ಮೋದಿ ಸರ್ಕಾರದಿಂದ ರೈತರಿಗೆ ಅನ್ಯಾಯ : ಮಾರುತಿ ಮಾನಪಡೆ

ಹಾವೇರಿ :

      ಕೇಂದ್ರದಲ್ಲಿ ಆಡಳಿತ ನಡೆಸಿದ ಬಿಜೆಪಿ ನೇತೃತ್ವದ ಮೋದಿ ಸರ್ಕಾರ ರೈತರಿಗೆ ಸ್ವಾಮಿನಾಥನ್ ವರದಿ ಜಾರಿಗೆ ತರದೇ ಹಾಗೂ ರೈತರ ಸಾಲಮನ್ನಾ ಮಾಡದೇ ರೈತ ವಿರೋಧಿ ಆಡಳಿತದಿಂದ ರೈತರಿಗೆ ಅನ್ಯಾಯ ಮಾಡಿದೆ. ಕೆಂದ್ರದಲ್ಲಿ ಬಿಜೆಪಿ ತೊಲಗಿಸಿ ಎಂದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷರಾದ ಮಾರುತಿ ಮಾನಪಡೆ ಹೇಳಿದರು. ನಗರದ ಹೊಟಲ್ ಮಾಲಕರ ಸಂಘದ ಸಭಾಂಗಣದಲ್ಲಿ ಪತ್ರಿಕೆಗೋಷ್ಠಿ ಉದ್ದೇಶಿಸಿ ಅವರು ಮಾತನಡಿದರು.

        ದೇಶದ ಬೆನ್ನೆಲಬು ಅವರಿಗೆ 2014 ರಲ್ಲಿ ಬಿಜೆಪಿ ಸರ್ಕಾರ ಹಗಲಿನಲ್ಲಿ ಆಕಾಶದಲ್ಲಿ ನಕ್ಷತ್ರ ತೊರಿಸುವಂತೆ ಅನೇಕ ಭರವಸೆಗಳನ್ನು ನೀಡಿ ಯಾವುದನ್ನು ಇಡೇರಿಸದೇ ಅನ್ಯಾಯ ಮಾಡಿದೆ. ರೈತರ ಬಗ್ಗೆ ಬೇಜವಾಬ್ದಾರಿ ಹೊಂದಿರುವ ನರೇಂದ್ರ ಮೋದಿ ಸರ್ಕಾರ 2015 ಸೆಪ್ಟಂಬರ್ 22 ರಂದು ಸುಪ್ರೀಂಕೋರ್ಟಿಗೆ ಸ್ವಾಮಿನಾಥನ್ ವರದಿಯನ್ನು ಜಾರಿಗೆ ತರಲಾಗುವುದಿಲ್ಲ ಎಂಬ ಸಂದೇಶ ಕಳುವಿಸಿ ಕೊಡುವುದು ಕಂಡು ಬರುತ್ತಿದೆ. ರೈತರ ಆದಾಯ ದ್ವಿಗುಣ ಮಾಡವಂತೆ ಹೇಳಿದ್ದು ಮರೆತು ಹೋಗಿದೆ ಎಂದರು.

ಬಿಜೆಪಿ ಸರ್ಕಾರ ಕಂಪನಿ ಸಾಲಮನ್ನಾ ಮಾಡ್ತಾ ? :

     ನರೇಂದ್ರ ಮೋದಿ ರೈತರು ಸಾಲದಿಂದ ಆತ್ಮಹತ್ಯ ಮಾಡಿಕೊಳ್ಳವ ಸ್ಥಿತಿಗೆ ಬಂದರೂ ಸಾಲಮನ್ನಾ ಮಾಡಲ್ಲಿಲ್ಲಾ. ಆದರೆ ಬಂಡವಾಳಿಗರ ಪರವಾಗಿ ನಡೆದುಕೊಂಡು 3 ಲಕ್ಷ 49 ಸಾವಿರ ಕೋಟಿ ರೂಗಳನ್ನು 15 ಕುಟುಂಬಗಳ ಕಂಪನಿಗಳ ಸಾಲಮನ್ನಾ ಮಾಡಲಾಗಿದೆ ಎಂದು ಬಿಜೆಪಿ ಪಕ್ಷದ ವಿರುದ್ದ ಮಾರುತಿ ಮಾನಪಡೆ ಆಕ್ರೋಶ ವ್ಯಕ್ತಪಡಿಸಿದರು. ಇನ್ಸುರೆನ್ಸ್ ಕಂಪನಿ ರೈತರಿಂದ ಹಣ ಕಟ್ಟಿಸಿಕೊಂದು ಕಂಪನಿ ಲಾಭ ತೆಗೆದುಕೊಳ್ಳುತ್ತದೆ.

