ಬಳ್ಳಾರಿ
ದೇಶ ಐದು ವರ್ಷಗಳಲ್ಲಿ ಆತಂಕ ಎದುರಿಸುವ ಪರಿಸ್ಥಿತಿ ಹಾಗೂ ಪ್ರಜಾಸತ್ತಾತ್ಮಕ ವ್ಯವಸ್ಥೆ ಯನ್ನ ಬುಡಮೇಲು ಮಾಡುವ ಸಮಯ ದೇಶಕ್ಕೆ ಬಂದುಹೊದಗಿದೆ,ಮತ್ತು ದೇಶ ವಿಭಜನೆ ಸಿದ್ದಾಂತದ ಪ್ರಕಾರ ಚುನಾವಣೆ ನಡೆಯಬೇಕೇ ಹೊರತು ಅಧ್ಯಕ್ಷೀಯ ಮಾದರಿಯಲ್ಲಿ ಅಲ್ಲ,ಎಂದು ಸುದ್ದಿಗೋಷ್ಟಿ ಯಲ್ಲಿ ಹೇಳಿದರು.
ನಗರದ ಮಯೂರ ಹೋಟೆಲ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು ದೇಶದ ಆರ್ಥಿಕ ಸಾಮಾಜಿಕ, ರಾಜಕೀಯ,ಲೆಕ್ಕಾಚಾರವನ್ನೆ ಬುಡಮೇಲು ಮಾಡುವ ರೀತಿಯಲ್ಲಿ ಐದು ವರ್ಷ ಮೋದಿ ಆಡಳಿತ ಮಾಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಲೋಕಸಭಾ ಚುನಾವಣೆ ಎರಡು ಸಿದ್ದಾಂತದ ಮೇಲೆ ನಡೆಯುತ್ತದೆ, ಒಂದು ಅಧ್ಯಕ್ಷೀಯ ಮಾದರಿಯ ಚುನಾವಣೆ , ಎರಡನೆಯದು ವಿಚಾರಧಾರೆಯನ್ನು ಮುಂದಿಟ್ಟುಕೊಂಡು ಎರಡು ರೀತಿಯ ಆಡಳಿತ ಕೊಡುವ ಉದ್ದೇಶದಿಂದ ಜನರ ಕಲ್ಯಾಣ ಆರ್ಥಿಕ ಅಭಿವೃದ್ಧಿ ಯೋಜನೆ ಇದು ಯಾವುದು ಮೋದಿ ಗೆ ಇಲ್ಲ ಎಂದು ಆರೋಪಿಸಿ ಇದಕ್ಕೆ ನಾವು ಖಂಡಿಸುತ್ತೇವೆ ಎಂದು ನುಡಿದರು.
ದೇಶದಲ್ಲಿ ಲೋಕ ಸಮರ ನಡೆಯುತ್ತಿರುವುದು ನಕಲಿ ರಾಷ್ಟ್ರ ಭಕ್ತರು ಹಾಗೂ ನೈಜ ರಾಷ್ಟ್ರ ಭಕ್ತರ ನಡುವಣ ನಡೆಯುವ ಹೋರಾಟವಾಗಿದೆ, ಕಾರ್ಮಿಕ ವರ್ಗದ ಜನರು ಮತ್ತು ರೈತರು ಇದನ್ನರಿತು ಮತ ನೀಡುವಂತೆ ಮನವಿ ಮಾಡಿಕೊಂಡರು. ನಂತರ ಸ್ವಚ್ಛ ಭಾರತ ಯೋಜನೆಯ ಜಾಹಿರಾತಿಗೆ ನೀಡಿದ ಹಣದ 12% ಭಾಗದಷ್ಟು ಸ್ವಚ್ಛ ಮಾಡುವ ಪೌರ ಕಾರ್ಮಿಕರಿಗೆ ಮೋದಿ ಸರ್ಕಾರ ಕೊಟ್ಟಿಲ್ಲ ಎಂದು ಆರೋಪ ಮಾಡಿದರು.
