ಮಹೀಂದ್ರಾ ಫೈನಾನ್ಸಿಯಲ್ ಸರ್ವಿಸಿಸ್ ನ 73ನೇ ವರ್ಷದ ಸಂಸ್ಥಾಪನಾ ದಿನಾಚರಣೆ

ಬಳ್ಳಾರಿ:    

       ಮಹೀಂದ್ರಾ & ಮಹೀಂದ್ರಾ ಫೈನಾನ್ಸಿಯಲ್ ಸರ್ವಿಸಿಸ್ ಲಿಮಿಟೆಡ್‍ನ ಸಂಸ್ಥಾಪನಾ ದಿನೋತ್ಸವದ ಸಂಭ್ರಮಾಚರಣೆ ಅಂಗವಾಗಿ ಈ ವರ್ಷವು ಸಹ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿದ್ದು ಫೈನಾನ್ಸ್ ಕಂಪನಿಯ ಮುಖ್ಯ ಉದ್ದೇಶ ರಕ್ತದಾನ ಜೀವಕ್ಕೆ ವರದಾನ ಎಂಬ ಸಂಕಲ್ಪದ ಅಡಿಯಲ್ಲಿ ವಿವೇಕಾನಂದ ರಕ್ತ ಬಂಡಾರ ಸಹಾಯದೊಂದಿಗೆ ಈ ಶಿಬಿರವನ್ನು ಏರ್ಪಡಿಸಲಾಯಿತು ಎಂದು ಮಹೀಂದ್ರಾ ಫೈನಾನ್ಸ್ ಕಂಪನಿಯ ವ್ಯವಸ್ಥಾಪಕರಾದ ಶಿವಕುಮಾರ ಅಂಗಡಿಯವರು ಸ್ಪಷ್ಟಪಡಿಸಿದರು.

      ಬಳ್ಳಾರಿ ನಗರದಲ್ಲಿರುವ ಎಸ್.ಪಿ ವೃತ್ತದ ಬಳಿ ಇರುವ ಮಹೀಂದ್ರಾ & ಮಹೀಂದ್ರಾ ಫೈನಾನ್ಸಿಯಲ್ ಸರ್ವಿಸಿಸ್ ಲಿಮಿಟೆಡ್‍ನ ಕಂಪನಿಯ ಅದಿಕೃತ ಕಛೇರಿಯಲ್ಲಿ ಗ್ರಾಹಕರು ಮತ್ತು ಸಿಬ್ಬಂದಿಯವರು 30ಕ್ಕೂ ಹೆಚ್ಚು ಜನರು ರಕ್ತವನ್ನು ನೀಡಿ ಶಿಬಿರದ ಯಶಸ್ಸಿಗೆ ಕಾರಣರಾದರು. ನಮ್ಮ ಬಳ್ಳಾರಿಶಾಖೆಯಿಂದ ಪ್ರತೀ ವರ್ಷವು ಸಹ ಇಂತಹ ಉಪಯುಕ್ತ ಶಿಬಿರವನ್ನು ಹಮ್ಮಿಕೊಳ್ಳಲು ನಮ್ಮ ಎಲ್ಲಾ ಸಿಬ್ಬಂದಿ ಸ್ವ ಇಚ್ಚೆಯಿಂದ ಪಾಲ್ಗೊಳ್ಳುತ್ತೇವೆ ಎಂದು ನುಡಿದಿರುವ ಕಾರಣ ಈ ಬಾರಿ ಎರಡನೇ ವರ್ಷ ನಾವು ಇಂತಹ ಶಿಬಿರವನ್ನು ಹಮ್ಮಿಕೊಂಡಿದ್ದೇವೆ ಎಂದರು.

     ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಹೆಚ್ಚು ಹೆಚ್ಚು ರಕ್ತದ ಒತ್ತಡ ಕಡಿಮೆಯಾಗಿ ಸಾವು ಸಂಭವಿಸುವುದನ್ನು ಕಂಡು ಕಂಪನಿಯು ಈ ನಿರ್ದಾರವನ್ನು ತೆಗೆದುಕೊಂಡಿದೆ. ಆದುದರಿಂದ ಇದೇ ರೀತಿಯಲ್ಲಿ ಪ್ರತೀ ವರ್ಷವೂ ಕೂಡ ಕಂಪನಿಯು ಸ್ಥಾಪನೆಯಾದ ದಿನದಂದು ನೆರೆವೇರಿಸುವ ಹಂಬಲ ಹೊಂದಿದೆ.

       ಹೀಗೆ ಹತ್ತು ಹಲವು ಕಾರ್ಯಕ್ರಮಗಳು ಸಾರ್ವಜನಿಕರಿಗೆ ಉಪಯುಕ್ತವಾಗಲಿ ಎಂಬುದು ಈ ಸಂಸ್ಥೆಯ ಧ್ಯೇಯವಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ವ್ಯವಸ್ಥಾಕರು ಶಿವಕುಮಾರ್ ಅಂಗಡಿ ಬ್ರಾಂಚ್ ಅಕೌಂಟೆಂಟ್ ವೆಂಕಟೇಶ್ ದನ್ವಂತ್ರಿ, ಅಬ್ದುಲ್ ಸಲಿಂ ಕಂಪನಿಯ ಎಲ್ಲಾ ಸಿಬ್ಬಂದಿ ಹಾಗೂ ಗ್ರಾಹಕರು ಇನ್ನಿತರರು ವೇದಿಕೆಗೆ ಸಾಕ್ಷಿಯಾದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link