1ಲಕ್ಷಕ್ಕೂ ಅಧಿಕ ಮೌಲ್ಯದ ಮೋಬೈಲ್ ಕಳವು

ಬ್ಯಾಡಗಿ:

          ಮುಂಭಾಗದ ಕಬ್ಬಿಣದ ಶಟರ್ಸ ಮುರಿದು ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಮೋಬೈಲ್ ಸೆಟ್‍ಗಳನ್ನು ಕಳ್ಳತನ ಮಾಡಿ ಪರಾರಿಯಾದ ಘಟನೆ ಹಂಸಬಾವಿ ರಸ್ತೆಯಲ್ಲಿ ಓಂ ಕಮ್ಯೂನಿಕೇಶನ್ ಮೋಬೈಲ್ ಅಂಗಡಿಯಲ್ಲಿ ಮಂಗಳವಾರ ತಡರಾತ್ರಿ ನಡೆದಿದೆ.

          ಜನನಿಬಿಡ ಪ್ರದೇಶದಲ್ಲಿರುವ ಓಂ ಕಮ್ಯೂನಿಕೇಶನ್ ಶಾಪ್‍ನ ಮುಂಭಾಗದ ಗಟ್ಟಿಮುಟ್ಟಾದ ಶಟರ್ಸನ್ನು ಕಟ್ ಮಾಡುವುದು ಸುಲಭದ ಮಾತಲ್ಲ, ಕಳ್ಳತನ ಪ್ರಕರಣ ನೋಡಿದರೇ ಇದೊಂದು ನುರಿತ ಖದೀಮರ ಗುಂಪಿನಿಂದಲೇ ನಡೆದಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.

           ಸ್ಥಳಕ್ಕೆ ಶ್ವಾನ ದಳ ಹಾಗೂ ಬೆರಳಚ್ಚು ತಜ್ಞರು: ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಪೊಲೀಸ್ ಠಾಣೆಯ ಅಪರಾಧ ವಿಭಾಗದ ಎಎಸ್‍ಐ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಕರೆಸಿ ಪರಿಶೀಲನೆ ನಡೆಸಿದರಾದರೂ ಕಳ್ಳರ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ.

           ಎಂದಿನಂತೆ ಮಂಗಳವಾರ ರಾತ್ರಿ 10 ಗಂಟೆಯ ಸುಮಾರಿಗೆ ಶಾಪ್ ಬಂದ್ ಮಾಡಿಕೊಂಡು ಹೋಗಿದ್ದೆ, ಆದರೆ ಬೆಳಿಗ್ಗೆ ಪಕ್ಕದ ಅಂಗಡಿವರಿಂದ ಕಳ್ಳತನವಾದ ಬಗ್ಗೆ ಮಾಹಿತಿ ಲಭ್ಯವಾಯಿತು, ಬಂದು ನೋಡುವಷ್ಟರಲ್ಲಿ ಅಂಗಡಿಯಲ್ಲಿದ್ದ ಸುಮಾರು 2 ಲಕ್ಷ ಮೌಲ್ಯದ ಮೊಬೈಲ್‍ಗಳು ಕಳ್ಳತನವಾಗಿದ್ದಾಗಿ ಮಾಲೀಕ ಅಣ್ಣಪ್ಪ ಕಾಳೆ ಪತ್ರಿಕೆಗೆ ತಿಳಿಸಿದರು. ಈ ಕುರಿತಂತೆ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link