ನಾವು ನಮ್ಮ ಪಕ್ಷ ಪ್ರಣಾಳಿಕೆ ಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಪ್ರತಿ ಕುಟುಂಬಗಳಿಗೆ ತಿಂಗಳಿಗೆ 6 ಸಾವಿರ ವರ್ಷಕ್ಕೆ72 ಸಾವಿರ ಘೋಷಣೆ ಮಾಡಿದ್ದೇವೆ, ಆದರೆ ಇದು ಎಲ್ಲಿಂದ ತರುತ್ತಾರೆ ಎಂಬುದು ಬಿಜೆಪಿಯವರ ವಾದವಾಗಿದೆ, ಆದರೆ 65 ವರ್ಷಗಳ ಕಾಲ ದೇಶವನ್ನಾಳಿದ ನಾವು ಆರ್ಥಿಕ ವ್ಯವಸ್ಥೆ ಬಗ್ಗೆ ರಾಹುಲ್ ಗಾಂಧಿಯವರು ನಮ್ಮ ದೇಶದ ಆರ್ಥಿಕ ತಜ್ಞರನ್ನ ಮತ್ತು ವಿದೇಶಿ ತಜ್ಞರ ಸಲಹೆಯ ಆಧಾರದ ಮೇಲೆ ಈ ನಿರ್ಣಯವನ್ನು ಕಾಂಗ್ರೆಸ್ ಪಕ್ಷ ಮಾಡಿದೆ ಎಂದರು.
ನಮ್ಮ ದೇಶದ ಬಜೆಟ್ ನ ಗಾತ್ರ 25 ಸಾವಿರ ಕೋಟಿ ಅದರಲ್ಲಿ ಶೇಕಡಾ 12% ಮಾತ್ರ ಬಡ ಕುಟುಂಬಗಳಿಗೆ ಸೇರುತ್ತದೆ, ಎಂದು ಮಾಹಿತಿ ಯನ್ನ ಮಾದ್ಯಮದ ಮುಂದಿಟ್ಟರು. ನರೇಂದ್ರ ಮೋದಿಯವರ ಐದು ವರ್ಷದ ಅವಧಿಯಲ್ಲಿ ಒಂದು ಕೋಟಿ ಉದ್ಯೋಗ ನಷ್ಟದ ಜೊತೆಯಲ್ಲಿ ಕಪ್ಪು ಹಣ ಶೇಕಡಾ 54 ರಷ್ಟು ಹೆಚ್ಚಾಗಿದೆ ಅಪಾದಿಸಿದರು. ದೇಶದ ಪ್ರಮುಖ ಸಂಸ್ಥೆ ಗಳಾದ ಸಿಬಿಐ ಐಟಿ ಇಡಿ ಅಂತಹ ಸಂಸ್ಥೆಗಳು ನಷ್ಟ ವಾದರೆ ದೇಶ ಕಷ್ಟಕ್ಕೆ ಸಿಲುಕಿದರು ಆಶ್ಚರ್ಯ ಪಡಬೇಕಾಗಿಲ್ಲ, ಎಂಬುದು ಅವರು ಅಭಿಪ್ರಾಯ ಪಟ್ಟಿದ್ದಾರೆ, ಸೈನ್ಯದ ಕೈ ಮೇಲಾದರೆ ಮುಂದೊಂದು ದಿನ ಸೈನ್ಯ ನಮ್ಮನ್ನು ಆಳುವುದು ಖಚಿತ ಎಂದರು. ಬಿಜೆಪಿ ಪಕ್ಷದ ನರೇಂದ್ರ ಮೋದಿಯವರು
ಸೈನ್ಯದ ರಕ್ತ
ಕಣಗಳನ್ನು ಮುಂದಿಟ್ಟು ಕೊಂಡು ರಾಜಕೀಯ ಮಾಡುತ್ತಿದೆ ಇದು ಅತ್ಯಂತ ಶೋಚನೀಯ ಸಂಗತಿ ಇದನ್ನರಿತು ಜನರು ಮತ ಹಾಕಬೇಕೆಂದು ಬಳ್ಳಾರಿಯಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಕಾಂಗ್ರೆಸಿನ ಹಿರಿಯ ಮುಖಂಡ ಎಲ್ ಮಾರೆಣ್ಣ,ಗಂಗಾಧರ, ವೆಂಕಟೇಶ್ ಮೂರ್ತಿ, ಹುಸೇನಪ್ಪ, ವೆಂಕಟೇಶ್ ಹೆಗಡೆ, ಮುಂತಾದವರು ಹಾಜರಿದ್ದರು.