ಪಾವಗಡ
ತಾಲ್ಲೂಕಿನ ಶಾಸಕರಾದ ವೆಂಕಟರವಣಪ್ಪರವರು ರಾಯದುರ್ಗ ತುಮಕೂರು ರೈಲ್ವೆ ಯೋಜನೆಗೆ ಭೂಮಿ ಪೂಜೆ ಮಾಡುವಲ್ಲಿ ಸಂಸದರನ್ನು ಕಡೆಗಣಿಸಿ ಭೂಮಿ ಪೂಜೆ ಮಾಡಿರುವುದು ಖಂಡನೀಯ, ಕಮಿಟಿಗೆ ದೂರು ನೀಡಲಾಗುವುದು ಎಂದು ಸಂಸದರಾದ ನಾರಾಯಣ ಸ್ವಾಮಿ ತಿಳಿಸಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಎರಡು ತಿಂಗಳಿನಿಂದ ಪಾವಗಡ ತಾಲ್ಲೂಕಿನ ಶಾಸಕರಾದ ವೆಂಕಟರವಣಪ್ಪರವರು ಭದ್ರಾ ಮೇಲ್ದಂಡೆ ಯೋಜನೆಗೆ ಭೂಮಿ ಪೂಜೆ, ಮಹಿಳಾ ಪ್ರಥಮ ದರ್ಜೆ ಕಾಲೇಜ್ ಉದ್ಘಾಟನೆ ಮತ್ತು ಸೋಮವಾರ ತುಮಕೂರು ರಾಯದುರ್ಗ ರೈಲ್ವೆ ಯೋಜನೆ ಸೇರಿದಂತೆ ಹಲವು ಸರ್ಕಾರಿ ಕಾರ್ಯಕ್ರಮಗಳಿಗೆ ನನ್ನನ್ನು ಹೊರತು ಪಡಿಸಿ ಭೂಮಿ ಪೂಜೆ ನಡೆಸುತ್ತಿರುವುದು ಶೋಭೆ ತರುವುದಿಲ್ಲ. ಉದಾನಸೀನ, ತಾತ್ಸಾರ, ತಿರಸ್ಕಾರ ಬಹಳಷ್ಟು ದಿನಗಳು ನಡೆಯುವುದಿಲ್ಲ ಎಂದರು.
ಇದೇ ರೀತಿ ಮುಂದುವರೆದರೆ ಪ್ರಿವಲೈನ್ಸ್ ಕಮಿಟಿಗೆ ದೂರು ನೀಡಿದರೆ, ಭವಿಷ್ಯದಲ್ಲಿ ಅವರಿಗೆ ತೊಂದರೆ ಕೂಡ ಆಗಬಹುದು. ಹಿರಿಯರಾದ ವೆಂಕಟರವಣಪ್ಪರವರು ಮತ್ತೊಮ್ಮೆ ಯೋಚನೆ ಮಾಡಬೇಕು. ಇದೇ ತಿಂಗಳು 27 ರಂದು ಮೈಸೂರಿನಲ್ಲಿ ಮೈಸೂರು ವಿಭಾಗ ಮಟ್ಟದ ರೈಲ್ವೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೇ ರೀತಿ ಮುಂದುವರೆದರೆ ಕಮಿಟಿಗೆ ಹಾಗೂ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತೇನೆ.
ರಾಯದುರ್ಗ ತುಮಕೂರು ರೈಲ್ವೆ ಯೋಜನೆ ಭೂಮಿಪೂಜೆಗೆ ರೈಲ್ವೆ ಇಲಾಖೆಯ ಯಾವುದೇ ಆಧಿಕಾರಿಗಳು ಭಾಗಿಯಾಗಿಲ್ಲ. ಇಂತಹ ಅಭಿವೃದ್ದಿ ಕಾರ್ಯಕ್ರಮಗಳಿಗೆ ನನ್ನ ವಿರೋಧವಿಲ್ಲ. ಆಂದ್ರಿನಿವಾ ಯೋಜನೆ ಬೆಳವಣೆಗೆಯ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಯೋಜನೆ ಕುರಿತು ಚರ್ಚೆ ಮಾಡಲಾಗಿದೆ. ಕಾಮಗಾರಿ ಅನುಷ್ಠಾನಕ್ಕೆ ಸ್ಥಳೀಯ ಶಾಸಕರಾದ ವೆಂಕಟರವಣಪ್ಪರವರ ಜೊತೆಗೂಡಿ ಯೋಜನೆಗೆ ಚಾಲನೆ, ಪೆಮ್ಮನ ಹಳ್ಳಿ ಗೊಲ್ಲರ ಹಟ್ಟಿಗೆ ನೀಡುವ 70 ಲಕ್ಷ ರೂ. ಅಭಿವೃದ್ದಿ ಕಾರ್ಯಕ್ರಮಕ್ಕೆ ಶಾಸಕರನ್ನು ಕರೆದುಕೊಂಡು ಹೋಗಿ ಭೂಮಿಪೂಜೆ ಮಾಡಲಾಗುವುದು ಎಂದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
