದಿರುವ ಗೋ ಶಾಲೆಯು ರಾಜ್ಯಕ್ಕೆ ಮಾದರಿಯಾಗಿದೆ. ತಾಲ್ಲೂಕಿನ ಗೋ ಶಾಲೆಯ ಬಗ್ಗೆ ಮುಂದಿನ ವಿಧಾನ ಸಭೆಯಲ್ಲೂ ಚರ್ಚೆಯಾಗಲಿದೆ. ಪ್ರಸ್ತುತ ಶಾಸಕರು ಜನಪರ ಕಾರ್ಯ ಮಾಡುತ್ತಿದ್ದು, ಕೋಟ್ಯಂತರ ರೂಗಳ ಅನುದಾನವನ್ನು ಈಗಾಗಲೇ ಕ್ಷೇತ್ರಕ್ಕೆ ತಂದಿದ್ದಾರೆ ನಾಗರೀಕರು ತಮ್ಮ ಸಮಸ್ಯೆಗಳ ಬಗ್ಗೆ ಯಾವುದೇ ಸಂಧರ್ಭದಲ್ಲೂ ದೂರವಾಣಿ ಕರೆ ಮಾಡಿದರೂ ಸಹ ಸ್ಪಂದಿಸುತ್ತಾರೆ. ಅವರ ವಿರೋಧಿಗಳು ಇಲ್ಲ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದರು.ಜೆ.ಡಿ.ಎಸ್. ಮುಖಂಡರಾದ ಚಂದ್ರಶೇಖರಬಾಬು ಟಿ.ಗೋವಿಂದರಾಜು, ತಿಮ್ಮಣ್ಣ, ಡಾ.ಶಿವಕುಮಾರ್, ತಾಪಂ ಸದಸ್ಯ ನಾಗಭೂಷಣ್, ಟಿ.ಗೋವಿಂದರಾಜು, ರಾಜ್‍ಗೋಪಾಲ್, ಕಂಭತ್ತನಹಳ್ಳಿ ದೇವಿ, ರಘು, ಕಿರಣ್ ಸಿಂಗ್ ಇನ್ನಿತರರು ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link