ಹರಪನಹಳ್ಳಿ
ದೇಶಾಧ್ಯಂತ ಕಾರ್ಮಿಕ ಸಂಘಟನೆಗಳು ನಡೆಸುತ್ತಿರುವ ಮುಷ್ಕರಕ್ಕೆ ಬೆಂಬಲಿಸಿ ವಿವಿಧ ವಿದ್ಯಾರ್ಥಿ ಸಂಘಟನೆಗಳು ಬುಧುವಾರ ಪ್ರತಿಭಟನೆ ನಡೆಸಿದರು.
ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್, ಅಖಿಲ ಭಾರತ ಯುವಜನ ಫೆಡರೇಷನ್ ಸಂಘಟನೆಗಳ ಕಾರ್ಯಕರ್ತರು ವಿದ್ಯಾರ್ಥಿ, ಯುವಜನರ ಶಿಕ್ಷಣ ಮತ್ತು ಉದ್ಯೋಗ ಸಮಸ್ಯೆಗಳನ್ನು ಪರಿಹರಿಸುವಂತೆ ಒತ್ತಾಯಿಸಿ ತಹಸೀಲ್ದಾರ ರವಿ ಅವರ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಎಸ್‍ಎಫ್ ರಾಷ್ಟ್ರೀಯ ಮಂಡಳಿ ಸದಸ್ಯ ಎಚ್.ಎಂ.ಸಂತೋಷ ಮಾತನಾಡಿ, ಕೇಂದ್ರ ಸರ್ಕಾರ ಶಿಕ್ಷಣ ವ್ಯವಸ್ಥೆಯಲ್ಲಿ ಹಸ್ತಕ್ಷೇಪ ನಡೆಸುವ ಮೂಲಕ ವ್ಯವಸ್ಥೆ ಹಾಳು ಮಾಡುತ್ತಿದೆ ಎಂದು ದೂರಿದರು.
ಶಿಕ್ಷಣದಲ್ಲಿ ಖಾಸಗೀಕರಣ ಮತ್ತು ಕೇಸರೀಕರಣ ನೀತಿಯನ್ನು ಕೈಬಿಡಬೇಕು, ಶಿಕ್ಷಣದ ಮೇಲೆ ದಾಳಿಮಾಡುವ ಮಸೂದೆ ರದ್ದುಮಾಡಬೇಕು, ಶಿಕ್ಷಣಕ್ಕೆ ಜಿ.ಡಿ.ಪಿ ಯ ಶೇ10 ಕೊಡಬೇಕು, ವಿದ್ಯಾರ್ಥಿ ವೇತನ ಹೆಚ್ಚಳಗೊಳಿಸಬೇಕು, *ಸರಕಾರಿ ಶಾಲೆಗಳ ವಿಲೀನ ನೀತಿ ಕೈಬಿಡಬೇಕು, ವಿದ್ಯಾರ್ಥಿ ಸಂಖ್ಯೆಗಳ ಅನುಗುಣವಾಗಿ ವಸತಿನಿಲಯ ಸೌಲಭ್ಯ ಒದಗಿಸಬೇಕು, ನೂತನ ಉದ್ಯೋಗ ಸೃಷ್ಠಿಗೆ ಕ್ರಮ ಕೈಗೊಳ್ಳಬೇಕು, ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಪ್ರಧಾನಿ ಮೋದಿಯವರ ಅಣಕು ಶವಯಾತ್ರೆ ನೆಡೆಸಿ ಇಜಾರಿ ಸಿರಸಪ್ಪ ವೃತ್ತದಲ್ಲಿ ಪ್ರತಿಕೃತಿ ಧಹಿಸಿದರು.
ವಿದ್ಯಾರ್ಥಿ ಮುಖಂಡರಾದ ಎಚ್.ಎಂ.ಸಂತೋಷ, ರಮೇಶ್‍ನಾಯ್ಕ, ಕೊಟ್ರಯ್ಯ, ನಾಗರಾಜ್, ವಿನಯಕುಮಾರ, ಸುರೇಶ್, ಸಿಪಿಐ ನ ಗುಡಿಹಳ್ಳಿ ಹಾಲೇಶ್, ಇದ್ಲಿರಾಮಪ್ಪ, ಸಂದೇರ ಪರಶುರಾಮ್, ಪಿ.ಬಸವರಾಜ್, ಜಿ.ಬರ್ಮಪ್ಪ ಇತರರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
