ಹಾವೇರಿ:
ಕಪ್ಪು ಹಣ ತರತೇನಿ ಎಂದ್ರಿ, ಆ ಹಣವನ್ನು ದೇಶದ ಬಡವರ ಖಾತೆಗೆ ಹಾಕತ್ತೇನಿ ಎಂದ್ರಿ, ಅದರ ಬಗ್ಗೆ ಮಾತನಾಡಿ ಮೋದಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ ಮೋದಿ ಜವಾಬ್ ದೋ, ಬಿಜೆಪಿ ಜವಾಬ್ ದೋ ಎಂದು ಪ್ರಧಾನಿಯನ್ನು ತರಾಟೆ ತೆಗೆದುಕೊಂಡರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಅವರು, 2014 ರಲ್ಲಿ ಮೋದಿ ಚುನಾವಣೆ ರ್ಯಾಲಿಯಲ್ಲಿ ಮಾತನಾಡುವಾಗ ಹಲವಾರು ಭರವಸೆ ಮಾತುಗಳನ್ನಾಡಿದ್ದರು. ಆಗ ನೀಡಿದ್ದ ಭರವಸೆಯ ಮಾತುಗಳ ಬಗ್ಗೆ ಪ್ರಧಾನಮಂತ್ರಿಗಳು ಚಕಾರ ಏತ್ತುತ್ತಿಲ್ಲ. ಅದಕ್ಕಾಗಿ ಪ್ರಧಾನಿಗೆ ಕಾಂಗ್ರೆಸ್ ಆರು ಪ್ರಶ್ನೆಗಳು ಕೇಳುತ್ತಿದೆ, ಸಾಧ್ಯವಾದರೆ,
ಮೋದಿ ಅವರು ದೇಶದ ಕಪ್ಪು ಹಣದ ಲೆಕ್ಕ ನೀಡಬೇಕು? ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹದಾಯಿ ಸಮಸ್ಯೆ ಬಗೆಹರಿಸುವೆ ಎಂದಿದ್ದರು ಅದರ ಬಗ್ಗೆ ಉತ್ತರಿಸಬೇಕು? ಉತ್ತರ ಪ್ರದೇಶ ಚುನಾವಣೆಯಲ್ಲಿ ಸಾಲ ಮನ್ನಾದ ವಿಚಾರಯನ್ನು ಸ್ವತಃ ಪ್ರಧಾನಿ ಪ್ರಸ್ತಾಪಿಸಿದ್ದರು ಅದು ಏನಾಯಿತು? ನಿರುದ್ಯೋಗ ಸಮಸ್ಯೆ ನಿವಾರಣೆಗೆ ವಾರ್ಷಿಕ 2 ಕೋಟಿ ಉದ್ಯೋಗ ಸೃಷ್ಠಿಸುವೆ ಎಂದಿದ್ದ ಪ್ರಧಾನಿ ಅವರು, ತಮ್ಮ ಅಧಿಕಾರ ಅವಧಿಯಲ್ಲಿ 1.7 ಕೋಟಿ ಉದ್ಯೋಗಕ್ಕೆ ಕತ್ತರಿ ಹಾಕಿದ್ದಾರೆ ಇದರ ಬಗ್ಗೆ ದೇಶ ಯುವಕರಿಗೆ ತಿಳಿಸಬೇಕು? ವ್ಯಾಪಂ ಸ್ಕ್ಯಾಂ ಹೋರಬಿಳುತ್ತಿದ್ದಂತೆ ಅದರ ತನಿಕೆಯಲ್ಲಿದ್ದ ಅಷ್ಟು ಜನರು ಬೇರೆ ಕಾರಣದಿಂದ ಮೃತ ಪಟ್ಟಿದ್ದಾರೆ ಇದರ ಬಗ್ಗೆ ಚುನಾವಣೆಯ ಪ್ರಚಾರದಲ್ಲಿ ಮೋದಿ ಅವರು ಉತ್ತರಿಸುವಂತೆ ಎಚ್.ಕೆ.ಪಾಟೀಲ ಸವಾಲು ಹಾಕಿದರು.