ಅತೀ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೇ ಅದು ಮೋದಿ : ಡಿ.ಆರ್.ಪಾಟೀಲ

ಬ್ಯಾಡಗಿ:

         ದೇಶದ ಇತಿಹಾಸದಲ್ಲೇ ಅತೀ ಹೆಚ್ಚು ಸುಳ್ಳು ಹೇಳಿದ ಪ್ರಧಾನಿ ಯಾರಾದರೂ ಇದ್ದರೇ ಅದು ಬಿಜೆಪಿಯ ನರೇಂದ್ರ ಮೋದಿ ಮಾತ್ರ, ಮೋದಿ ಆಸರೆಯನ್ನು ಹಿಡಿದು ಬಿಜೆಪಿಗರು ಮತ್ತೊಮ್ಮೆ ಅಧಿಕಾರಕ್ಕೆ ಬರುವ ತವಕದಲ್ಲಿದ್ದಾರೆ, ಮೋದಿ ವಾರಾಣಾಸಿಯಲ್ಲಿಯೇ ಸೋಲುವ ಭಯವಿದೆ ಹೀಗಾಗಿ ಬಡ ಜನರ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಕಾಂಗ್ರೆಸ್‍ನ್ನು ಪಕ್ಷವನ್ನು ಬೆಂಬಲಿಸುವಂತೆ ಹಾವೇರಿ ಮತಕ್ಷೇತ್ರ ಲೋಕಸಭಾ ಅಭ್ಯರ್ಥಿ ಡಿ.ಆರ್.ಪಾಟೀಲ ಮನವಿ ಮಾಡಿದರು.

       ಬುಧವಾರ ಶಿಡೇನೂರ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಇಂದಿರಾಗಾಂಧಿ ಹಾಗೂ ರಾಜೀವ ಗಾಂಧಿವರಂತಹ ದಕ್ಷ ಆಡಳಿತಗಾರರನ್ನು ಹೊಂದಿದಂತಹ ಕಾಂಗ್ರೆಸ್ ಪಕ್ಷವು ಚುನಾವಣೆ ಪೂರ್ವದಲ್ಲಿ ಕೊಟ್ಟ ಭರವಸೆಗಳಂತೆ ನಡೆದುಕೊಂಡು ಬಂದಿದೆ, ಪ್ರಸಕ್ತ ಚುನಾವಣೆಯ ಪ್ರಣಾಳಿಕೆಯಲ್ಲಿ ರಾಹುಲ್ ಗಾಂಧಿಯ ನೀಡಿದಂತಹ ಭರವಸೆಯಂತೆ ರೈತರ ಸಾಲಮನ್ನಾ ಹಾಗೂ 2 ಕೋಟಿ ಕುಟುಂಬಗಳಿಗೆ ತಿಂಗಳಿಗೆ 6 ಸಾವಿರ ರೂ. ಸಹಾಯಧನ ನೀಡಲಿದ್ದೇವೆ ಎಂದರು.

         ವಾರಾಣಾಸಿಯಲ್ಲಿ ಮೋದಿಗೆ ಸೋಲು:ಸುಳ್ಳು ಹೇಳಿಕೊಂಡು ತಿರುಗಾಡುತ್ತಿರುವ ಪ್ರಧಾನಿ ಮೋದಿಗೆ ವಾರಾಣಾಸಿಯಲ್ಲೇ ಸೋಲುವ ಸಾಧ್ಯತೆಗಳಿವೆ ಅವರ ವಿರುದ್ಧ ಮತ ಚಲಾಯಿಸಲು ಅಲ್ಲಿನ ಜನತೆಯೇ ತಿರ್ಮಾನಿಸಿದ್ದಾರೆ, ಲಾಲ್ ಕೃಷ್ಣ ಅದ್ವಾನಿಯರಂತಹ ಹಿರಿಯ ನಾಯಕರಿಗೆ ಸೂಕ್ತ ಸ್ಥಾನವಿಲ್ಲದೇ ಕುಳ್ಳಿರಿಸಿದ್ದು ದ್ವೇಷದ ರಾಜಕಾರಣಕ್ಕೆ ಮತ್ತೊಂದು ಹೆಸರು, ಇದಕ್ಕೆ ಪ್ರತೀಕಾರವಾಗಿ ನರೇಂದ್ರ ಮೋದಿಯವರನ್ನು ಸೋಲಿಸಲು ಬಿಜೆಪಿಯಲ್ಲೇ ಒಂದು ವ್ಯೂಹವೇ ಸಿದ್ದವಾಗಿದೆ ಎಂದರು.

