ಮೋದಿಗೆ ಮಾಧ್ಯಮಗಳ ಭಯ : ಎಂ ಎಂ ಸಿಂಗ್

ನವದೆಹಲಿ:
    ಸದಾ ಮೌನಿಯಂತೆ ಕಾಣುವಂತತಹ ಮನಮೋಹನರು ಈಗ ಮತ್ತೊಮ್ಮೆ ಸುದ್ದಿಗೆ ಬಂದಿದ್ದಾರೆ ಏಕೆಂದರೆ ತಮ್ಮ ಆಡಳಿತಾವಧಿಯಲ್ಲಿ ಇದ್ದ ಮಾಧ್ಯಮ ಸ್ವಾತಂತ್ರ್ಯದ ಬಗ್ಗೆ ಮಾತನಾಡಿದ್ದಾರೆ. ತಾವು ಎಂದು ಮಾಧ್ಯಮಗಳ ಮುಂದೆ ಮಾತನಾಡಲು ಹೆದರಿದಿಲ್ಲ ಎಂದು ಹೇಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ. 
     ಸಮಾರಂಭ ಒಂದರಲ್ಲಿ ಮಾತನಾಡಿದ ಮನಮೋಹನ್ ಅವರು ತಾವು ಪರಿಸ್ತಿತಿ ಎಂತಹುದೇ ಇರಲಿ ತಮ್ಮ ಸರ್ಕಾರವಾಗಲಿ ತಾವಾಗಲಿ ಮಾಧ್ಯಮಗಳ ಮುಂದೆ ಮಾತನಾಡಲು ಹೆದರಿರಲಿಲ್ಲ ಹೀಗಿರುವಾಗ ಮೋದಿ ಸರ್ಕಾರ ಮಾಧ್ಯಮಗಳ ಮುಂದೆ ಮಾತನಾಡಲು ಹೆದರುತ್ತಿರುವ ಕಾರಣ ನನಗೆ ಸೋಜಿಗ ತರುತ್ತದೆ ಮತ್ತು ಮೋದಿಯವರು ಮಾಧ್ಯಮಗಳಿಗೆ ಹೆದರುತ್ತಾರೆ ಎಂಬ ಸಂಶಯ ಮೂಡುತ್ತಿದೆ ಎಂದು ಹೇಳಿದ್ದಾರೆ. 
      ಭಾರತ ಮುಂಬರುವ ದಿನಗಳಲ್ಲಿ ಜಾಗತಿಕವಾಗಿ ಸಶಕ್ತ  ರಾಷ್ಟ್ರವಾಗಿ ಬೆಳೆಯುವ ನಿರೀಕ್ಷೆಯಿದ್ದು ಪ್ರಧಾನಿಗಳೆ ಹೀಗೆ ಹೆದರಿದರೆ ಹೇಗೆ ಎಂದು ಸಿಂಗ್ ಪ್ರಶ್ನಿಸಿದ್ದಾರೆ. ಅಲ್ಲದೆ ವಿದೇಶಿ ಪ್ರವಾಸಗಳನ್ನು ಮುಗಿಸಿ ಬಂದ ನಂತರ ಮೋದಿ ಮಾಧ್ಯಮಗಳಿಂದ ಕಾಣೆಯಾಗಿಬಿಡುತ್ತಾರೆ ಆದರೆ ನಮ್ಮ ಕಾಲಘಟ್ಟದಲ್ಲಿ ನಾನು ಹಲವು ಬಾರಿ ವಿದೇಶದಿಂದ ಬಂದ ನಂತರ ನಾನೇ ಹಲವು ಬಾರಿ ಸುದ್ದಿಗೋಷ್ಠಿಗಳನ್ನು ನಡೆಸಿದ್ದೆ ಎಂದು ಹೇಳಿದ್ದಾರೆ. 
 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link