       ಆದರೆ ಇದನ್ನು ನಿಲ್ಲಿಸಿ ಸರ್ಕಾರಿ ಅಡಿಯಲ್ಲಿ ಇರುವ ಸಂಸ್ಥೆಗೆ ನೀಡಿ ಸರ್ಕಾರ ಜವಾಬ್ದಾರಿ ತೆಗೆದುಕೊಳ್ಳವಂತಾಗಬೇಕು. ಕಬ್ಬು ಬೆಳೆಯಗಾರರಿಗೆ ಬೆಂಬಲ ಬೆಲೆ ನೀಡುವಲ್ಲಿ ಹಿಂದೆ ಅನುಸರಿಸಿ ನೀತಿ ಮುಂದುವರಿಸಿ ಕಬ್ಬು ಬೆಳೆಗಾರರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದರು.

      ಬೊಮ್ಮಾಯಿಗೆ ಮಾನಪಡೆ ಸವಾಲು :

      ಮಹದಾಯಿ ಸಮಸ್ಯೆ ಬಗೆಹರಿಸದೇ ವಿಫಲವಾದ ಬಿಜೆಪಿ ಪಕ್ಷ. ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಮಹದಾಯಿ ವಿಚಾರವಾಗಿ ತಮ್ಮ ಪ್ರಧಾನಿ ನರೇಂದ್ರ ಮೋದಿಯಿಂದ ಪರಿಹಾರ ಕೊಡಿಸಬಹುದಿತ್ತು ಆದರೆ ಬೊಮ್ಮಾಯಿ ಮಾಡಿದ್ದೇನು ? ಈ ವಿಚಾರದಲ್ಲಿ ರೈತರಿಗೆ ಗೊಂದಲಮಯ ಹೇಳಿಕೆ ನೀಡಿ ತಮ್ಮ ಪಕ್ಷವನ್ನು ಸಮರ್ಥನೆ ಮಾಡಿಕೊಳ್ಳುವ ಬೊಮ್ಮಾಯಿ ಈ ವಿಚಾರವಾಗಿ ಚರ್ಚೆ ಮಾಡಲು ವೇದಿಕೆ ರಡಿ ಮಾಡಲಿ ನಾನೆ ಬರುತ್ತೇನೆ ಎಲ್ಲ ವಿಚಾರ ಸಾರ್ವಜನಿಕರಿಗೆ ಗೊತ್ತಾಗಲಿ ಎಂದು ಮಾರುತಿ ಮಾನಪಡೆ ಸವಾಲು ಹಾಕಿದರು.

     ಉತ್ತರ ಕರ್ನಾಟಕ ಬಗ್ಗೆ ಬಹಳ ಕಾಳಜಿ ವಹಿಸುವಂತೆ ಮಾತನಾಡುವ ಬಿಜೆಪಿ ಸರ್ಕಾರ ಮಹದಾಯಿ ವಿಚಾರದಲ್ಲಿ ರೈತರಿಗೆ ಅನ್ಯಾಯ ಮಾಡಿದೆ. ಸಂಸದ ಶಿವಕುಮಾರ ಉದಾಸಿ.ಸುರೇಶ ಅಂಗಡಿ.ಪ್ರಹ್ಲಾದ ಜೋಶಿ ಪ್ರಭಾವಿಗಳಾಗಿದ್ದರೂ ರೈತರ ಬಗ್ಗೆ ಕಾಳಜಿ ತೊರಿಸಲಿಲ್ಲಾ. ಪ್ರಧಾನಿ ಮೇಲೆ ಪ್ರಭಾವ ಬೀರಿ ಮಹದಾಯಿ ಸಮಸ್ಯೆ ಬಗೆಹರಿಸುವಲ್ಲಿ ವಿಫಲರಾಗಿದ್ದಾರೆ. ರೈತರು ಇವರಿಗೆ ಚುನಾವಣೆಯಲ್ಲಿ ಸೋಲಿಸುವ ಕೆಲಸ ಮಾಡಬೇಕು ಎಂದು ಮಾರುತಿ ಮಾನಪಡೆ ಕರೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಮುಖಂಡರಾದ ಬಿಎಸ್ ಸೊಪ್ಪಿನ.ಕಾರ್ಮಿಕ ಮುಖಂಡ ನಾರಾಯಣ ಕಾಳೆ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link