         ವಿದೇಶದಲ್ಲಿ ನಮ್ಮನ್ನು ಟೀಕಿಸಿದ ಮೋದಿಯನ್ನು ಕೆಳಗಿಳಿಸಿ:ಮೋದಿಯವರಿಗೆ ಇನ್ನೊಬ್ಬರನ್ನು ಹೊಗಳುವ ಜಾಯಮಾನವಿಲ್ಲ, ಅದಕ್ಕಾಗಿ ವಿದೇಶಗಳಲ್ಲಿಯೂ ಕಾಂಗ್ರೆಸ್‍ನ್ನು ಟೀಕಿಸುತ್ತಿದ್ದಾರೆ, ನಮ್ಮ ತತ್ವ ಸಿದ್ಧಾಂತಗಳನ್ನು ವಿರೋಧಿಸುವುದು ರಾಜಕೀಯ ಚತುರತೆ ಆದರೆ ರಾಹುಲ್ ಗಾಂಧಿ ಬಗ್ಗೆ ಇಲ್ಲಸಲ್ಲದ ಮಾತುಗಳನ್ನು ಹೇಳಿಕೊಂಡು ತಿರುಗಾಡುತ್ತಿರುವ ನರೇಂದ್ರ ಮೋದಿಯವರಿಗೆ ಪ್ರಸಕ್ತ ಚುನಾವಣೆಯಲ್ಲಿ ದೇಶದ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.

       ಎರಡನೇ ಬಾರಿ ಅಧಿಕಾರ ಕೊಟ್ಟಿಲ್ಲ: ಕಾಂಗ್ರೇಸ್ಸೇತರ ಪ್ರಧಾನಿಗಳು ಎರಡನೇ ಬಾರಿ ಆಯ್ಕೆಯಾದ ಉದಾಹರಣೆಗಳಿಲ್ಲ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ವಾಕ್ ಸ್ವಾತಂತ್ರ್ಯ ಸೇರಿದಂತೆ ಇನ್ನಿತರ ಹಕ್ಕುಗಳನ್ನು ನೀಡುವ ಮೂಲಕ ತಪ್ಪು ಮಾಡಿದವರ ಹಿಡಿದು ಕೇಳುವಷ್ಟು ಶಕ್ತಿಯನ್ನು ಕಾಂಗ್ರೆಸ್ ದೇಶಕ್ಕೆ ಕೊಟ್ಟಿದೆ, ಆದರೆ ಇದನ್ನು ಮಾದ್ಯಮಗಳು ಕೂಡ ಪ್ರಚಾರ ಮಾಡಲು ಅದೇಕೋ ಹಿಂದೇಟು ಹಾಕುತ್ತಿವೆ ಎಂದರು.

        ಮೋದಿ ಎನ್ನುತ್ತಿರುವ ಯುವಕರಿಗೆ ತಿಳಿಹೇಳಿ: ಮಾಜಿ ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿ, ಮಾತೆತ್ತಿದರೇ ಮೋದಿ ಎನ್ನುತ್ತಿರುವ ಯುವಕರಿಗೆ ದೇಶದ ಇತಿಹಾಸ ಸಂಪೂರ್ಣವಾಗಿ ತಿಳಿದಿಲ್ಲ, ಕಾಂಗ್ರೆಸ್ ಕೊಡುಗೆಯನ್ನು ಹಿರಿಯರಾದ ಪಾಲಕರು ಹೊಸ ಮತದಾರರಿಗೆ ತಿಳಿ ಹೇಳುವಂತೆ ಮನವಿ ಮಾಡಿದ ಅವರು, ಸುಭದ್ರ ಆಡಳಿತಕ್ಕಾಗಿ ಕಾಂಗ್ರೆಸ್‍ನ್ನು ಬೆಂಬಲಿಸುವಂತೆ ಕರೆ ನೀಡಿದರು.

         ವೇದಿಕೆಯಲ್ಲಿ ಮುಖಂಡರಾದ ಎಸ್.ಆರ್.ಪಾಟೀಲ, ಬಸವರಾಜ ಸವಣೂರ, ಮಲ್ಲಿಕಾರ್ಜುನ ಕರಲಿಂಗಪ್ಪನವರ, ದಾನಪ್ಪ ಚೂರಿ, ಪರಮೇಶಗೌಡ ತೆವರಿ, ಚನ್ನಬಸಪ್ಪ ಹುಲ್ಲತ್ತಿ, ಕರಬಸಪ್ಪ ನಾಯ್ಕರ, ಶಂಕರಗೌಡ ಪಾಟೀಲ, ಬೀರಪ್ಪ ಬಣಕಾರ, ಪ್ರೇಮ ಪಾಟೀಲ, ಸವಿತಾ ಸುತ್ತಕೋಟಿ, ಶಂಭನಗೌಡ ಪಾಟೀಲ, ದೇವರಾಜ ಬುಡ್ಡನಗೌಡ್ರ, ಖಾದರಸಾಬ್ ದೊಡ್ಮನಿ, ಈರಣ್ಣ ಮಲ್ಲಾಡದ, ಚನ್ನಮ್ಮ ಎಮ್ಮೇರ, ಜಗದೀಶ ಪಾಟೀಲ, ಡಿ.ಎಚ್.ಬುಡ್ಡನಗೌಡ್ರ, ಪ್ರಧಾನ ಕಾರ್ಯದರ್ಶಿ ರಮೇಶ ಸುತ್ತಕೋಟಿ ಕಾರ್ಯಕ್ರಮ ನಿರ್ವಹಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link