ಸಸಿಗಳನ್ನು ನೆಡದೆ ನರೇಗಾ ಯೋಜನೆಯಲ್ಲಿ ಲಕ್ಷಾಂತರ ರೂ. ಡ್ರಾ..!

ಮಿಡಿಗೇಶಿ

     ಬೇಡತ್ತೂರು ಗ್ರಾಮದ ವ್ಯಕ್ತಿಯೋರ್ವ ಜಮೀನಿನ ಮಾಲೀಕನಿಗೆ ತಿಳಿಯದೆ, ಆತನ ಜಮೀನಿನಲ್ಲಿ ಹುಣಸೆ ಗಿಡಗಳನ್ನು ನೆಟ್ಟಿರುವಂತೆ ದಾಖಲೆ ಸೃಷ್ಟಿಸಿ, ಹತ್ತೂವರೆ ಸಾವಿರ ರೂ. ಹಣ ಡ್ರಾ ಮಾಡಿಕೊಂಡಿರುತ್ತಾನೆ. ನಂತರ ವಿಷಯ ಬಯಲಾಗಿದ್ದು ರಾಜೀ ಪಂಚಾಯಿತಿ ನಡೆಸಿ, ದಂಡ ರೂಪವಾಗಿ ಬೇಡತ್ತೂರಿನ ಶ್ರೀ ಚೆನ್ನಿಗರಾಯಸ್ವಾಮಿ ದೇವಾಲಯಕ್ಕೆ ಐದು ಸಾವಿರ ರೂ.ಗಳನ್ನು ಕಳೆದ ನಾಲ್ಕೈದು ದಿನಗಳ ಹಿಂದೆ ನೀಡಲಾಗಿದೆ.

     ಇದೇ ರೀತಿ 2018-19 ನೇ ಸಾಲಿನಲ್ಲಿ ಈರಣ್ಣ ಬಿನ್ ಜಡಿಯಪ್ಪ, ಚಿಕ್ಕಣ್ಣ ಬಿನ್ ಗಾಳಪ್ಪ ಸಹ ಹುಣಸೆ ಗಿಡಗಳ್ನನೇ ನೆಟ್ಟಿರುವುದಿಲ್ಲ. ಅಲ್ಲದೆ ಸದರಿ ಚಿಕ್ಕಣ್ಣ ಬಿನ್ ಗಾಳಪ್ಪನವರ ಹೆಸರಿನಲ್ಲಿ ಖಾತೆಯೇ ಇರುವುದಿಲ್ಲ. ನಾಗರತ್ನಮ್ಮ ಕೋಂ ಶಂಕರಪ್ಪ, ದಾಸನ ರಾಳುಗುಟ್ಟೆ ಜಮೀನಿನಲ್ಲಿ ನೆಟ್ಟಿರುವ ಗಿಡಗಳಿಗೆ ಹಣ ಡ್ರಾ ಆಗಿರುತ್ತದೆ. ಸಂಜೀವರೆಡ್ಡಿ ಎಂಬುವರ ಜಮೀನಿನಲ್ಲಿ ನೆಟ್ಟಿರುವ ಗಿಡಗಳಿಗೆ ಎರಡು ಬಾರಿ ಬಿಲ್ ಆಗಿರುವ ಆರೋಪವಿದೆ. ಈ ಭಾಗದ ಜಮೀನುಗಳ ಲೆಕ್ಕದಲ್ಲಿ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆಗಳೆರಡರಲ್ಲೂ ಹಣ ಡ್ರಾ ಮಾಡಿಕೊಂಡಿರುವ ಆರೋಪಗಳು ಇವೆ.

    ಇದೇ ಗ್ರಾಮದ ಸರ್ವೆ ನಂಬರು 144 ತಿಮ್ಮಯ್ಯ ಬಿನ್ ಬಜ್ಜಪ್ಪನವರು 2018-19 ನೇ ಸಾಲಿನಲ್ಲಿ ನೆಟ್ಟಿರುವ ಹುಣಸೆ ಗಿಡಗಳಲ್ಲಿ ಹುಣಸೆ ಪೀಚು ಕಾಣಿಸಿಕೊಳ್ಳುತ್ತಿದೆ. ಸದರಿ ಹುಣಸೆ ಗಿಡಗಳನ್ನು ಈ ಗ್ರಾಮದ ಕೆಲವು ರೈತರು ಸಂಬಂಧಿಸಿದ ಎಂಜಿನಿಯರ್, ಕಂಪ್ಯೂಟರ್ ಆಪರೇಟರ್, ನಕಲಿ ಫಲಾನುಭವಿ ರೈತರು ಒಟ್ಟಾರೆ ಸೇರಿಕೊಂಡು, ಕೇಂದ್ರ ಸರ್ಕಾರದ ಹಣವನ್ನು ನುಂಗಿ ನೀರು ಕುಡಿಯುತ್ತಿರುವ ಬಗ್ಗೆ ಪ್ರಜಾ ಪ್ರಗತಿ ಕನ್ನಡ ದಿನ ಪತ್ರಿಕೆಯಲ್ಲಿ ಬಹಳಷ್ಟು ಸಾರಿ ಚಿತ್ರ ಸಮೇತ ವರದಿ ಪ್ರಕಟವಾಗಿದೆ.

     ಆದರೂ ಸಹ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಣ್ಣಿದ್ದೂ ಕುರುಡರಂತೆ ಜಾಣ ಮೌನ ವಹಿಸಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಪ್ರಜ್ಞಾವಂತ ನಾಗರಿಕರು ಎ.ಸಿ.ಬಿ, ಲೋಕಾಯುಕ್ತ ಹಾಗೂ ಸಿ.ಸಿ.ಬಿ ನ್ಯಾಯಾಲಯಗಳ ಮೊರೆ ಹೋಗುವುದಾಗಿ ಈ ಮೂಲಕ ಸಂಬಂಧಿಸಿದ ಅರಣ್ಯ ಇಲಾಖೆಗೆ ಎಚ್ಚರಿಕೆ ನೀಡಿರುತ್ತಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap