ಚಿತ್ರದುರ್ಗ
ನಗರದಲ್ಲಿ 2ನೇ ಹಂತದ ಕುಡಿಯುವ ನೀರಿನ ಪೈಪ್ ಲೈನ್ ಆಳವಡಿಕೆ ಮಾಡುವ ಗುತ್ತಿಗೆದಾರ ಹೊಸದಾಗಿ ನಿರ್ಮಾಣ ಮಾಡಿದ ಸಿಸಿ ರಸ್ತೆಯನ್ನು ಅಗೆದಿದ್ದಾರೆ ಇದರ ವಿರುದ್ದ ಕ್ರಮ ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಮತ್ತು ಪೌರಾಯುಕ್ತರಿಗೆ ಸೂಚನೆ ನೀಡಿರುವುದಾಗಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ತಿಳಿಸಿದರು.
ನಗರದ ಹೊಳಲ್ಕೆರೆ ರಸ್ತೆಯ ಸಂಪಿಗೆ ಸಿದ್ದೇಶ್ವರ ಶಾಲೆಯ ಹಿಂಭಾಗ ಮತ್ತು ಬರಗೇರಿ ಕಾಲೋನಿಯಲ್ಲಿ ತಲಾ 1 ಕೋಟಿ ವೆಚ್ಚದಲ್ಲಿ, ಮತ್ತು 34 ನೇ ವಾರ್ಡನ ಅಮೃತ ಆರ್ಯುವೇದಿಕ್ ಕಾಲೇಜು ಬಳಿಯ ಟೀರ್ಸ್ ಕಾಲೋನಿಯಲ್ಲಿ ಸುಮಾರು 1.70 ಕೋಟಿ ರೂ ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದರು
ಶಾಶ್ವತ ಪರಿಹಾರದಡಿಯಲ್ಲಿ ನಗರದಲ್ಲಿ ಸಿಸಿರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತದೆ ಈ ಕಾಲೋನಿಯಲ್ಲಿ ಉತ್ತಮವಾದ ಬಡಾವಣೆಗಳು ನಿರ್ಮಾಣವಾಗಿರುವುದರಿಂದ ರಸ್ತೆಗಳು ಸಹಾ ಅಗತ್ಯವಾಗಿದೆ, ಆದರೆ ಇಲ್ಲಿ ದೊಡ್ಡದಾದ ರಸ್ತೆಗಳನ್ನು ನಿರ್ಮಾಣ ಮಾಡಬೇಕಿದೆ ಹೆಚ್ಚಿನ ಹಣಕಾಸಿನ ಅಗತ್ಯ ಇದೆ ಎಂದು ತಿಳಿಸಿ ನಗರದಲ್ಲಿ ಬಹುತೇಕ ಸಿಸಿರಸ್ತೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಮುಂದಿನ ಒಂದು ವರ್ಷದಲ್ಲಿ ನಗರದ ಬಹುತೇಕ ಎಲ್ಲಾ ರಸ್ತೆಗಳು ಸಿಸಿರಸ್ತೆಗಳಾಗಲಿದೆ ಎಂದರು.
ನಗರದಲ್ಲಿ 2ನೇ ಹಂತದ ಕುಡಿಯುವ ನೀರಿನ ಪೈಪ್ ಲೈನ್ ಆಳವಡಿಕೆ ಮಾಡಲು ಸರ್ಕಾರದವತಿಯಿಂದ ಟೆಂಡರ್ ಕರೆಯಲಾಗಿದ್ದು ನಗರದಲ್ಲಿ ಕಳೆದ ಒಂದುವರೆ ವರ್ಷದಿಂದ ಕಾಮಗಾರಿ ನಡೆಯುತ್ತಿದೆ ಪೈಪ್ ಹಾಕಲು ರಸ್ತೆಯನ್ನು ಆಗಿದಾಗ ಅದನ್ನು ಅವರೇ ಸರಿಪಡಿಸಬೇಕೆಂದು ನಿಯಮ ಇದ್ದರೂ ಸಹಾ ನಗರದಲ್ಲಿ ಎಲ್ಲಿಯೂ ಸಹಾ ಮಾಡಿಲ್ಲ ಎಂದು ತಿಳಿಸಿದ ತಿಪ್ಪಾರೆಡ್ಡಿ, ಇಂತಹ ಸಮಯದಲ್ಲಿ ನಗರದ ಹೌಸಿಂಗ್ ಬೋರ್ಡ ಕಾಲೋನಿಯಲ್ಲಿ ಸಿಸಿರಸ್ತೆಯನ್ನು ನಿರ್ಮಾಣ ಮಾಡಿದ್ದು, ಅದನ್ನು ಅಗೆಯುವುದರ ಮೂಲಕ ನಿರ್ಮಾಣ ಮಾಡಿದ್ದ ರಸ್ತೆಯನ್ನು ಹಾಳು ಮಾಡಿದ್ದರೆ ಅಲ್ಲಿನ ಜನತೆ ದೂರವಾಣಿಯಲ್ಲಿ ತಿಳಿಸಿದಾಗ ಕಾಮಗಾರಿಯನ್ನು ಸ್ಥಗಿತಗೊಳಿಸಿ ಮಿಷನರಿಗಳನ್ನು ವಶಪಡಿಸಿಕೊಳ್ಳಲಾಯಿತು.
ಈಗ ಮತ್ತೇ ಗೋಪಾಲಪುರ ರಸ್ತೆಯ ದರ್ಜಿ ಕಾಲೋನಿಯಲ್ಲಿ ನಿರ್ಮಾಣವಾಗಿರುವ ರಸ್ತೆಯನ್ನು ಅಗೆದು ಕೆಲಸವನ್ನು ಮಾಡಲು ಮುಂದಾಗಿದ್ದಾರೆ, ಇದರ ಬಗ್ಗೆಯೂ ಸಹಾ ಅಲ್ಲಿನ ಜನತೆ ತಿಳಿಸಿದಾಗ ಇದಕ್ಕೆ ಸಂಬಂಧಪಟ್ಟಂತೆ ಮಾತನಾಡಿದರು ಸಹಾ ಪ್ರಯೋಜನವಾಗಿಲ್ಲ ಆದ್ದರಿಂದ ಪೌರಾಯುಕ್ತರಿಗೆ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿ ಸಂಬಂಧಪಟ್ಟ ಗುತ್ತಿಗೆದಾರರ ಮತ್ತು ಸಂಬಂಧಪಟ್ಟ ಇಂಜಿನಿಯರ್ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದು ಶಾಸಕರು ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
