ಮಟ್ಕಾ ದಂಧೆ ನಿಲ್ಲಿಸಲು ಪೊಲೀಸರಿಗೆ ಶಾಸಕರ ಸೂಚನೆ

ಹುಳಿಯಾರು

  ಹುಳಿಯಾರಿನಲ್ಲಿ ಮಟ್ಕಾ ದಂಧೆ ಅವ್ಯಾಹತವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕುವಂತೆ ಪೊಲೀಸರಿಗೆ ಶಾಸಕರಾದ ಜೆ.ಸಿ.ಮಾಧುಸ್ವಾಮಿ ಅವರು ಸೂಚಿಸಿದ ಘಟನೆ ಗುರುವಾರ ನಡೆಯಿತು.

   ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಗುರುವಾರ ಏರ್ಪಡಿಸಿದ್ದ ಜನಸ್ಪಂದನಾ ಕಾರ್ಯಕ್ರಮದಲ್ಲಿ ಪಿಎಸ್‍ಐ ವಿಜಯ್ ಕುಮಾರ್ ಅವರನ್ನು ವೇದಿಕೆ ಬಳಿ ಕರೆಸಿ ಮಟ್ಕಾ ದಂಧೆ ಇಲ್ಲಿ ರಾಜಾರೋಷವಾಗಿ ನಡೆಯುತ್ತಿರುವ ಬಗ್ಗೆ ಸಾರ್ವಜನಿಕರು ವಾಟ್ಸಪ್ ಮೂಲಕ ಕಳುಹಿಸಿದ್ದಾರೆ. ತಕ್ಷಣ ಈ ದಂಧೆ ನಿಲ್ಲಬೇಕು ಎಂದರು. ಪಿಎಸ್‍ಐ ಸಹ ಕಡಿವಾಣ ಹಾಕುವ ಭರವಸೆಯನ್ನು ಈ ಸಂದರ್ಭದಲ್ಲಿ ನೀಡಿದರು.

    ಸಾಮಾಜಿಕ ಹೋರಾಟಗಾರ ಇಮ್ರಾಜ್ ಅವರು ಹುಳಿಯಾರು ಪಟ್ಟಣದಲ್ಲಿ ನೀರಿನ ಸಮಸ್ಯೆ ಬಗ್ಗೆ ಶಾಸಕರ ಗಮನ ಸೆಳೆದರು. ತಕ್ಷಣ ತಾಪಂ ಕಾರ್ಯನಿರ್ವಾಹಣಾಧಿಕಾರಿಗಳಿಗೆ ಬರ ಪರಿಹಾರ ಯೋಜನೆಯಲ್ಲಿ ಹುಳಿಯಾರು ಪಟ್ಟಣದಲ್ಲಿ ಹೊಸ ಕೊಳವೆ ಬಾವಿ ಕೊರೆದು ನೀರಿನ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರಲ್ಲದೆ ಪಪಂ ಮುಖ್ಯಾಧಿಕಾರಿಗಳಿಗೆ ಪಪಂ ಸದಸ್ಯರ ಸಭೆ ಕರೆದು ಸರ್ಕಾರದಿಂದ ಬಂದಿರುವ ಹಣ ಸದ್ಬಳಕೆ ಮಾಡಲು ಅನುಮೋದನೆ ಪಡೆಯುವಂತೆ ತಿಳಿಸಿದರು.

    ಕರವೇ ಅಧ್ಯಕ್ಷ ಕೋಳಿ ಶ್ರೀನಿವಾಸ್ ಅವರು ಹುಳಿಯಾರಿನ ಕರ್ನಾಟಕ ಪಬ್ಲಿಕ್ ಶಾಲೆಯ ಶಿಕ್ಷಕರ ಕೊರತೆಯ ಬಗ್ಗೆ ಸಭೆಯ ಗಮನಕ್ಕೆ ತಂದರು. ಶಾಸಕರು ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸ್ಪಷ್ಟನೆ ಕೇಳಲಾಗಿ ವರ್ಗಾವಣೆ ಪ್ರಕ್ರಿಯೆ ನಂತರ ಅತಿಥಿ ಶಿಕ್ಷಕರ ನೇಮಕಕ್ಕೆ ಸರ್ಕಾರ ಆದೇಶ ನೀಡುತ್ತದೆ. ಆಗ ಅಗತ್ಯ ಶಿಕ್ಷಕರನ್ನು ನೇಮಕ ಮಾಡುವುದಾಗಿ ತಿಳಿಸಿದರಲ್ಲದೆ ಅಲ್ಲಿಯವರೆವಿಗೂ ಡೆಪ್ಟೇಷನ್ ಮೇಲೆ ಶಿಕ್ಷಕರನ್ನು ಹಾಕಿ ವಿದ್ಯಾರ್ಥಿಗಳಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುವುದಲ್ಲಿ ತಿಳಿಸಿದರು.

    ಈ ಸಂದರ್ಭದಲ್ಲಿ ತಹಸೀಲ್ದಾರ್ ಬಿ.ತೇಜಸ್ವಿನಿ, ಉಪ ತಹಸೀಲ್ದಾರ್ ಮಲ್ಲಿಕಾರ್ಜುನಯ್ಯ, ಜಿಪಂ ಸದಸ್ಯರಾದ ವೈ.ಸಿ.ಸಿದ್ಧರಾಮಯ್ಯ, ಮಹಾಲಿಂಗಯ್ಯ, ತಾಪಂ ಅಧ್ಯಕ್ಷೆ ಕೆ.ಆರ್.ಚೇತನಾಗಂಗಾಧರ್, ತಾಪಂ ಸದಸ್ಯರುಗಳಾದ ಏಜೆಂಟ್ ಕುಮಾರ್, ಕಲ್ಯಾಣಿ ಬಾಯಿ, ಕಲಾವತಿ, ಕೆಂಕೆರೆ ಗ್ರಾಪಂ ಅಧ್ಯಕ್ಷೆ ಆಶಾಉಮೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link